ಈಚಲ ಮರದಡಿ

ಈಚಲ ಮರದಡಿ ಈಶ್ವರ ಭಟ್ಟರು ಧೋತರ ಹರಡಿ ಕುಳಿತೇ ಬಿಟ್ಟರು ಆಕಡೆ ನೋಡಿ ಈಕಡೆ ನೋಡಿ ಮೊಗೆದೇ ಬಿಟ್ಟರು ಕುಡಿದೇ ಬಿಟ್ಟರು ಏನದು ಗಡಿಗೆ ಏನದರೊಳಗೆ ಓಹೋ ಹುಳ್ಳಗೆ ತಿಳಿಯಿತು ಮಜ್ಜಿಗೆ ನೋಡಿದರುಂಟು ಕೇಳಿದರುಂಟು...

ಹೂವುಗಳು

ಕಿಕ್ಕಿರಿದಿದ್ದವು ಮರದಲ್ಲಿ ಹೂವುಗಳು ಇಡೀ ಮರವು ಒಂದು ಹೂವು ಇಡೀ ಹೂದೋಟವು ಒಂದು ಹೂಗೊಂಚಲು ಇಡೀ ಭೂಮಂಡಲವು ಒಂದು ಹೂ ಬುಟ್ಟಿಯು ಹೂಭಾರಕ್ಕೆ ಪರಿಮಳಕೆ ಪಕ್ಕಾಗಿ ಹೂವಾಡಗಿತ್ತಿಯು ತೂಗಿರಲು- ನೋಡು... ಬ... ಎಂದವನ ಕರೆದೆ...

ನೆನಪು

ಕಾದಿದ್ದೀಯಾ ನೀನು ಯಾರಾದರೂ ಬಂದಾರೆಂದು, ಕಲ್ಲೊಣಗಣ ಕಿಚ್ಚು ಉರಿಸುವವರು, ಅಸಾಮಾನ್ಯರು, ಶಿಲೆಗೆ ಜೀವ ತರುವ ಅಪರೂಪದವರು, ನಿನ್ನೊಳಗಿನ ಆಳ ಮುಳುಗಿ ತೋರುವವರು ಬಂದಾರೆಂದು. ಸಂಜೆಯ ಇಳಿ ಬಿಸಿಲು ದಪ್ಪಹೊತ್ತಗೆಗಳ ಚಿನ್ನದಕ್ಷರಗಳಿಗೆ ಹೊಳಪು ತಂದಿದೆ. ನೀನಲೆದ...

ಹಗಲುಗನಸುಗಾರ

ಸೊಗಸುಗಾರ ಸರದಾರ ಹಗಲುಗನಸುಗಾರ ಎಲ್ಲರಂತಲ್ಲ ಅವನು ಭಾರಿ ಮೋಜುಗಾರ ಗಾಳಿಕುದುರಿ ಏರುತಾನೆ ಏಳು ಕಡಲು ಮೀರುತಾನೆ ಇವನ ಕನಸಿಗೆಷ್ಟೊ ದಾರ ಸಾಗಿದಷ್ಟೂ ದೂರ ಗಾಳಿಗಿರಣಿ ಮಂತ್ರಭರಣಿ ತಲೆಗೆ ಕವಚಿ ಬೋಗುಣಿ ಸೆಣಸಿದರೂ ಎಲ್ಲರೊಡನೆ ಗೆಲುವನೀತನೊಬ್ಬನೆ...

ಹೂವು

ಮರವನೇರಿ ತುದಿಯಲ್ಲಿ ಕುಳಿತಿದೆ ಹೂವು ಪುಟ್ಟ ಹುಡುಗಿಯರೆ... ಕಣ್ಣರಳಿಸಿ ನೋಡಿ ಹೂವಾಡಗಿತ್ತಿಯರೆ... ಹೂವಿನಂದವ ನೋಡಿ ಹಿಗ್ಗಿ ಹಾಡಿ ಏ... ಹೂವೆ ಹೇಗೆ ಕಾಣುವುದೊ ಅಲ್ಲಿಂದ ಈ ಜಗತ್ತು? ನೆಲದಲ್ಲಿರುವೆ ನಾನು ನನಗೆ ಗೊತ್ತಾಗದು ಹಾಂ...

ಒಬ್ಬಂಟಿ

ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ. ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ, ನನಗೋ ಅವು ಬಹು...

ಎಂದಿನಂತಲ್ಲ

ಎಂದಿನಂತಲ್ಲ ಈ ದಿನ ನನ್ನ ಪ್ರೀತಿಯ ಮೊದಲ ದಿನ ಹೋಗು ಮನಸೆ ಆಕಾಶಕೆ ಸಾಗು ನೀ ಬಹುದೂರಕೆ ಯಾರ ಹಿಡಿತಕು ಸಿಲುಕದಲ್ಲಿ ನನ್ನೊಲವಿನ ಸಂಗದಲ್ಲಿ ಬೀಸು ಗಾಳಿಯೆ ಕಾಡುಗಳ ಅಪರೂಪದ ನಾಡುಗಳ ಏರು ಬೆಟ್ಟವೆ...

ಗಂಡು

ಇಬ್ಬನಿಯಲಿ ತೊಯ್ದಂತಿರುವ ಆ ಕಣ್ಣುಗಳನ್ನೂ ಉಕ್ಕಿನಂತ ಗಡುಸಾಗಿರುವ ಆ ತೋಳುಗಳನ್ನೂ ಹೂವಿನಷ್ಟೇ ಮೃದುವಾದ ಅವನಾತ್ಮವನ್ನೂ ಮುಟ್ಟಿದೆ ದೇವರೇ... ಅದು ಅಹಂಕಾರದ ಮೊಟ್ಟೆ! ಅಂತೆಯೆ ಉರಿಗಣ್ಣಲಿ ನಿಲಿಸಿ ಹದವಾಗಿ ಬೇಯಿಸಿದೆ ಚಿಪ್ಪೊಡೆದು ಹೊಳೆಯಿತು ಮಿಂಚು ಹಣೆಯಲ್ಲಿ...

ಚಿಕ್ಕಂದಿನಲ್ಲಿ ಒಮ್ಮೆ

ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು. ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ. ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ. ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು. ಗುಟ್ಟು ಬಿಟ್ಟುಕೊಟ್ಟಿತು ಕೋಣೆ...

ಬೇಲಿ ಮತ್ತು ಹೊಲ

ಬೇಲಿಯೆದ್ದು ಹೊಲವ ಮೆದ್ದು ಹೋಯಿತಂತೆ ಕಂಡಿರ? ಗೂಳಿಯೆತ್ತು ಥರವೆ ಇತ್ತು ಮೆಲ್ಲುತಿತ್ತು ನೋಡಿದೆ ರಾತ್ರಿಯೆಲ್ಲ ತಿಂದಿತಲ್ಲ ಸದ್ದು ನಿಮಗೆ ಕೇಳಿತೆ? ಹೊಡೆದು ಡುರುಕಿ ಮಣ್ಣು ಕೆದಕಿ ಕೂಗುತ್ತಿತ್ತು ಕೇಳಿದೆ ಬತ್ತ ಹುರುಳಿ ಕಬ್ಬು ಕದಳಿ...