Home / ಕವನ / ಕವಿತೆ

ಕವಿತೆ

ನಾ ಅಭಿಮಾನಿ ನಾ ಭಾಽಳ ಸ್ವಾಭಿಮಾನಿ ಯಾರಿಗೂ ಸೊಪ್ಪ ಹಾಕೋ ಮಗ ನಾ ಅಲ್ಲ, ಅಂತಿದ್ಯಲ್ಲೊ…..? ನಂದೂ ನಮ್ಮಪ್ಪಂದೂ ಮಾತ ಅಂದ್ರ ಯಾವನೂ ಅಡ್ಡ ಹಾಕಾಕಿಲ್ಲ ಮಗ, ಅಷ್ಟ ಅಲ್ಲೋಲೇಽ ಯಾವ ಮಿನಿಸ್ಟ್ರೂ ಹೇಳಿದ್ಹಂಗ ಕೇಳ್ತಾನ. ಯಾವ ಬಡ್ಡಿ ಮಕ್ಕಳದೇನಂ...

ಕಾಲನಾಗಗಳೊಡಲು ಜಗದ ಮನ ಎಂಬುದನು ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ ಎನುವ ಭರವಸೆಗೂಡಿ.  ಮರುಳುಗೊಳಿಸುವ ಮಾಟ ಹುದುಗಿಸುತ ಒಳಗೆ ವಿಷ, ಹೊರಗೆ ಮಾಯೆಯ ಬೀರಿ ತ...

ಸ್ನಾನಕ್ಕೇಂತ ಬಂದ ಚಂದ್ರ ಸಮುದ್ರ ಕನ್ಯೆಯ ಕೋಣೇಲಿ ಅಡಗಿದನೆಂಬ ಗುಮಾನಿ ಕೇಳಿ, ಬೆಳಗಿನ ಜಾವದಲ್ಲಿ ತುರ್ತಾಗಿ ಬಲೆ ಕೊಟ್ಟು ಬೆಸ್ತರನ್ನಟ್ಟಿದ ಭೂಮಿಗೆ ಸಿಕ್ಕದ್ದು ಏನು? ಬರೀ ಒಂದಿಷ್ಟು ಮೀನು. *****...

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ; ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ. ಹಾರಾರಿ ಲೋಕದಾ ಜನದೊಡೆಯ ರಾಮನಾ ಸೇವೆಯನು ಪೂಜೆಯನು ಧ್ಯಾನವನು ಸದಾ; ಧ್ಯಾನದಾ ಬೀಜವನು ಆ...

ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು ಅದರುವ ತುಟಿಗಳು ಕಂಬನಿ ಕಣ್ಣುಗಳು ಕಾದಿವೆ ಜಾರುಗೊಡುವುದಿಲ್ಲ ...

ನೂರಐವತ್ತೈದು ವರುಷಗಳು ದಾಸ್ಯದಲೆ ಬಿದ್ದು ಭಾರತ ತನ್ನ ಆತ್ಮವನೆ ಮರೆತಿಹುದು ತನ್ನ ಶಕ್ತಿಯಲಿಂದು ಇನಿತಾದರೂ ಅದಕೆ ನಂಬುಗೆಯು ಉಳಿದಿಲ್ಲ! – ಕೂಪದಲಿ ಉರುಳಿಹುದು! ಮತ್ತೆ ನಮ್ಮೀನಾಡು ಕತ್ತಲಿಂ ಹೊರಗೆದ್ದು ಬೆಳಕಿನಲಿ-ಸ್ವಾತಂತ್ರ್‍ಯ ಜ್ಯೋ...

ಹುಣ್ಣಿಮೆ ಚಂದ್ರನಿಗೆ ತಾರೆಯರು ಎಷ್ಟು ಕಣ್ಣು ಹೊಡೆದರೂ ಅವರು ಅವನ ಕಣ್ಣಿಗೇ ಬೀಳಲಿಲ್ಲ ಬೆಳ್ಳಿ ಬೆಳದಿಂಗಳ ಹಾಲಲ್ಲಿ ಬೆತ್ತಲೆ ಮೀಯುತ್ತಿದ್ದ ಭೂಮಿ ಮೇಲೆ ನೆಟ್ಟ ಅವನ ಕಣ್ಣು ಬೆಳಗಾಗುವವರೆಗೂ ಅತ್ತಿತ್ತ ಹೊರಳಲಿಲ್ಲ. *****...

ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ, ದೂರವನು ಹತ್ತಿರಿರಿಸಿ- ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು ತೋರಿದುಂಗುರವ ಕಳೆದೆ! ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ ಸರಸಿ ಉಂಗುರವವಳು; ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು ಮುಡಿಯಲೆಂದ...

ನನ್ನವಳ ಕಣ್ಣೀರು ಕಂಡಾಗ ನನ್ನ ಹೃದಯ ಝಲ್ಲೆಂದಿತ್ತು ಅದೇ ಮರುದಿನ ಚಿತ್ತಾರದ ಗೊಂಬೆಯಂತೆ ಚಿತ್ತರಿಸಿಕೊಂಡು ನನ್ನ ಕೊರಳಿಗೆ ಕೈ ಹಾಕಿದಾಗ ಮೈ ಝುಂ (ಜುಂ) ಅಂದಿತು ವಿಚಾರಿಸಿದೆ: ಇವೆರಡರ ಸಂಕೋಲೆ ಬೇಡವೆಂದು ತಲೆ ಕೊಡವಿದ್ದೇ ಕೊಡವಿದ್ದು ಬೇರ ವಿಚಾ...

ನಿಲ್ಲೆಲವೊ ಪಯಣಿಗನೆ ನಿಲ್ಲು! ನಿಲ್ಲು! ಮುಂದೆಲ್ಲಿ ಸಾಗುತಿಹೆ ನಮ್ಮ ಮರೆತು ಎಲ್ಲರಂತೆಯೆ ಕಿವುಡೆ ನಿನ್ನ ಮನಸು -ಕೂಗಿದೆ ವೀರಗಲ್ಲು!   ೧ ಒಟ್ಟಿಹರು ಒಂದೆಡೆಗೆ ನಮ್ಮನೆಲ್ಲ ಉಸಿರಾಡಲೆಡೆಯಿಲ್ಲವೆಮ್ಮ ಬಾಳು! ಆರು ನಾವೆಂಬುದನೆ ಅರಿಯದಿಂತು ಬಸವಳಿ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...