ಆಶಯ

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು ನಂಬಿಕೆಯ ನೇತೃದಲಿ ನೋಡುತಲು, ಜೀವನದ ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ, ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ ಸಾರುತಲಿ ಪಾಡುತಲಿ, ಮಾನವನು ತಾನ್ಪಡೆದ ಜನ್ಮಸಾರ್ಥಕವೆಂದು...

ಅವಳು ಯಾರು?

ಹಸುರು ಸೀರೆಯನುಟ್ಟು ರಂಗು ಬಳೆಗಳ ತೊಟ್ಟು ತನ್ನ ಗೆಳತಿಯರೊಡನೆ ನಡೆದವಳು ಯಾರು? ಅರಳಿಯಾ ಮರದಡೀ ಹೂಬುಟ್ಟಿ ಕೆಳಗಿರಿಸಿ ಚೆಂಡು ಹೂಗಳ ಕೋದು ಹಾಡಿದಳು-ಯಾರು? ಹಣೆಗೆ ತಿಲಕವನಚ್ಚಿ ಮುಡಿಗೆ ಹೂಗಳ ಮುಚ್ಚಿ ಮೆಲ್ಲಡಿಯನಿಡುತಿಡುತ ಪೋದವಳು ಯಾರು?...

ಸ್ವತಂತ್ರ ಭಾರತ (ಆಗಸ್ಟ್ ೧೫-೧೯೪೭)

ಭಾರತೀ ಸತೀಯ ಗೆಲವು ಮಂದಹಾಸ ನೋಡೊ!  ||ಪಲ್ಲ|| ತ್ರಿವರ್ಣದಾ ಧ್ವಜವ ಬೀಸಿ ಶೂರಕುವರಿ ಏರಿ ಬಂದಳದೋ ಪಾರತಂತ್ರ್‍ಯಪಾಶ ಮುರಿದು ನಾರೀ!  ||ಅ.ಪ|| ನೊಂದಮೊಗವು ಅಂದಸೊಗವು ಎಲ್ಲ ಮ್ಲಾನವಾಗಿದೆ, ನೂರುವೆರಡು ವರುಷವೆಲ್ಲ ದಾಸ್ಯತನದೊಳಡಗಿರೆ; ತನ್ನ ತಾನು...

ಜ್ಞಾನದ ಮೊರೆ

ತಾರೆಗಳು ಶತಕೋಟಿ ಉದಿಸಿದರು ಬಾನಿನಲಿ, ಮೀರಿ ತೆರೆಗಳ ಧೀರ್ಘ ಆರ್ಭಟವೆ ಹೆಚ್ಚಿರಲಿ, ಶೂರ ಪುರುಷರು ಕಾಯದೊಳವಧಿಯನು ಮುಟ್ಟಿರಲಿ, ಸಾರ ಸಗ್ಗವು ತೋರ್ಪ ಸ್ತುತಿಹಲವು ಘೂರ್ಮಿಸಲಿ- ಯಾರು ನೋಡುವರೆನ್ನ-ಸ್ಮರಪರುಂ ಇಲ್ಲಿ? ಧಾರೆಧಾರೆಗಳಾಗಿ ಜಗದಿ ನೆತ್ತರವೆ ಪ್ರಹಿಸಲಿ,...

ಸೂರ್ಯಕಾಂತಿ

ಅಕೊ ಮೂಡ ಬಯಲಿನಲಿ ಬೆಳ್ನೆರೆಯ ಚೆಲ್ಲಿಹರು ಅದೋ ಮೂಡ ಬಾನಿನಲಿ ರವಿ ಕಾರುತಿಹನು! ಭುವಿಯೆಲ್ಲ ಬೆಳಕಿನಾ ಮುನ್ನೀರಂತಾದುದು; ಗಿರಿಯೆಲ್ಲ ನಗುವಂತೆ ತಲೆಯೆತ್ತಿ ನೋಡುವುದು. ಚಂದಿರನ ಓಡಿಸಿತು ಇಬ್ಬನಿಯ ಮಳೆಯು; ಬಿಳಿವಣ್ಣು ತಾರಕೆಯ ಹಕ್ಕಿಗಳು ಕುಟುಕಿದುವು....

ಬಂದೆನೊ – ಇದೊ ಬಂದೆ

ಕರೆಕರೆದು ಬರುವೆನೊ ಬಂದೆನೊ ಇದೊ ಬಂದೆ, ಕರ್ಣಾಟ ಸಾಗರ ಸೇರಽಲು; ತಿಳಿನೀರ ತಳವನ್ನು ಸೇರಲು!  ||ಕರೆ|| ಕೊಡಗಿನ ಮಲೆನಾಡ ಶಿಖರದೊಳುದಯಿಸಿ ಹರಿಹರಿದೆ ಕನ್ನಡ ರಾಜ್ಯದೊಳ್; ಕವಿರಸದ ಹನಿಯಾಗಿ ಸೇರಽಲು! ಕಾಂತಿಯೊ ಇದು ಒಂದು ಕ್ರಾಂತಿಗೆ...