ಅಭಿಮಾನವಿಡು

ಅಭಿಮಾನವಿರಲೀ, ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ, ವಿಶ್ವಕೋಶದ, ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ.... ಎಲ್ಲ ಲೋಕದ, ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ, ಜ್ಞಾನವೆಲ್ಲಕೂ ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ, ಧೃವಗಳೆಲ್ಲಕೂ ಧೃವವ...

ಪ್ರಶ್ನೆಗಳು

ಎಲ್ಲಿ ನೀನು, ನಿನ್ನೆ ನೆಲೆಯು, ತಿಳಿವುದೆಂತು ನಿನ್ನೊಳದನಿ, ಬಣ್ಣವೇರಿ ನಿಂತ ಮೊಗಕೆ, ಕಾಣಬಹುದೆ ನಿಜ ದನಿ? ವಿಸ್ತೃತ ಜಗವೆ ಕಿರಿದು ಮಾಡಿ ಕೀರ್ತಿ ಶಿಖರವೇರಿ ನಿಂತು ನನ್ನ-ನಿನ್ನ ದೂರಮಾಡಿದೆ, ಸರಕು-ಸಂಸ್ಕೃತಿ ದಾಳದಲ್ಲಿ ಏನೆಲ್ಲ ಕಳೇದೀಡಾಡಿದೆ....?...

ಎಚ್ಚರವಿರಲಿ

ಶಿಖರ ಶೃಂಗಗಳೆನಿತೆನಿತೆ ಇರಲಿ ನಿನ್ನ ಸಾಧನೆಯ ಹಿರಿಮೆ ಗರಿಮೆಗೆ, ಪ್ರೀತಿ ಹಣತೆ ನಂದದಿರಲಿ, ಮಧುರ ಭಾವ ಬಂಧುರ ಬದುಕಿಗೆ ಇಂದು ನಾಳೆಗಳಲಿ ನೀನೆ ನಿನ್ನ ಪರಧಿಯ ನೇಸರ, ಒಂದರೊಳಗೊಂದಾಗೋ ಪ್ರೀತಿಗೆ ನೀನೆ ತಿಂಗಳಂಗಳ ಚಂದಿರ,...

ಸಾಕ್ಷಾತ್ಕಾರ

ನಿನ್ನೆ ಧ್ಯಾನವೆ ನನ್ನ ಉಸಿರಲಿ, ಹಸಿರ ತೆರೆದಲಿ ನೆಲೆಸಲಿ... ನಿನ್ನೆ ದರುಶನವೆನ್ನೆ ಮನದಲಿ, ಬಾಳ ಭರವಸೆ ತುಂಬಲಿ.... ಇರುಳು ಕವಿದೆಡೆಯಲ್ಲಿ ನಿನ್ನಯ ಬೆಳಕಿನುತ್ಸವ ಕೊನರಲಿ, ಮನವು ಕದಡಲು ನಿನ್ನ ನೇಹದ ಮಧುರ ಗಾನವು ತಣಿಸಲಿ......

ವಿಶ್ವರೂಪ

ಈ ನೆಲವು ಬರಿಯ ಮಣ್ಣಲ್ಲವೊ ಈ ನೆಲದ ನುಡಿ ಕಿರಿದಲ್ಲವೊ ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ ವಿಶ್ವರೂಪವು ತೆರೆದಿದೆ ಬಿಂಕ ಬೆಡಗಿನ ನುಡಿಯ ಸಂಕರ, ತುಂಬ ಬಹುದೆ ತಾಯ್ನುಡಿ ಸಾಗರ? ಒನಪಿನೊನಪಿನ ಶಬ್ದ ಡಂಗುರ ತೋರಬಹುದೆ...