ಹನಿಗವನ ಪ್ರತ್ಯಕ್ಷ ಶ್ರೀನಿವಾಸ ಕೆ ಎಚ್ December 14, 2018March 26, 2018 ಹಿಡಿಯ ಹೋದಾಗ ನಾಚಿ ಎಲ್ಲೋ ಹೋಗಿ ಅವಿತ ಕವಿತೆ ಸೋತೆನೆಂದು ಕೈ ಚೆಲ್ಲಿ ನಿಂತಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷ ***** Read More
ಹನಿಗವನ ಸಲಾಮು ಪಟ್ಟಾಭಿ ಎ ಕೆ December 13, 2018June 10, 2018 ಸಲಾಮು ಹೊಡೆಯುವವರೆಲ್ಲಾ ಗುಲಾಮರಲ್ಲ; ಗುಲಾಮರೆಲ್ಲಾ ಸಲಾಮು ಹೊಡೆಯುವುದಿಲ್ಲ! ***** Read More
ಹನಿಗವನ ಕವಿತೆ ಪರಿಮಳ ರಾವ್ ಜಿ ಆರ್ December 12, 2018April 9, 2018 ಭಾವ ಬುಟ್ಟಿಹರಡಲು ಬಣ್ಣಗಟ್ಟಿ ಕರಗಲು ಚೆಲುವ ಚಿಟ್ಟೆ ಹಾರಲು ಹೃದಯ ಕದವ ತೆರೆಯಲು ಮನಸು ಹಾಡುವುದು ಕನಸು ಹಾರುವುದು ಕವಿತೆ ಜಿನುಗುವುದು! ***** Read More
ಹನಿಗವನ ಸಾಕ್ರಟೀಸ್ ಪಟ್ಟಾಭಿ ಎ ಕೆ December 6, 2018June 10, 2018 ಒಮ್ಮೊಮ್ಮೆ ಹೆಂಡತಿ ಮಾಡುತ್ತಿರುತ್ತಾಳೆ ‘ಟೀಸ್’ ಆಗ ನಾನಾಗುತ್ತೇನೆ ಸಾಕ್ರಟೀಸ್! ***** Read More
ಹನಿಗವನ ವೃಂದಗಾನ ಪರಿಮಳ ರಾವ್ ಜಿ ಆರ್ December 5, 2018April 9, 2018 ಮರದರೆಂಬೆ ಬೋಳಾಗಿ ಓಲಾಡಿದರೆ ಬಯಲಾಟ ರೆಂಬೆರೆಂಬೆಯು ಚಿಗುರಿ, ಹಕ್ಕಿ ಹಾಡಿದರೆ ವೃಂದಗಾನ ಕೋಲಾಟ! ***** Read More
ಹನಿಗವನ ಚುಟುಕಗಳೇ ಶ್ರೀನಿವಾಸ ಕೆ ಎಚ್ November 30, 2018March 26, 2018 ಬನ್ನಿ ಚುಟುಕಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯ ಖಾಲಿ ಕಾಗದಕೆ ಪ್ರಾಸಗಳ ಮಳೆ ಸುರಿಸಿ ***** Read More
ಹನಿಗವನ ಕುತೂಹಲ ಪಟ್ಟಾಭಿ ಎ ಕೆ November 29, 2018June 10, 2018 ಮೂಗು ತೂರಿಸಿ ವಾಸನೆ ಹೀರುವ ನಾಯಿಯ ಗುಣ ಈ ಕುತೂಹಲ! ***** Read More
ಹನಿಗವನ ನೃತ್ಯ ಪರಿಮಳ ರಾವ್ ಜಿ ಆರ್ November 28, 2018April 9, 2018 ಎಲೆ ಉದರಿ ಮರವು ನಿಂತರೆ ಕ್ಯಾಬರೆ! ಹಸಿರು ಉಟ್ಟು ಹೂ ತೊಟ್ಟರೆ ಭರತ ನಾಟ್ಯ ಬರೋಬರೆ! ***** Read More
ಹನಿಗವನ ಮಾತು ಲತಾ ಗುತ್ತಿ November 24, 2018February 13, 2019 ಚಳಿ ಎನ್ನುವ ಹುಳಿಗೆ ಪ್ರೇಮ ಕನಸಿನ ಉಪ್ಪು ಹಚ್ಚಿ ಮೆದ್ದಾಗ ಚಿಮ್ಮುವ ನೀರಿನಂತೆ ಮೈ ನಿಮಿರುವ ನಿನ್ನ ಮಾತು ರಗ್ಗಿನೊಳಗೆ ಕಾವೇರಿಸುವದು. ***** Read More
ಹನಿಗವನ ನನಗೆರಡು ಕಿವಿ ಶ್ರೀನಿವಾಸ ಕೆ ಎಚ್ November 23, 2018March 26, 2018 ಹೇಳಿ ಕೇಳಿ ನಾನು ಒಬ್ಬ ಕವಿ ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ. ***** Read More