ಹನಿಗವನ ಅನಿಸಿಕೆ ಲತಾ ಗುತ್ತಿ June 17, 2019May 24, 2019 ಪ್ರೇಮದ ಅಂತ್ಯ ಸ್ಪರ್ಶವಾದರೆ ಪ್ರೀತಿಯ ಆಳ ಅನಂತ ಧಗಿಸುವ ಹಗಲುಗಳು ಜಾತ್ರೆಯಾದರೆ ವಿರಹದ ರಾತ್ರಿಗಳು ಮೌನ ರಾಗಗಳು. Read More
ಹನಿಗವನ ಲೆಕ್ಕ ಲತಾ ಗುತ್ತಿ June 10, 2019June 9, 2019 ನಿನ್ನ ಮುತ್ತುಗಳಿಗೆಆಗಾಗ ಚುಕ್ತಾ ಮಾಡಲುಲೆಕ್ಕ ಇಡಬೇಕೆನ್ನುತ್ತೇನೆಆದರೇನು ಮಾಡಲಿನಕ್ಷತ್ರಗಳೆನಿಸಿದಂತಾಗುತ್ತದೆಯಲ್ಲ!! ***** Read More
ಹನಿಗವನ ಕ್ಷಣಗಳು ಲತಾ ಗುತ್ತಿ June 3, 2019June 9, 2019 ಹಗಲು ಮೊದಲೋ,ರಾತ್ರಿ ಮೊದಲೋ,ಕಣ್ಣಂಚಿನ ನೀರು ಮೊದಲೋ,ಹೃದಯ ಭಾವನೆಗಳು ಮೊದಲೋ,ಎನ್ನುವಂತಾಗುತ್ತದೆನಿನ್ನ ಪ್ರೀತಿಯಸೋನೆ ಮಳೆಯಸೆಳೆತಕ್ಕೆ ಸಿಕ್ಕಾಗ. ***** Read More
ಹನಿಗವನ ಕನಸು ಲತಾ ಗುತ್ತಿ May 27, 2019May 24, 2019 ನಿನ್ನ ಬಗೆಗೆ ಎಷ್ಟೊ ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ ಎಂದೆ- ಬೆಚ್ಚಿಬಿದ್ದೆ, ತಿರುಕನ ಕನಸಿನಂತಾದೀತು ತಿರುಕಿಯಾಗಬೇಡ ಎಂದಾಗ. Read More
ಹನಿಗವನ ಮಾತು ಲತಾ ಗುತ್ತಿ November 24, 2018February 13, 2019 ಚಳಿ ಎನ್ನುವ ಹುಳಿಗೆ ಪ್ರೇಮ ಕನಸಿನ ಉಪ್ಪು ಹಚ್ಚಿ ಮೆದ್ದಾಗ ಚಿಮ್ಮುವ ನೀರಿನಂತೆ ಮೈ ನಿಮಿರುವ ನಿನ್ನ ಮಾತು ರಗ್ಗಿನೊಳಗೆ ಕಾವೇರಿಸುವದು. ***** Read More
ಹನಿಗವನ ಅಸೂಯೆ ಲತಾ ಗುತ್ತಿ November 17, 2018February 13, 2019 ಸಂಜೆಯ ಮಲ್ಲಿಗೆಯ ಮೊಗ್ಗುಗಳು ನಿನ್ನ ಹೆರಳೇರಿ ನಗುತ್ತ ಅರಳಿ ಘಮ ಘಮಿಸುವಾಗ ಸಿಕ್ಕಾಪಟ್ಟೆ ಹೊಟ್ಟೆ ಉರಿಸಿಕೊಂಡೆ. ***** Read More
ಹನಿಗವನ ಬಿಕ್ಕಳಿಕೆ ಲತಾ ಗುತ್ತಿ June 17, 2018February 13, 2019 ಹಸಿ ಹಸಿಯಾದ ನೋವಿಗೆ ಬಿಸಿ ನೆನಪಿನ ಚಕ್ರದ ಮೊಣಚು ಚುಚ್ಚಿ ಚುಚ್ಚಿ ಗಾಯಗೊಳಿಸಿದಾಗ, ಗಟ್ಟಿಯಾದ ಬರ್ಫು ಸಮುದ್ರದ ಉಪ್ಪಾಗಿ ಕೈಗೆ ಜಿಗುಟಿ ಅಲ್ಲೇ ಒತ್ತಿಕೊಂಡಿತು. ***** Read More
ಹನಿಗವನ ಅವಳ ನಗು ಲತಾ ಗುತ್ತಿ June 10, 2018February 13, 2019 ಅವಳು ಹಲ್ಕರಿದು ಊರಗಲ ಬಾಯಿ ಮಾಡಿ ನಕ್ಕಾಗ, ನಮ್ಮೂರ ಕೆರೆಯದಷ್ಟೇ ನೆನಪಲ್ಲ, ಅದರ ಒಡ್ಡಿಗೆ ಹಾಕಿದ ಹೇರು ಪೇರು ಕಲ್ಲಿನ ಸಾಲುಗಳದೂ ನೆನಪು. ***** Read More
ಹನಿಗವನ ನಿನ್ನದೇ ಎಲ್ಲ ಲತಾ ಗುತ್ತಿ May 20, 2018February 13, 2019 ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! ***** Read More
ಹನಿಗವನ ತುಡಿತ ಲತಾ ಗುತ್ತಿ May 13, 2018February 13, 2019 ತಂಗಾಳಿಯೆಂದು ಕಿಡಕಿ ಬಾಗಿಲು ಹಾಕಿ ಕರ್ಟನ್ ಎಳೆದದ್ದಾಯಿತು - ಆದರೇನು ಬಾಗಿಲಿನ ಕೀಲಿಯ ಕಿಂಡಿಯಿಂದ ಒಳನುಸುಳುವುದೆ? ***** Read More