ಆಧಾರ

ಬೆಟ್ಟದಿಂದ ಹೆಬ್ಬೆಟ್ಟು ಗಾತ್ರದ ಕಲ್ಲ ತಂದು ಕೊರಳಿಗೆ ಕಟ್ಟಿ ಲಿಂಗ ಎನ್ನುವರು ಗಿಡದಿಂದ ಹಿಡಿ ಹತ್ತಿಯ ತಂದು ಹೊಸೆದು ಒಡಲಿಗೆ ಹಾಕಿ ಜನಿವಾರ ಎನ್ನುವರು ಬೆಟ್ಟ ಎಷ್ಟು ಲಿಂಗಗಳ ಗಿಡ ಎಷ್ಟು ಜನಿವಾರಗಳ ತಮ್ಮೊಳಗೆ...

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೧

ಅವನ ಕತೆ ಹುಚ್ಚು ವಾಸ್ತವತೆ. ಅವಳ ವ್ಯಥೆ ಬರೀ ಭಾವುಕತೆ. ಅವರಿಬ್ಬರೂ ಒಬ್ಬರೊಳಗೊಬ್ಬರು ಇಳಿಯುವುದು ಬದುಕಿನ ರೋಚಕತೆ, ಪ್ರೀತಿಯ ಪ್ರಾತ್ಯಕ್ಷಿಕೆ. *****

ಗುಣ

ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****

ಆಸ್ತಿ – ನಾಸ್ತಿ

ಒಂದು ಬೆಟ್ಟದ ಮೇಲೆ ಬೆತ್ತಲಾಗಿ ನಿಂತಿದ್ದಾನೆ ಗೊಮ್ಮಟ ಮತ್ತೊಂದು ಬೆಟ್ಟದ ಮೇಲೆ ತಿರುಪತಿ ತಿಮ್ಮಪ್ಪ ಹೊರಲಾಗದೆ ಹೊರುತ್ತಿದ್ದಾನೆ ಚಿನ್ನ ವಜ್ರ ವೈಡೂರ್‍ಯ ರತ್ನ ಖಚಿತ ಕಿರೀಟ ತೊರೆದು ಬೇಡುವ ಭಕ್ತರ ಪಾಲಿಗೆ ಎಲ್ಲವೂ ತೊಳಲಾಟ...