ಹನಿಗವನ ಹಂತಗಳು ಪರಿಮಳ ರಾವ್ ಜಿ ಆರ್ June 14, 2017September 19, 2017 ಬಾಲ್ಯ ಗುನುಗಿ ಹಾಡುವ ಪಲ್ಲವಿ ಯೌವ್ವನ ರಾಗ ಅನುರಾಗದನುಪಲ್ಲವಿ ವೃದ್ಧಾಪ್ಯ ನೆರವಲು ನಂತರ ಚರಮಚರಣ ***** Read More
ಕವಿತೆ ಹಬ್ಬಗಳು ಪರಿಮಳ ರಾವ್ ಜಿ ಆರ್ June 7, 2017September 19, 2017 ಹುಟ್ಟೊಂದು ಯುಗಾದಿ ಹಬ್ಬ ಬದುಕಿನ ಆರಂಭ ಬಾಲ್ಯ ಸಂಕ್ರಾಂತಿ ಹಬ್ಬ ಬೆಳವ ಬಾಳಿಗೆ ಬುನಾದಿ ಕಂಬ ಯೌವ್ವನ ಕಾಮನಹುಣ್ಣಿಮೆ ರಂಗಮಹಲಿನ ಮಹಡಿ ಮೆಟ್ಟಲು ಮಧ್ಯವಯಸ್ಸು ದೀಪಾವಳಿ ಹಬ್ಬ ಕನಸುಗಳು ತೂಗಲು ಬೆಳಕಿನ ತೊಟ್ಟಿಲು ಇಳಿವಯಸ್ಸು... Read More
ಹನಿಗವನ ಸಂಸಾರಿ ಪರಿಮಳ ರಾವ್ ಜಿ ಆರ್ May 31, 2017September 19, 2017 ಸಂಸಾರಿಯಾಗುವ ಮೊದಲು ಮುಕ್ತಕ ಸಂಸಾರಿಯಾಗೆ ಚಂದ ಬಂಧ ಪ್ರಾಸ ಪ್ರಯಾಸ ಆಟ ಆಯಾಸ ***** Read More
ಹನಿಗವನ ಬಾಳು ಪರಿಮಳ ರಾವ್ ಜಿ ಆರ್ May 24, 2017September 19, 2017 ಬಾಳೊಂದು ಖಾಲಿ ಹಾಳೆ ಬರೆಯಿರಿ ಖವಾಲಿ ‘ತುಂಬಿ’ ‘ಸಿರಿ’ ಸುವ್ವಾಲೆ ‘ತುಂಬಿ’ ಯಂತೆ ಹಾರಿ ಸಿರಿವ್ವಾಲೆ! ***** Read More
ಹನಿಗವನ ಬದುಕು ಪರಿಮಳ ರಾವ್ ಜಿ ಆರ್ May 17, 2017September 19, 2017 ಹುಟ್ಟಿಗೆ ಕುಡಿಯುವ ಹಾಲ ಬಟ್ಟಲು ಬಾಲ್ಯಕ್ಕೆ ಮೆಲ್ಲುವ ಬೆಣ್ಣೆಯ ಬಟ್ಟಲು ಯೌವ್ವನಕ್ಕೆ ಹೀರುವ ಮದಿರೆಯ ಬಟ್ಟಲು ನಡುಹರೆಯಕ್ಕೆ ಚಪ್ಪರಿಸುವ ಮಸಾಲ ಬಟ್ಟಲು ಮುದಿಹರೆಯಕ್ಕೆ ಗುಟುಕರಿಸಲಾರದ ಔಷಧಿ ಬಟ್ಟಲು ಸಾವಿಗೆ-ಕೈ ಜಾರಿದ ಬೋರಲು ಬಟ್ಟಲು ಇದು... Read More
ಹನಿಗವನ ಗುಟುಕು ಪರಿಮಳ ರಾವ್ ಜಿ ಆರ್ May 10, 2017September 19, 2017 ಹರೆಯ ಇರುವಾಗ ಬಾಳ ಗುಟುಕು ಮದಿರೆ ತುಂಬಿದೆ ಸೀಸೆ ಗಮ್ಮತ್ತಿನ ಹೊತ್ತು! ಮುಪ್ಪಿನಲಿ ಬಾಳಗುಟುಕು ಖಾಲಿ ಸೀಸೆ ಗಪ್ಚಿಪ್ ಗುಟಕ್ ಎನ್ನುವ ಹೊತ್ತು! ***** Read More
ಹನಿಗವನ ಬಾಳ ರುಚಿ ಪರಿಮಳ ರಾವ್ ಜಿ ಆರ್ May 3, 2017September 19, 2017 ಕಿಶೋರತನದಲಿ ಬಾಳು ಕಿರಿನೆಲ್ಲಿಕಾಯಿ ಹರೆಯದಲಿ ಬೆಟ್ಟದ ನೆಲ್ಲಿಕಾಯಿ ನಡುವಯಸ್ಸಿನಲಿ ಕುಂಬಳಕಾಯಿ ಇಳಿ ವಯಸ್ಸಿನಲಿ ಹಾಗಲಕಾಯಿ! ***** Read More
ಹನಿಗವನ ದೃಷ್ಟಿ – ಅಂತರ ಪರಿಮಳ ರಾವ್ ಜಿ ಆರ್ April 26, 2017September 18, 2017 ಹರೆಯದ ದೃಷ್ಟಿಗೆ ಮನೆ ಜೈಲು ಮಕ್ಕಳು ಐಲು - ಪೈಲು ಹೆಣ್ಣು ಸುಗ್ಗಿಯ ಕುಯಿಲು ಮುಪ್ಪಿನ ದೃಷ್ಟಿಗೆ ಮನೆ ವೃಂದಾವನ ಹೆಣ್ಣು ಗೃಹದೇವಿ ಮಕ್ಕಳು ಮಾಣಿಕ್ಯ ***** Read More
ಹನಿಗವನ ಗಂಡು ಹೆಣ್ಣು ಪರಿಮಳ ರಾವ್ ಜಿ ಆರ್ April 19, 2017September 18, 2017 ಗಂಡು - ಬ್ರಹ್ಮಾಂಡದ ಕಣ್ಣು ಹೆಣ್ಣು - ಬ್ರಹ್ಮಾಂಡದ ಹಣ್ಣು ಮಗು - ಬ್ರಹ್ಮಾಂಡದ ಮೈದಾನ, ಮಣ್ಣು! ***** Read More
ಹನಿಗವನ ಅಂತರ ಪರಿಮಳ ರಾವ್ ಜಿ ಆರ್ April 12, 2017September 18, 2017 ಇಪ್ಪತ್ತರಲ್ಲಿ ಬಾಳು ಎಳನೀರ ತೆಂಗಿನಕಾಯಿ ಎಪ್ಪತ್ತರಲ್ಲಿ ಬಾಳು, ನೀರು ಕೊಬ್ಬರಿ ಇಲ್ಲದ ಬರಿಚಿಪ್ಪಿನ ತೆಂಗಿನ ಗರಟ ***** Read More