ಮುನ್ನುಡಿ ರಾಮನನ್ನರಿತವರು ಶಬರಿಯನು ಅರಿತಿಹರು, ಮಾತು ಶಬರಿಯದಲ್ಲ, ಬರವೊನಲಿದಾಕಯದು. ೧ ಬೀಡ ಬಳಿಯೊಳು ಕುಳಿತು: “ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ, ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ, ನಾನಾರು..? ಬಂದೆನೆಲ್ಲಿಂದಿಲ್ಲಿ..? ...

ಅಮ್ಮ ಎಂದು ಯಾರನು ಕೂಗಲಿ? ಅಮ್ಮ ಎಂದು ಯಾರ ತಬ್ಬಿಕೊಳಲಿ| ನಿನ್ನ ಪ್ರೀತಿ ಮಮತೆ ಸಿಗದೀಜಗದಿ ನಾನಾದೆನಿಂದು ತಬ್ಬಲಿ|| ಅಮ್ಮಾ ನನ್ನ ಆಸೆಗಳನ್ನೆಲ್ಲಾ ಯಾರಬಳಿ ಹೇಳಲಿ ಅಮ್ಮ ನನ್ನ ಬೇಕು ಬೇಡಗಳ ಹೇಗೆ ತಾನೆ ತಿಳಿಯಲಿ| ಅಮ್ಮಾ ನನ್ನ ಸರಿ ತಪ್ಪುಗಳ ಹ...

ಬೆದೆ ಹತ್ತಿದ ಎದೆ ಹಾಡಿದಾಗ ಸದೆ ಬಡಿಯುವ ಸಿಂಹಾಸನವೇ ಸಾವ ಸಂಭ್ರಮದಲ್ಲಿ ನೋವು ನಿವಾರಿಸುವ ಜೋಳವಾಳಿಯೇ. ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್ ದರ್‍ಶನ ವಿರಾಟಪ...

ಕನ್ನಡಪರ ಮತ್ತು ಜನಪರ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ವಿಪರ್ಯಾಸವಾದರೂ ಇವತ್ತು ಅನಿವಾರ್ಯವಾದ ವಿಚಾರವಾಗಿದೆ. ಕಾರಣ, ನೂರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯವಾದ ಇದು ಅಕ್ಷರಗಳಿಂದ ಪ್ರಕಟವಾದ ಇತಿಹಾಸ...

ಪುಟ್ಟನು ಶಾಲೆಯಿಂದ ಮನೆಗೆ ಓಡಿ ಬಂದ ಪುಸ್ತಕದ ಚೀಲವನಿಟ್ಟು ಹಿಡಿದನು ಕ್ರಿಕೆಟ್ಟು ಬ್ಯಾಟು ಕಿಟ್ಟುವನ್ನು ಕೂಗಿ ಕರೆದ ಮೈದಾನದ ಕಡೆಗೆ ನಡೆದ ಮನದಣಿ ಆಟವನಾಡಿ ಮತ್ತೆ ಇಬ್ಬರು ಜೊತೆಗೂಡಿ ಬೀದಿಯಲ್ಲಿ ಬರುತಿರಲು ಹರಡಿತ್ತು ನಸುಗತ್ತಲು ಬೀದಿಯ ನಾಯಿ...

ಮಣ್ಣು ಹೊನ್ನಿನ ಗೂಡು ಮಣ್ಣು ಜೀವದ ಸೂಡು ಮಣ್ಣು ಹೆಣ್ಣಿನ ಬೀಡು ಮಣ್ಣು ಗಂಡಿನ ನಾಡು. ಮಣ್ಣು ಪಾವನಮೆದು ತುಳಸಿ ಮೈತ್ರಿಕೆಯಾಯ್ತು ಬಣ್ಣ ಬಣ್ಣದ ಮಣ್ಣು ಮೈಗೆ ಪೂಸುವ ಗಂಧ. ಉಪ್ಪು ಸಿಹಿಕಾರಗಳ ಷಡ್ರಸಾಹಾರಗಳ ಜೀವಕೇ ತವರಿದುವು ಮಣ್ಣು ಸಂಜೀವನವು. ...

ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗ...

ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು ಮಾಡು ಹಾರಿತು ಗೋಡೆ ಬಿದ್ದಿತು ಮನೆಕಟ್ಟು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು ಬಟ್ಟೆ ಹರಿಯಿತು ಬೆರಳು ಮುರಿಯಿತು ಚೂರು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದ...

ಜರ್‍ಮನಿಯ ಕೃಷಿ ವಿಜ್ಞಾನಿಗಳು ಕೃಷಿಲೋಕಕ್ಕೆ ಏನಾದರೊಂದು ಕೊಡುಗೆ ಕೊಡುತ್ತಲೇ ಇರುತ್ತಾರೆ. ಟೊಮ್ಯಾಟೋ ಗಿಡದ ಒಂದು ಹೊಸ ತಳಿಯನ್ನೇ ಕಂಡುಹಿಡಿದ ವಿಜ್ಞಾನಿಗಳು ಫಲವತ್ತಾದ ಭೂಮಿಯಲ್ಲಿ ಪ್ರಯೋಗಿಸಿದರು. ಆಗ ಈ ಗಿಡದಲ್ಲಿ ಕಲ್ಲಂಗಡಿ ಗಾತ್ರದ ಅಂದರೆ ಸ...

1...1011121314...16

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...