ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವೇನು? ಕನ್ನಡದ ಮೇಷ್ಟ್ರು ಸವಾಲು ಹಾಕಿದರು ಪಾಠದ ಮಧ್ಯೆ "ನನಗೆ ನೀರನ್ನು ಕೊಡು" ಎಂದರೆ ಗದ್ಯ "ಕೊಡು ನನಗೆ ನೀರನ್ನು" ಎಂದರೆ ಪದ್ಯ ಎಂದು ಉತ್ತರ ಕೊಟ್ಟ ನಮ್ಮ ತಿಮ್ಮ ಏನಾದ್ರಾಗಲೀ...
ಪುಸ್ತಕಗಳನ್ನು ಬರೆದು ಪ್ರಕಟಿಸಿ ಇದ್ದುಬಿಟ್ಟರೆ ನಮ್ಮ ಪಾಡಿಗೆ ಏನೂ ಪ್ರಯೋಜನವಿಲ್ಲ, ನಾವೇ ಹುಡುಕಬೇಕು ಅವುಗಳ ಬಗ್ಗೆ ವಿಮರ್ಶೆ ಬರೆಯಬಲ್ಲವರನ್ನು ತೆರಬೇಕು ಅದಕ್ಕೆ ತಕ್ಕ ಬಾಡಿಗೆ. *****
ಚುಟುಕಗಳೆಂದರೆ, ಕಾವ್ಯ ರಸಾನುಭವದ ಗುಟುಕುಗಳು, ಕಾವ್ಯಲಯದ ಸಣ್ಣ ಸಣ್ಣ ಕಿಟಿಕಿಗಳು, ಮುಳ್ಳುಬೇಲಿಯ ಮೇಲೆ ಹಬ್ಬಿರುವ ಕಾಡುಬಳ್ಳಿಗಳಲ್ಲಿ ಕ್ಷಣದಲ್ಲರಳಿ ಮರುಕ್ಷಣದಲ್ಲಿಲ್ಲವಾಗುವ ಬಣ್ಣ ಬಣ್ಣದ ಹೂವುಗಳು ಕಾವ್ಯರಾಶಿಯನ್ನಳೆವ ಸೇರು, ಪಾವು, ಚಟಾಕುಗಳು. *****
"ಚುಟುಕ" ಎಂದರೇನೆಂದು ಚುಟುಕಾಗಿ ಹೇಳಬೇಕೆಂದರೆ ಅದು ದಿಢೀರ್ ನೆ ಕಾವ್ಯದ ಕಿಕ್ ಕೊಡಬಲ್ಲ ಒಂದು ಬಗೆಯ ‘ಗುಟುಕ’ ಇನ್ನೂ ಬೇಕಿದ್ದರೆ ಹೇಳುತ್ತೇನೆ ಕೇಳಿ, ಇವು ಕಾವ್ಯವೆಂಬ ಗಾಜಿನಮನೆಗೆ ಇದ್ದಕ್ಕಿದ್ದಂತೆ ನುಗ್ಗಿ ಲಗ್ಗೆ ಹಾಕುವ ಗಿಡ್ಡ...