ಮೂರುಸಾವಿರ ಮಠದ ಆರು ಮೀರಿದ ಸಾಮಿ
ಮಾರಾಯ ಹುಚ್ಚಯ್ಯ ಮಾತುಕೇಳ
ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು
ದೊಡ್ಡ ಕಂಬದ ಸಾಮಿ ಮಾತು ಕೇಳ
ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ
ಮನಿಮನಿಯ ಬಾಗಿಲಕ ದೀಪ ತಾರ
ನಗಿಮಾರಿ ಗರತೇರು ನಗುವಿನಾರತಿ ತಂದ್ರು
ಮನೆಯ ಅಂಗಳ ತುಂಬ ಹೂವ ತೂರ
ಮನಿಗೆ ಮಕ್ಕಳು ಚಂದ ಎದಿಗೆ ಲಿಂಗವು ಚಂದ
ನಾಡ ಬಾಗಿಲ ಮುಂದ ನೀನು ಚಂದ
ನೀನಿಲ್ಲದಿರಲ್ಹ್ಯಾಂಗ ಮಂತ್ರ ಮೂರುತಿ ಸಾಮಿ
ಸೂರ್ಯ ಕಪ್ಪುರ ದೀಪ ಚಂದನೋಡ
ಆನಿ ಮಠದಾ ಸಾಮಿ ಆರೂಢ ಗುರುಜ್ಞಾನಿ
ತೇರು ನೋಡ ಮುಗಿಲ ತೇರು ನೋಡ
ಸಾಮಿ ಸಾಮಿಯ ಸಾಮಿ ಕಾಮ ಸುಟ್ಟಿಹ ನೇಮಿ
ಮುಕ್ತಿಮಂದಿರ ಪ್ರೇಮಿ ದಾರಿ ನೀಡ
*****