ಕೆಟ್ಟದೊಳ್ಳೆಯದೆಂದಿದೆಯಾ ? ಕಳ್ಳತನದೊಳಗೆ ?

ಓಟುಗಳ್ಳರು ಕೆಲರವರ ಮಾತುಗಳ್ಳರು ನೋಟುಗಳ್ಳರು ಕೆಲರವರ ಕೆಲಸಗಳ್ಳರು ತಟ್ಟಿ ನೋಡಿದೊಡೆಲ್ಲರಲು ಅಡಗಿಹರು ಕಳ್ಳರು ಇಷ್ಟು ಸಾಕೆನುವದೃಷ್ಟ ಬಲುಕಷ್ಟವೆನ್ನ ತೋಟದ ಪಟ್ಟಿಯನೇರಿಸಲು ಗಿಡ ಕದಿವೆ ನಾ ಕಾಡಿಂದ - ವಿಜ್ಞಾನೇಶ್ವರಾ *****

ಸಕ್ಕರೆ ರೋಗವತಿ ವೇಗದವಘಡವಲ್ಲವೇ ?

ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ ಬೇಕದುವೆ ಅವಘಡದ ವೇಗವಿಳಿಸುವುದು ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು - ವಿಜ್ಞಾನೇಶ್ವರಾ *****

ಅದು ಆದರ್ಶವಾದೀತೇ ? ಹೇಳಿದಂತೆ ಕೇಡ ಮಾಡಿದರೆ ?

ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ ಕದು ಉಳಿಯುವುದು ಕಡಿಮೆಯೆಂದದನು ಪೇ ಳದುಳಿದೊಡೆಮಗೆ ನಷ್ಟ ಬಹಳುಂಟು ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು - ವಿಜ್ಞಾನೇಶ್ವರಾ *****

ಮನೆಯಾದೀತೇ ? ಮರವ ಸೀಳದಿರೆ ?

ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ? ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ - ವಿಜ್ಞಾನೇಶ್ವರಾ *****

ಬಲು ತರಿದು ವರದಿ ಮಾಡಿದರದು ಕವನವಾದೀತೇ ?

ಬಲು ಕಷ್ಟ ಕವನದ ಹಾದಿಯದರೊಳು ವನದ ಸ ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ -...

ಕಟ್ಟಡದ ಕಟ್ಟುಗಳಲ್ಲಿ ಗಣಿತವಿದ್ದೀತು. ಕವನವಿದ್ದೀತೇ ?

ಪ್ರಕೃತಿ ಸಾರ ಸತ್ವವಾ ಗಣಿತ ಸಮೀಕರಣದೊಳ ಡಕವಾಗಿರ್‍ಪಂತೆ ಪ್ರಕೃತಿ ಸಾರ ತತ್ವವಾ ಕವನದೊಳ ಡಕವಾಗಿರ್‍ದೊಡದು ಕವನ, ಕವನ ಗಣಿತಗಳಗಣಿತ ಸ ಮೀಕರಣವೆಮ್ಮ ವನ ಕಾನನಗಳಿದನುಳಿಸಿಕೊಳದೇ ನು ಕವನವೋ ? ಹಣ ಗಣಿತ ಭವನದೊಳು -...

ಪ್ರಕೃತಿಯಲ್ಲಿ ದೋಷವಿದೆಯೇ ? ಗುಣವಿದೆಯೇ ?

ಬೆವರಿಸುವ ಬಿಸಿಲು ಬೆದರಿಸುವ ಸಿಡಿಲು ಬಯಸದೆಯೆ ಬಂದೆರಗುವವಘಡವು ಬದುಕಿನೆಮ್ಮಯ ಬಯಕೆಗಳನಲ್ಲಲ್ಲಲ್ಲೇ ಬಿಡದೆ ಕೊಡುತಿರ್ಪ ಪ್ರಕೃತಿಯೊಳಿರುತಿರಲು ಬಡವನದನುಂಡೆನ್ನ ಮಾತನೆಲ್ಲರೊಪ್ಪುವುದೆಂತು ? - ವಿಜ್ಞಾನೇಶ್ವರಾ *****

ಎನ್ನ ಭಾಷಾ ದೌರ್ಬಲ್ಯಕ್ಕೇನು ಮಾಡಲಿ ?

ಕೂಲಂಕಷದೋಳಾಲೋಚಿಸಲು ದೋಷವಿಲ್ಲದಿಹ ರಿಲ್ಲದಿರಲೆನಗೆ ಅವರಿವರ ದೋಷವೆಣಿಸುವ ಛಲವಿಲ್ಲವೆನ್ನನ್ನದಡಿ ನೆಲವು ಸ್ಪಂದಿಸಲದರ ಬಲವನು ಮೆರೆಸುವಾತುರದೊಳೆನ್ನ ಭಾಷೆಯು ಗೇಲಿ ಎನಿಸಿದೊಡೆನ್ನ ದೋಷವನಂತೆ ಮನ್ನಿಸಿರಿ - ವಿಜ್ಞಾನೇಶ್ವರಾ *****

ದಾರಿ ಮರೆಯದಿರಲಾ ದಾರಿ ತೋರುವುದೊಂದು ಪರಿಯಲ್ಲವೇ?

ತಿರು ತಿರುಗಿ ನೆನಪಿಸುತೆನ್ನರಿವನಿನ್ನಷ್ಟು ಒರೆ ಹಚ್ಚುವಾತುರದೊಳ್ ಬರೆದೆನ್ನ ಕವನಗಳು ತೋರು ಬೆರಳೆನಗೆ, ಎನ್ನ ಬದುಕಿನ ಸಾರವಿದು ಪರಿಶ್ರಮದ ಫಲವಿದಕೆ ತಿನುವಷ್ಟು ರುಚಿ ಇಕ್ಕು ದಾರಿ ದಣಿದವರಿಂಗಿದು ಉಣಿಸಾದೊಡತಿ ಯಶವು - ವಿಜ್ಞಾನೇಶ್ವರಾ *****

ಗುದ್ದಲಿಗಿದೆಯೇ ಲೇಖನಿ ಶಕ್ತಿ ?

ಬರೆಯುವೆನು ಕಾವ್ಯವೆಂದಾನು ಬಯಸಿರಲಿಲ್ಲ, ಕಾವ್ಯದೋದಿನ ಬಲವು ಎನಗಿಲ್ಲ, ಕಾವ್ಯವಾಗಲಿ ಬದುಕೆಂದು ಪಿಡಿದ ಗುದ್ದಲಿಯೆ ಬಿತ್ತಿದಕ್ಷರ ಧಾನ್ಯವಿದು - ವಿಜ್ಞಾನೇಶ್ವರಾ *****