ಹನಿಗವನ ನಗು – ಮಗು ಪರಿಮಳ ರಾವ್ ಜಿ ಆರ್ February 15, 2017December 24, 2016 ತಿದ್ದಿ ಬರೆವುದು ಹಲಗೆಯಲಿ ಬರವಣಿಗೆ, ಬರಿಯುತ್ತದೆ ಕೈ ಎಳೆದು ಅಳುವ ಮಗುವು ಗೀಚಿ ಬರುವುದು ಎಲ್ಲೆಡೆ ಅದು ಕಲೆ, ಅದು ಸಂತಸ ಅದು ಸ್ವಾತಂತ್ರ್ಯ ಬರೆಯಬಲ್ಲದು ನಗುವ ಮಗುವು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೭ ಧರ್ಮದಾಸ ಬಾರ್ಕಿ February 13, 2017December 18, 2016 ಆಹಾ! ಅದು ಎಂಥ ಅದ್ಭುತ ‘ಟೂರ್ಗೈಡ್’? ನನ್ನ ಗುರಿಯನ್ನೇ ಮರೆಯುವಂತೆ ಮಾಡಿತಲ್ಲ! ***** Read More
ಹನಿಗವನ ಕುಂಬಕರ್ಣರು ಲತಾ ಗುತ್ತಿ February 12, 2017February 13, 2019 ವರ್ಷಂಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡದ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ ***** Read More
ಹನಿಗವನ ಹೃದಯ ಪಟ್ಟಾಭಿ ಎ ಕೆ February 9, 2017March 29, 2017 ಹೃದಯ ಹಿಗ್ಗಲು, ಒಗ್ಗಲು ಬಳಸುವ ಅಮೂಲ್ಯ ಸಾಧನೆಗಳೆಂದರೆ ಪ್ರೀತಿ, ಪ್ರೀತಿ ಮತ್ತು ಪ್ರೀತಿ! ***** Read More
ಹನಿಗವನ ಸಾವು ಪರಿಮಳ ರಾವ್ ಜಿ ಆರ್ February 8, 2017December 24, 2016 ಭೂಮಿಯಲಿ ಬಾಳಲು ಕಟ್ಟಿಕೊಂಡ ರಾಜಾಸ್ಥಾನ (ಆವಾಸಸ್ಥಾನ) ಬಿಟ್ಟು ಸ್ವರ್ಗದ ದೇವಸ್ಥಾನಕ್ಕೆ ಹೋಗುವುದೇ ಸಾವಿನ ಮಹಾ ಪ್ರಸ್ಥಾನ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೬ ಧರ್ಮದಾಸ ಬಾರ್ಕಿ February 6, 2017December 18, 2016 ಆಟದ ಹರುಷದಲ್ಲಿ ಆಟದ ಗೆಲುವ ನೋಡಾ ***** Read More
ಹನಿಗವನ ಸೂರ್ಯಾಸ್ತ ಲತಾ ಗುತ್ತಿ February 5, 2017February 13, 2019 ಸೂರ್ಯ ಮಗನೆಂದಾದರೆ ತಾಯಿ ಸಮುದ್ರವಾಗಿರಲೇ ಬೇಕು ರೊಚ್ಚು ಕಿಚ್ಚಿನ ಮಗನ ಸಂತೈಸುವಳು ತಾಯಿ ತನ್ನ ಉಡಿಯಲಿ ಹಾಕಿಕೊಂಡು. ***** Read More
ಹನಿಗವನ ಪ್ರೇಮ ಪಟ್ಟಾಭಿ ಎ ಕೆ February 2, 2017March 29, 2017 ಪ್ರೇಮ ಕುರುಡು ಆದರೇನಂತೆ? ಬರಡೇನೂ ಅಲ್ಲವಲ್ಲ; ಅಲ್ಲಿ ಮಿಡಿಯುವ ಹೃದಯಗಳೆರಡು ಇವೆಯಲ್ಲಾ! ***** Read More
ಹನಿಗವನ ಕಾವ್ಯ ಪರಿಮಳ ರಾವ್ ಜಿ ಆರ್ February 1, 2017December 24, 2016 ಮಾತ್ರೆ ಛಂದಸ್ಸಿನಲಿ ಬಂಧಿಸಿದರೆ ಕವಿತೆಯಲ್ಲ ಹೃದಯ ಹಾಡಿಕೊಂಡ ಬರೆಯದೇ ಉಳಿದುದೆಲ್ಲಾ ಭಾವ, ಭಾವಗೀತ, ಕಾವ್ಯ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೫ ಧರ್ಮದಾಸ ಬಾರ್ಕಿ January 30, 2017December 18, 2016 ಬಾಣದ ಮುನ್ನಡೆಯಲ್ಲಿ ಬಿಲ್ಲಿನ ಹಿನ್ನಡೆ ಸಾಕ್ಷಿ! ***** Read More