ಹತ್ತಿ ಹಿಂಜಿ ಮೋಡದ ರಜಾಯಿ ಮೈತುಂಬಾ ಹೊದ್ದು ಮುಸುಕಿ ಹಾಕಿ ಮಲಗಿ ಬಿಟ್ಟಿದ್ದಾನೆ ಚಂದ್ರ, ಯಾವಾಗ್ಲೂ ಓಡೋಡಿ ಬರೋನು ಮೋಡದಿಂದ ಹೊರಗೆ ಬರ್‍ತಾನೆ ಇಲ್ಲ ಇವತ್ತು ಇವನಿಗೆ ಮೂಡೇ ಇಲ್ಲ ಮಾಡೋದೇನು? *****
ಸೂರ್ಯ ಏನಿದ್ರೂ ಡೇ ಟೈಂ ಕೆಲಸಗಾರ ಅವನಿಗೇನ್ರೀ ಗೊತ್ತು ರಾತ್ರಿ ಕಾವಲು ಸಮಾಚಾರ ಕಾರು ಲಾರಿ ಬಸ್ಸು ಟ್ರಕ್ಕು ಸದಾ ಕಣ್ಣು ಕುಕ್ಕುವ ಲೈಟು ಇಂಟರ್‌ನ್ಯಾಷನಲ್ ಫ್ಲೈಟು ಅನಾಚಾರ ಅತ್ಯಾಚಾರ ಕಳ್ಳರು, ಕಾಕರು, ಕುರುಡರು,...
ಅಮವಾಸ್ಯೆಯ ಕಾಳರಾತ್ರಿಯಲ್ಲಿ ಗುಲ್ಲೊ ಗುಲ್ಲು ಎಲ್ಲಿ, ಎಲ್ಲಿ, ನಮ್ಮ ಚಂದಿರನೆಲ್ಲಿ, ಯಾರೋ ದುರಾತ್ಮರು ಅವನನ್ನು ಕಿಡ್ನ್ಯಾಪ್ ಮಾಡಿ ಹೊತ್ತುಕೊಂಡು ಹೋದವರು ಮಾರನೇ ದಿನ ಸಂಜೆ ಅವನನ್ನು ಎಸೆದು ಹೋಗಿದ್ದು ಎಲ್ಲೋ ಆಕಾಶದಂಚಿನಲ್ಲಿ, ಪಾಪ ಗೆರೆಯಂತಾಗಿಬಿಟ್ಟಿದ್ದ...
ನಮ್ಮ ಪಿಂಜ್ರಾಪೋಲ್ ಗೋಮಾತೆಯಲ್ಲವಯ್ಯ; ಕಾಮಧೇನುವೆಂಬ ಅಪರೂಪದ ಹಸು; ಅದು ಸ್ವರ್ಗದಲ್ಲಿದೆಯಂತೆ, ಅದನ್ನು ಪಡೆದವನು ಮೂರು ಲೋಕದೊಡೆಯ ಇಂದ್ರ ದೇವೇಂದ್ರ, ಬರೇ ಕೇಳಿದ ಕಥೆ ಅನ್ನು: ಅದರ ಸೌಂದರ್ಯವನ್ನು ಕಂಡವರೂ ಇಲ್ಲ, ಅದರ ಹಾಲು ಕುಡಿದವರಾರು...
ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್ ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ ರಥವೂ ಇಲ್ಲ ಕುದುರೆಯೂ ಇಲ್ಲ ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ. ನಮ್ಮ ಚಂದಿರ ಅತ್ಯಂತ ಸರಳ ಸುಂದರ....