ಗಳಿಗೆಬಟ್ಟಲ ತಿರುವುಗಳಲ್ಲಿ – ೨೮

ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೨೩

ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ.

ಗಳಿಗೆಬಟ್ಟಲ ತಿರುವುಗಳಲ್ಲಿ – ೧೯

ಹಸಿವು ಅತೃಪ್ತಿಯ ಸಂಕೇತ ರೊಟ್ಟಿ ತೃಪ್ತಿಯಳೆವ ಸಾಧನ ಸಂಕೇತಕ್ಕೂ ಸಾಧನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಹಸಿವು ರೊಟ್ಟಿಯಾಗುವುದಿಲ್ಲ ರೊಟ್ಟಿ ಹಸಿವೆಯಾಗುವುದಿಲ್ಲ.