ಅಜ್ಜಿ ಕಾಲಿಗೆ ದೀಪ*

ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ *****...

ಇನ್ನೊಂದು ನಾಳೆ

ಸತ್ತ ನೆನ್ನೆ ಮೊನ್ನೆಗಳು ಎತ್ತೆತ್ತ ಹೋದವೋ ಕಣ್ಣಿ* ಕಿತ್ತು ಚದುರಿಬಿಟ್ಟವು ಕಣ್ಣಿಗೇ ಕಾಣದಂತೆ ಕತ್ತೆತ್ತಿ ನೋಡು ನಿನ್ನ ಮುಂದಿದೆ ಇಂದು ಇನ್ನೊಂದು ನಾಳೆ ಬದುಕ ಪುಸ್ತಕದ ಮತ್ತೊಂದು ಹಾಳೆ ***** *ಕಣ್ಣಿ: ಸಣ್ಣ ಕರುಗಳನ್ನು...

ಸತ್ಯ

ಸತ್ಯವೆಂಬುದಕ್ಕೆ ಮೈತುಂಬ ಮುಳ್ಳು ಎನಾಮಿಲ್ ಬಣ್ಣ ಹಚ್ಚಿದ ಬೊಂಬೆ ಮುಖದಂತೆ ನುಣುಪಾಗಿರುತ್ತದೆ ಸುಳ್ಳು ಇಳಿಜಾರು ಸಿಕ್ಕಿದೆಡೆ ಜಾರಿ, ಗಾಳಿ ಬೀಸಿದ ಕಡೆ ತೂರಿ ಸಿಂಹಾಸನವನ್ನೂ ಏರಿಬಿಡುತ್ತದೆ ಜೊಳ್ಳು *****

ಮುಖಗಳು

ಕೆಲವು ಮುಖಗಳೆದುರಾದಾಗ ನೋಡುತ್ತಲೇ ಒಮ್ಮೆ ಮುದ್ದಿಸಿಬಿಡಬೇಕೆನ್ನಿಸಿದರೆ ಇನ್ನು ಕೆಲವು ಎದುರಾದಾಗ ಆ ಹದ್ದಿನ ಸಮೀಪದಿಂದ ಸಿದ್ದಿಲ್ಲದೆ ಕಾಲಿಗೆ ಬುದ್ಧಿ ಹೇಳಲೇಬೇಕೆನಿಸುತ್ತದೆ. *****

ಕಾಲ

ಇದೊಂದು ಬೆಳೆಯುತ್ತ ಹೋಗುವ ಹನುಮನ ಬಾಲ. ತಾನು ಬೆಳೆಯುತ್ತಾ, ಬೆಳೆದು ನಿಂತುಳಿದೆಲ್ಲವನ್ನು ಸುಟ್ಟು ಬೂದಿ ಮಾಡುತ್ತದೆ, ಬೂದಿಯನ್ನೆ ಗೊಬ್ಬರ ಮಾಡಿ ಹೊಸ ಬೆಳೆಯ ಬೆಳೆಯುತ್ತದೆ *****