ನಾನು ನಾನು ಎಂದರೇನು ?
ಸ್ವಲ್ಪದರಲಿ ಹೇಳಲೇನು ?
ನಾನು ತಿಳಿದ ಹಾಗೆ ನಾನು
ನಾನು ನನ್ನ ಕಾಮಧೇನು.
ನಾನು ಎನಲು ಎಲ್ಲರಿಂದ
ಬೇರೆಯಾದ ಮೈಯ ಅಂದ
ಬೇರೆ ಹೆಸರಿನಂದ ಚೆಂದ
ಇಷ್ಟೆ ತಿಳಿವುದೆ ಬಿಸವಂದ ?
ನಾನು ಎಂಬ ಇಂಥ ಹೊಳೆಯ
ನಾನು ಈಸಿ ಬಲ್ಲೆ ಗೆಳೆಯ
ನಾನು ಎಂಬ ಕಡಲಿನಲ್ಲಿ
ಮುಳುಗಲಿಲ್ಲ. ಧುಮುಕುತಲ್ಲಿ
ರತುನದೊಡನೆ ಏಳುತಿಹರು
ಮುಳುಗಿದವರು ಹೇಳುತಿಹರು
ನಾನು ವಿಶ್ವ ಒಂದೆ ಎಂದು
ಇಂತಿದೆನಗೆ ತಿಳಿವುದೆ
*****








