ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೭

ಹಸಿವಿನ ಮುಖವಾಡ ಮುಖವೇ ಎನಿಸುವಷ್ಟು ಸಹಜ ಕಲಾತ್ಮಕ, ಅವಿವೇಕಿ ರೊಟ್ಟಿಗೆ ಅರಿಯಲು ಆಗಿಯೇ ಇಲ್ಲ ಯಾವುದು ನಿಜ ಯಾವುದು ನಾಟಕ. ಹಸಿವಿನ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಕೇಳಿಯೇ ರೊಟ್ಟಿ ಮಂತ್ರಮುಗ್ಧ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೬

ಹಸಿವಿನ ನಂತರ ರೊಟ್ಟಿಯೋ ರೊಟ್ಟಿಯ ನಂತರ ಹಸಿವೋ ನಮಗೆ ತಿಳಿದಿಲ್ಲ. ಆದರೂ ಹಸಿವಿನಲಿ ರೊಟ್ಟಿಗಾಗಿ ಹುಡುಕಾಟ ರೊಟ್ಟಿಗೆ ಹಸಿವಿನ ಕಾಡುವಿಕೆ ತಪ್ಪಿಲ್ಲ. *****

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೫

ರೊಟ್ಟಿ ಎಲ್ಲಿಯೂ ನಿಲ್ಲುವುದಿಲ್ಲ ಎಲ್ಲಿಗೂ ಹೊರಡುವುದಿಲ್ಲ ಅಳತೆಗಳ ಗೊಡವೆ ಇಲ್ಲ. ಹಸಿವೆಗೆ ಮಾತ್ರ ತಿರುತಿರುಗಿ ಅಳೆಯುವ ಕೆಲಸ. ಹುಡುಕುವ ಮೋಜು ಬೆಲೆ ಕಟ್ಟುವ ತುರ್ತು. *****