ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ - ವಿಜ್ಞಾನೇಶ್ವರಾ *****
ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ - ವಿಜ್ಞಾನೇಶ್ವರಾ *****
ಕೃಷಿಯೊಳ್ ಕಡು ವಿಷವ ಕಡೆಗಣಿಸಿ ಕಡುಸೊಪ್ಪನರೆದರದೊಂದು ಕಿರು ಹಂತ ಕರೆ ಕರೆದು ನಾ ಸಹಜ, ಶೂನ್ಯ, ಸಾವಯವ ಕೃಷಿ ಬೆಟ್ಟವೇರಿಹೆನೆಂದರದು ಕಾಲ ಹರಣ ಕಡು ಕಷ್ಟದೆತ್ತರದ ಹಂತಗಳನ್ನಿಹುದು ನೋಡಾ - ವಿಜ್ಞಾನೇಶ್ವರಾ *****