ಹನಿಗವನ ಮಾತು – ಮೌನ ಪರಿಮಳ ರಾವ್ ಜಿ ಆರ್ August 15, 2018April 8, 2018 ಮಾತು ಸೋತರೇನು? ಕತ್ತಲಲಿ ಬೆಳಕು ಹೂತಿದೆ ನೋಡು ಮೌನ ಮೋಡವಾದರೇನು? ಇಳೆಯ ತುಂಬ ಮಳೆ ಸಿರಿದಿದೆ ಹಾಡು ***** Read More
ಹನಿಗವನ ಬಿಸಿ ನೀರು ಪಟ್ಟಾಭಿ ಎ ಕೆ August 9, 2018June 10, 2018 ಗಡಗಡ ನಡುಗುವ ಛಳಿಗೆ ಬೆದರಿದಾಗ ಬದರಿಯಲ್ಲಿ ಸುಡುಸುಡು ನೀರು! ***** Read More
ಹನಿಗವನ ಬೀಗದ ಕೈ ಪರಿಮಳ ರಾವ್ ಜಿ ಆರ್ August 8, 2018April 8, 2018 ಅಂತರಂಗದ ಅಗುಳಿ ಜಗುಲಿಯಲಿ ಮರೆಯಬೇಡ ಬಹಿರಂಗದ ಬೀಗ ಕೋಣೆಯಲಿ ಕಳೆಯಬೇಡ ***** Read More
ಹನಿಗವನ ಜಡೆ ಪಟ್ಟಾಭಿ ಎ ಕೆ August 2, 2018June 10, 2018 ‘ಎರಡು ಜಡೆಗಳು ಕೂಡುವುದಿಲ್ಲ’ ಎನ್ನುವವರು ತುಂಗ-ಭದ್ರೆಯರನ್ನು ಕೂಡಲಿಯಲ್ಲಿ ನೋಡಲಿ! ***** Read More
ಹನಿಗವನ ಎರಡು ನಾಣ್ಯ ಪರಿಮಳ ರಾವ್ ಜಿ ಆರ್ August 1, 2018April 8, 2018 ಹಗಲು ಕೈಯಲ್ಲಿರುವ ನಗದು ನಾಣ್ಯ ರಾತ್ರಿ ಕನಸಿನಲ್ಲಿರುವ ಕೂಡಿಟ್ಟ ನಾಣ್ಯ ***** Read More
ಹನಿಗವನ ಈರುಳ್ಳಿ ಪಟ್ಟಾಭಿ ಎ ಕೆ July 26, 2018June 10, 2018 ಲೇ, "ಈಳಿಗೆ ಮಣೆ ಮುಂದೆ ಈರುಳ್ಳಿಯೇ ಇಲ್ಲ ಮತ್ತೇಕೆ ಕಣ್ಣೀರು?" "ಅದು ಇಲ್ಲವೆಂದೇ ಕಣ್ಣೀರು ರೀ." ಅವಳೆಂದಳು! ***** Read More
ಹನಿಗವನ ರಾತ್ರಿ – ಹಗಲು ಪರಿಮಳ ರಾವ್ ಜಿ ಆರ್ July 25, 2018April 8, 2018 ಜೋಡಿಹಕ್ಕಿ ಹಾರುತಿದೆ ನೋಡಿದಿರಾ? ಕತ್ತಲೆಯ ಕಬ್ಬಕ್ಕಿ ಬೆತ್ತಲೆಯ ಬೆಳ್ಳಕ್ಕಿ ಜೋಡಿ ಸೇರಿದೆ ಜಗದ ಗೂಡಲ್ಲಿ ಕತ್ತಲೆಯ ಮೊಟ್ಟೆಯಲಿ ಹಗಲ ಬೆಳಕ ಹರಿಸಿದೆ ನಮ್ಮ ಬಾಳ ಹರಿಸಿ ***** Read More
ಹನಿಗವನ ಕಷ್ಟ ಪಟ್ಟಾಭಿ ಎ ಕೆ July 19, 2018June 10, 2018 ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೆ ಕಷ್ಟ? ಎನ್ನುತ್ತಾರೆ ಜನ; ಕೊಡಲಿ ಹಾಗೆನ್ನುವುದಿಲ್ಲ! ***** Read More
ಹನಿಗವನ ದೇವರ ಎರಡು ಕವನಗಳು ಪರಿಮಳ ರಾವ್ ಜಿ ಆರ್ July 18, 2018April 8, 2018 ಮಿಣಕು ನಕ್ಷತ್ರಗಳ ರಾತ್ರಿ, ಹವನದ ಕವನ ಅರುಣ ಕಿರಣಗಳ ದಿನ, ಕವನದ ದವನ ***** Read More
ಹನಿಗವನ ಮತ್ತು ಪಟ್ಟಾಭಿ ಎ ಕೆ July 12, 2018June 10, 2018 ಮದಿರೆ, ಮಾನಿನಿ ಮತ್ತು ಮನಿ; ಮೂರೂ ಸೇರಿದಾಗ ಬರುತ್ತದೆ ‘ಮತ್ತು’ ಮತ್ತೂ ಮತ್ತೂ! ***** Read More