ಚಿಂತೆಯಾತಕೋ ಯೋಗಿಗೆ

ಚಿಂತೆಯಾತಕೋ ಯೋಗಿಗೆ ಸದ್ಗುರುವಿನಂತರಂಗದ ಭೋಗಿಗೆ ||ಪ|| ಕಂತುವಿನ ಕುಟ್ಟಿ ಕಾಲಮೆಟ್ಟಿ ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ ||ಅ.ಪ.|| ಕರಣಗಳ ಕಳಿದಾತಗೆ ಮರಣ ಮಾಯಾದುರಿತಭವವನ್ನು ಅಳಿದಾತಗೆ ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು ಧರಣಿಯೊಳು ಮೆರೆವಾತಗೆ ||೧|| ವಿಷಯವನು...

ಯೋಗಿಪದಕೆ ಅರ್ಥವಿಲ್ಲವೋ

ಯೋಗಿಪದಕೆ ಅರ್ಥವಿಲ್ಲವೋ ಸದ್ಗುರು ನಿರಾಲ ||ಪ|| ಭೋಗ ವಿಷಯ ನೀಗಿ ಭವದ ಬ್ಯಾಗಿಯಳಿದು ಬ್ರಹ್ಮ ಸುಖದ ||ಅ.ಪ.|| ತನುವಿನಾಶಯರಿದು ಮಾಯಾ- ಗೊನಿಯ ಕೊರಿದು ಕರ್ಮಸಾಗರ ಕನಸಿನಂತೆ ತಿಳಿದು ತಾನೆ ಚಿನುಮಯಾತ್ಮನಾಗಿ ಮೆರೆವ ||೧|| ಶಿಶುನಾಳೇಶ...

ಯೋಗಮುದ್ರಿ ಬಲಿದವನೆಂಬೋ

ಯೋಗಮುದ್ರಿ ಬಲಿದವನೆಂಬೋ ಆಗ ಮೂಲದಿ ನಿನಗೆ ಭೋಗ ವಿಷಯ ಲಂಪಟಂಗಳನರಿಯದೆ ಲಾಗವನರಿಯದೆ ಹೀಗಾಗುವರೆ ||೧|| ವಿಷಯದೊಳಗೆ ಮನಸನಿಟ್ಟು ಹುಸಿಯ ಬೀಳುವರೇನೋ ಮರುಳೆ ಅಸಮ ತೇಜವನು ತನ್ನೊಳು ಕಾಣುತ ಶಶಿಕಿರಣದ ರಸವನರಿಯದೆ ||೨|| ಬಗಿದುನೋಡಿ ಬ್ರಹ್ಮಜ್ಞಾನ...

ಸಂಸಾರದಿಂದ ಸದ್ಗತಿಹೊಂದಿ

ಸಂಸಾರದಿಂದ ಸದ್ಗತಿಹೊಂದಿ ಹವಣವರಿತು ಮಾಯೆಯ ಜಯಸಿ ಮರಣ ಗೆಲಿದವನೇ ಶಿವಯೋಗಿ ||ಪ|| ಭವಭಾರ ಜಾಯ ಕರ್ಮಗಳನು ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು ಬ್ರಹ್ಮಜ್ಞಾನ ದೊರೆವುತನಕ ತ್ರಿನಯನ ಆಶ್ರಯ ಹಿಡಿದು ಆವುದನರಿಯದೆ ಮುನ್ನಾ ಅನುವರಿತು...

ಪರಮಾನುಬೋಧೆಯೊ

ಪರಮಾನುಬೋಧೆಯೋ ಈ ಪರಮಾನುಬೋಧೆಯೋ ||ಪ|| ಸರಸಿಜ ಭವಗಿದು ಅರಕಿಲ್ಲದ ಪರಮಾನುಬೋಧೆಯೊ ||೧|| ಕಲಶಜಾಕೃತವನೆ ಈ ಬಲಯುತ ಛಲದಿ ನಿಲಯರೂಪ ||೨|| ಶಿಶುನಾಳಧೀಶನ ತಾ ಈ ಅಸಮ ಸ್ವರೂಪದ ಶಶಿಕಿರಣವೋ ||೩|| ****

ಬೋಧವಾದ ಮೇಲೆ ಜನರಪವಾದಕಂಜುವರೆ?

ಬೋಧವಾದ ಮೇಲೆ ಜನರಪವಾದಕಂಜುವರೆ? ಆದಿ ಅಂತ್ಯ ಆತ್ಮ ಆತ್ಮರುಭಯ ಬೇಧವಳಿದು ಸಾಧುಯೆನಿಸಿ ||ಪ|| ಕಾಲ ಕರ್ಮ ತುಳಿದು ತೂರ್ಯ ಜೋಲಿಯೊಳಗೆ ನುಡಿಯುತಿರಲು ಖೂಳಜನರು ಕೇಳಿ ಸಪ್ಪ ಕೀಳೋಣಾಗದೆನುತಿರಲು ||೧|| ಪರಮಗುರು ನಿರಾಲಹಸ್ತಾ ಶಿರದಮ್ಯಾಲ ಹರಿಯುತಿರಲು...

ಸಾಧುಗಳ ಸಹಜ ಪಥ

ಸಾಧುಗಳ ಸಹಜ ಪಥವಿದು ಆನಂದದಿಂದಿರುವುದು || ಪ || ಬೇಕು ಬ್ಯಾಡಾಯೆಂಬುದೆಲ್ಲಾ ಸಾಕುಮಾಡಿ ವಿಷಯ ನೂಕಿ ಲೋಕದೊಳು ಏಕವಾಗೆ ಮೂಕರಂತೆ ಚರಿಸುತಿಹರೋ || ೧ || ಎಲ್ಲಿ ಕುಳಿತರಲ್ಲೆ ದೃಷ್ಟಿ ಎಲ್ಲಿ ನಿಂತರಲ್ಲಿ ಲಕ್ಷ...

ಆರೂಢಾ ಈರೂಢಾ ಆರೂಢಾ ಯಾ ಆಲಿ

ಆರೂಢಾ ಈರೂಢಾ ಆರೂಢಾ ಯಾ ಆಲಿ ಪ್ರೌಢತನದಿ ಗುಂಡಾಡು ಹುಡುಗರೊಳು ಮೃಡ ನೀ ಪ್ರಭು ಆಡೋ ನಿರಂಜನ ||೧|| ಹಣುಮಂತಾ ಯೋಗಸಾ ಗುಣವಂತಾ ರಾಮಸಾ ಕಡಿದು ಕತ್ತಲದಿ ನಾ ಬಹಳ ವಿಚಾರದಿ ದಣಿದು ದಣಿದು...

ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ

ಇನ್ನಾರಿಗೆ ಹೇಳಲೆಣ್ಣಾ ಸಾಧುಗಳೆಲ್ಲಾ ಚನ್ನಾಗಿ ಕೇಳಿರಣ್ಣಾ ||ಪ|| ನೆನ್ನೆ ಮೊನ್ನೆಯೆಂದು ತನ್ನೊಳಗೆ ತಾ ತಿಳಿದು ತನ್ನೇಸ್ಹುಣ್ಣಿವಿ ದಿನಾ ಕನ್ನೆಯಮಾಸಿ ಕೂಡಿ ಬಂದು ||ಅ.ಪ.|| ಹಾವು ಇಲ್ಲದ ಹುತ್ತಾ ಕಚ್ಚಲು ಸರ್ಪಾ ಜೀವ ಹೋದಿತು ಸತ್ತಾ...

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ

ಸಾಧುಗಳಿಗಿದೆ ಸಾಧನವೋ ಸುಜ್ಞಾನವೋ         ||ಪ|| ಪದುಮ ದಳದ ಮದವು ಬೆಳೆದು ಸದಮಲಾತ್ಮಯೋಗ ತುದಿಯ- ಲದನುಯೇರಿ ಮೆರೀದು ಬೆರಿದು ಕದಲದಂತೆ ಕರುಣ ರಸದ                           ||೧|| ಚಂದ್ರ ಸೂರ್ಯರೊಂದುಗೂಡಿದಾ ಅಲ್ಲೆ ಮೂಡಿದಾ ರಂಧ್ರದೂಳಗೆ ಹೊಳೆವ ಮಿಂಚು ಒಂದೇ...