ಆಕಾಶದಲ್ಲಲ್ಲಿ ನಿಲ್ದಾಣಗಳಿದ್ದಿದ್ದರೆ

ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ ಆಕಾಶ ಮಾರ್ಗದ ಈ ಪಯಣ ಅದೆಂಥಾ ಸುಂದರ ನಯನ ಮನೋಹರ ನನ್ನ ಕಿಡಕಿಯಾಚೆ ಏನದ್ಭುತ ನೀಲಿ ಆಕಾಶದ ಹಾಸು ಉದ್ದಗಲ ನಡುನಡುವೆ ಮೈ ಮರೆತು ಮಾತನಾಡುವ ಬಂಗಾರ ಬೆಳ್ಳಿ...

ಆಕಾಶದಂಗಡಿಯೊಳು

ಎಷ್ಟೊಂದು ಅಂತಸ್ತುಗಳು ಈ ಅಂಗಡಿಯೊಳು ಒಳಹೊರ ಸಂದುಗೊಂದುಗಳ ವಿನ್ಯಾಸ ಮೋಹಕ ಮೋಹಕ ವನಪು ವೈಯಾರ ಸುತ್ತೆಲ್ಲ ಉದ್ಯಾನಗಳ ಸೆಳೆತ ನೀಲಿ ಉದ್ಯಾನ ಮೋಡಗಳಲೆ ಹಳದಿ ಉದ್ಯಾನ ಬಂಗಾರದಲೆ ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ...

ಘಳಿಗೆ

ಕಾರಾಗೃಹದಲ್ಲಿದ್ದಂತೆಯೇ ಪಾಪ ಅವು ಕಟ್ಟಿಹಾಕಿದ್ದಾನೆ ದೇವರು ನೆಲದೆದೆಯ ಬೆಟ್ಟ ಪರ್ವತಗಳು ಚಲಿಸದಂತೆ, ಯಾರೂ ಸುಳಿಯದಂತೆ ಸುಡಲು ಬಿಟ್ಟಿರುವನೆ ಮರಳ ಪಾಪ ಪ್ರಾಯಶ್ಚಿತಕ್ಕೊಳಪಡುವಂತೆ, ಉಪ್ಪು ಬೆರಿಸಿರುವನು ಸಮುದ್ರಕೆ ಹೊಳೆಹಳ್ಳ ಕೆರೆ ನೋಡಿ ನಗುವ ಅದರ ಸೊಕ್ಕು...

ಯಮನ ಕೋಣಗಳು

ನಾವೇ ಅದರೊಳಗೆ ಹೋಗುತಲಿದ್ದರೂ ರಾಕ್ಷಸಾಕಾರದ ಕರಿಮೋಡಗಳ ಗುಂಪು ಗುಂಪೇ ನಮ್ಮೆಡೆಗೆ ಬರುವಂತಿದೆ ಗಬಕ್ಕನೆ ಅವು ನಮ್ಮನ್ನು ನುಂಗಿ ನೀರು ಕುಡಿಯುತ್ತವೆಯೋ- ನಮ್ಮ ವಿಮಾನವೇ ಆ ರಾಕ್ಷಸರನ್ನು ಚಚ್ಚಿ ಕೊಲ್ಲುತ್ತದೆಯೋ- ಏನೋ ಜಿದ್ದಾಜಿದ್ದಿ ಸ್ಪರ್ಧೆ. ಸೀಟ್...

ಕ್ಷೀರ ಸಾಗರ

ನೊರೆನೊರೆಯಾದ ಮೋಡಗಳ ಕ್ಷೀರಸಾಗರ ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ- ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ. ವಿಷವುಂಡ ನೀಲಕಂಠನ ತೇಲುಗಣ್ಣು ಮೆಳ್ಳಗಣ್ಣು...

ಮಾತುಕತೆ

ಆಕಾಶದೊಂ(ನೊಂ)ದಿಗೆ ಮಾತಿಗಿಳಿಯಬೇಕೆನ್ನುತ್ತೇನೆ- ಅವನೇ ಮಾತಿಗಿಳಿಯುತ್ತಾನೆ ಪ್ರಶ್ನೆಗಳೆಲ್ಲ ಗೊತ್ತು ಸುಮ್ಮನೆ ನೋಡುತ್ತಿರು ಉತ್ತರ ಗೊತ್ತಾದೀತು ಬಾಯಿ ಮುಚ್ಚಿಸಿದ ತೆರೆದ ಕಣ್ಣು ಅವನೆದೆಯ ಮೇಲೆ ನೆಟ್ಟದ್ದಷ್ಟೇ ಒಂದಗಳು ಕಂಡ ಅವನು ಕರೆದ ತನ್ನ ಕಾಗೆ ಬಳಗ ಚಂದ್ರ...

ಪಕ್ಕದ ಸೀಟಿನಾಕೆ

ತಾನೊಂದು ರಂಭೆ ಅಂದುಕೊಂಡಂತಿದೆ ನನ್ನ ಪಕ್ಕದ ಸೀಟಿನಾಕೆ ಪಾರ್ಲರ್ ದಿಂದ ನೇರ ವಿಮಾನಕ್ಕೇರಿದ ಮೂವತ್ತರ ಬೆಡಗಿ ಥೇಟ್ ಐಟಮ್ ಸಾಂಗ್ ಗರ್ಲ್ ಗುಲಾಬಿ ಬಣ್ಣ ತಲೆತುಂಬ ಹುಚ್ಚೆದ್ದ ಕೂದಲು ಉದ್ದನೆಯ ಉಗುರು ಮೇಲೆ ಕಪ್ಪುಬಣ್ಣ...

ಮನೆ

ಭೂಮಿ ಮೇಲೆ ಅದೆಷ್ಟು ಜಾತಿ ಮತ ಧರ್ಮಗಳ ಹಗೆತನ ಕೊಲೆ ಭಯೋತ್ಪಾದನೆಗಳ ಅಟ್ಟಹಾಸ. ಆಕಾಶ ಮಾರ್ಗ ಅದೆಷ್ಟು ಹೊಚ್ಚ ಹೊಸತನ ಬಾನಂಗಳ ಅದೆಷ್ಟು ಸುಂದರ ನನ್ನ ಕಿಡಕಿಯಾಚೆ ಅದೇನು ನಯನಮನೋಹರ ಇಲ್ಲೊಂದು ಪುಟ್ಟ ಮನೆ...