ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ. ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ? ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ. ಅಂತಹುದ್ದರಲ್ಲಿ ಸೀತೆ ಮೂರು ಜನ ಅತ್ತೆಯ...

ಗುರುಗಳು (ತರಗತಿಯಲ್ಲಿ): “ಶ್ಯಾಮಾ ಮಧ್ಯಾನ್ನದ ಟೈಂ ಟೇಬಲ್ ಓದು ಏನೇನಿದೆ ತಿಳಿಯೋಣ.” ಅಂದರು. ಶ್ಯಾಮ: ಗುರುಗಳೇ ೧-೩೦ಕ್ಕೆ ರಾಧಾ, ೨-೦೦ಕ್ಕೆ ಬದುಕು, ೨-೩೦ಕ್ಕೆ ಬೃಂದಾವನ, ೩-೦೦ಕ್ಕೆ ಮತ್ತೆ ಬರುವನು ಚಂದಿರ, ೩-೩೦ಕ್ಕೆ ಮೂಡಲ ಮನ...

ಮಲ್ಲು ಮನೆಗೆ ಇದ್ದಕ್ಕಿದ್ದಂತೆಯೇ ಒಂದು ದಿನ ಹಾವು ನುಗ್ಗಿತು. ಇದನ್ನು ಕಂಡು ಹೆದರಿದ ಮಲ್ಲು `ಲೇ ಹಾವು ಬಂದಿದೆ ಯಾರಾದರೂ ಗಂಡಸರು ಹೊರಗಿದ್ದರೆ ಕರಿಯೇ ಬೇಗ.’ ಹೆಂಡ್ತಿ: `ಗಂಡಸರೆ? ಏಕೆ ನೀವು ಗಂಡಸರಲ್ಲವೇ’ ಮಲ್ಲು: `ಓಹ್, ಹೌದಲ...

ಹೆಂಡತಿ: `ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ? ಗಂಡ: `ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ‌ಇದೆ. ಸದಾ ನೀರು ಸುರಿಯುತ್ತಿರ...

ಒಬ್ಬ ಭಾಷಣಕಾರ ಯಾವುದೇ ಉದಾಹರಣೆ ಕೊಡುವ ಸಂದರ್ಭದಲ್ಲಿ `ನನ್ನ ಹೆಂಡತಿ, ನನ್ನ ಹೆಂಡತಿ’ ಎಂದು ಹೇಳುತ್ತಲಿದ್ದನು- ಇದನ್ನು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ ಸಭಿಕನೊಬ್ಬನು ಬೇಸರದಿಂದ `ನೀವು ಪದೇಪದೇ ನನ್ನ ಹೆಂಡತಿ, ನನ್ನ ಹೆಂಡತಿ ಎಂದು ಒ...

ಸೇಲ್ಸ್ ಗರ್ಲ್ ಕಾಲಿಂಗ್‌ಬೆಲ್ ಒತ್ತಿದಳು. ಮನೆಯ ಒಡತಿ ಬಾಗಿಲು ತೆರೆದು, `ಸೇಲ್ಸ್ ಮೆನ್ ನಾಟ್ ಅಲೋಡ್’ ಎಂಬ ಬೋರ್ಡ್ ಇದೆಯಲ್ಲಾ, ನೀನು ಅದನ್ನು ಓದಲಿಲ್ಲವೆ? ಸೇಲ್ಸ್‌ ಗರ್ಲ್ : `ಓದಿದೆ `ಸೇಲ್ಸ್ ಮೆನ್ ನಾಟ್ ಅಲೋಡ್’ ಅಂತ ಇದೆ. ಆ...

ಹೆಂಡತಿ: `ರೀ ನಾನು ಕಾರು ಕಲಿಯಲು ಹೋಗುತ್ತಿದ್ದೇನೆ. ಕೇಳಿಸಿಕೊಂಡಿರಾ ?’ ಗಂಡ: `ಕೇಳಿಸಿಕೊಂಡೆ: ನಾನು ಖಂಡಿತಾ ನಿನ್ನ ದಾರಿಗೆ ಅಡ್ಡ ಬರುವುದಿಲ್ಲ. ಆಗಬಹುದು ತಾನೆ?’ ***  ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...