ಬರಿ ಸುಳ್ಳಲ್ಲವೇ? ಕೃಷಿ ತಜ್ಞರೊರೆಯುವುದು?

ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು - ವಿಜ್ಞಾನೇಶ್ವರಾ *****

ನಾವು ಗೆಳೆಯರು ಹೂವು ಹಣ್ಣಿಗೆ

ನಾವು ಗೆಳೆಯರು ಹೂವು ಹಣ್ಣಿಗೆ ಚಿಗುರು ಕಾಯಿಗೆ ಚಲುವಿಗೆ ನಾವು ಹೊಸಯುಗ ನಗೆಯ ಹುಡುಗರು ಕಲ್ಲು ಮುಳ್ಳಿಗೆ ಕಾಡಿಗೆ ಗಿಡದ ಹಕ್ಕಿಯ ಕಂಠ ಕಂಠಕೆ ಸಿಹಿಯ ಸಕ್ಕರೆ ಹಂಚುವಾ ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ...

ನಿಗೂಢ

ಏನಿದು? ಮಾಯೆ ಸೃಷ್ಠಿಯ ಛಾಯೆ ಎಲ್ಲಿಂದ ಎಲ್ಲಿಯವರೆಗೆ ಹರಡಿದೆ ಜಗತ್ತಿನ ಛಾಯೆ ಯಾರಾತ? ಎಲ್ಲಿಡಗಿಹನಾತ? ಸೃಷ್ಠಿಯ ರಹಸ್ಯವ ತಿಳಿಸದಾತ? ಕತ್ತೆತ್ತಿದರೆ ನೀಲಾಕಾಶ ಅಸಂಖ್ಯ ತಾರೆಗಳ ಇತಿಹಾಸ ಸೂರ್ಯ ಚಂದ್ರ ಗ್ರಹಗಳ ಪರಿವೇಷ ನದಿ ಸಾಗರ...
ವಚನ ವಿಚಾರ – ಯಾರೂ ಇಲ್ಲವೆಂದು

ವಚನ ವಿಚಾರ – ಯಾರೂ ಇಲ್ಲವೆಂದು

ಆರೂ ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ ಏನ ಮಾಡಿದಡೂ ಆನಂಜುವಳಲ್ಲ ತರಗೆಲೆಯ ಮೆಲಿದು ಆನಿಹೆನು ಸರಿಯ ಮೇಲೊರಗಿ ಆನಿಹೆನು ಚೆನ್ನಮಲ್ಲಿಕಾರ್ಜುನಯ್ಯಾ ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು [ಆರೂ-ಯಾರೂ, ಆಳಿಗೊಳಲುಬೇಡ-ದುಃಖಗೊಳ್ಳಬೇಡ, ಆನಂಜುವಳಲ್ಲ-ನಾನು ಹೆದರುವವಳಲ್ಲ, ಆನಿಹೆನು-ನಾನಿರುವೆನು,...

ಬೀಳ್ದ ಕುಸುಮ

ಆವದೇವನ ಬನವೋ! ದೇವದೇವನ ಬನವೋ! ದೇವನಾಡಿದ ಬನವೋ! ಮತ್ತೆ ದೇವಾನುದೇವತೆಗಳೆಲ್ಲ ಕೂಡಿದ ಬನವೋ! ಇದು ಇಂದ್ರವನ! ಸಗ್ಗವನ! ಆವುದಾದರು ಇರಲಿ; ನಾನಿರ್ಪ ಒನವಿದೇಂ ದಿವ್ಯ ಬನವೋ! ಪೂರ್ವಜನ್ಮದ ಫಲವೋ! ಪುಣ್ಯ ಪೆಚ್ಚಿದ ಫಲವೋ! ದೇವನೊಲುಮೆಯ...

ಅರಳಿದ ಸಂಜೆ

ಈ ಮೌನ ಸಂಜೆ ಬೀದಿಯಲ್ಲಿ ಹೊರಟಿವೆ ಇರುವೆಗಳ ಮೆರವಣಿಗೆ, ಮರದ ಕೆಳಗೆ, ಒಳಗೆ ಪೋರ ಚೆಂಡು ಹುಡುಕುತ್ತಿದ್ದಾನೆ, ಮತ್ತೆ ಚಿಟ್ಟೆ ಹರಿದಾಡದೇ ಕುಳಿತಿದೆ ಹೂವಿನ ಮೇಲೆ. ಖಾಲಿ ಹಾಳಿಯಲಿ ಅರಳಿವೆ ಕವಿಯ ನೀಲಿ ಅಕ್ಷರಗಳು,...

ದೇಹ ಆತ್ಮಗಳ ಗೂಢತೆ

ಆಸೆಗಳಿಗೆ ದಾಸನಾಗದಿರು ಮನುಜ ಕಷ್ಟಗಳಿಗೆ ನಿತ್ಯವೂ ಕೈಚಾಚು ನರದೇಹವು ನಿನ್ನದು ಶಾಶ್ವತವಲ್ಲವು ಮೋಹ ಸಂದೇಹಗಳ ಮರೆಮಾಚು ಆತ್ಮವು ದೇಹದ ಆಲಯದಲ್ಲಿದ್ದರೂ ದೇಹದಾಚೆಗೂ ಅದು ಪಸರಿಸಿದೆ ಕಾಲಕ್ಕೆ ತಕ್ಕಂತೆ ದೇಹ ಬದಲಿಸಿದರೂ ಆತ್ಮ ಕಾಲಾತೀತವಾಗಿ ಬೆಳಗಿದೆ...
ವಾಗ್ದೇವಿ – ೪೪

ವಾಗ್ದೇವಿ – ೪೪

ಸೂರ್ಯ ನಾರಾಯಣನ ಅವಗುಣಕ್ಕೆ ದ್ವಿತೀಯಾಶ್ರಮವಾಯಿತೆಂಬ ದುರ್ವಾರ್ತೆಯು ತಲಪಿ, ಸ್ವಾಮಿಗಳೂ ವಾಗ್ದೇವಿಯೂ ಏಕಾಂತ ಗೃಹದಲ್ಲಿ ಅನುವಾದಿಸಿಕೊಂಡಿರುವ ವೇಳೆಯಲ್ಲಿ ನೇಮರಾಜಸೆಟ್ಟಿಯು ಶೃಂಗಾರಿಯ ಸಂಗಡ ಸಂಭಾಷಣೆ ನಡಿಸುತ್ತಿದ್ದನು. ಇದನ್ನು ಹ್ಯಾಗೋ ತಿಳಿದ ತಿಪ್ಪಾಶಾ ಸ್ತ್ರಿಯು ತಪ್ಪನೆ ಆ ಸ್ಥಳಕ್ಕೆ...

ಮಾನವ-ಬೌದ್ಧಿಕ ಪ್ರಾಣಿ

ಆ ಅಸೀಮದಾ ಸಂಚುಹೊಂಚಿನಲಿ ಒಂದು ಕುದ್ರ ಘಟಕ ವೈಶ್ವಾನರನ ಆವರ್ತನೃತ್ಯರಂಗದಲಿ ಸಣ್ಣ ಚುಟುಕ. ಬಟಾಬಯಲು ಇದು, ಹೋ ಅಭಂಡ ತಾನರ್ಥಹೀನ ಹಳವು ಅಕಸ್ಮಾತ್ತೊ ಎನುವಂತೆ ಬಂತು ಭೂಮಿಯಲಿ ನರನ ಫಲವು. ತನ್ನ ನರೆತ ಅಜ್ಞಾನದಲ್ಲಿ...