Home / ಬೆಳ್ಳಿ ಹೂವು

Browsing Tag: ಬೆಳ್ಳಿ ಹೂವು

ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್‌ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ – ನಮ್ಮ ಮಕ್ಕಳು ಮೊಮ್ಮಕ್ಕಳಿಗೆ. *****...

ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ ಆಗಿಬಿಡುವುದು. *****...

೧ ಈಗೀಗ ನಿಸರ್ಗಕ್ಕಿಂತಲೂ ಹೆಚ್ಚಾಗಿ ಪತ್ರಿಕೆಗಳು, ಕ್ಯಾಲೆಂಡರ್‌ಗಳು ರೇಡಿಯೋ, ಟಿ.ವಿ. ಅಡ್ವರ್ಟೈಸ್ಮೆಂಟ್ ಗಳು ಎಬ್ಬಿಸುತ್ತವೆ ನೆನಪಿಸುತ್ತವೆ ಯುಗಾದಿ ಯುಗಾದಿ ಎಂದು ವೇಷ ಭೂಷಣ ತೊಟ್ಟು ಸಡಗರಿಸಿರೆಂದು. ೨ ಒಮ್ಮೊಮ್ಮೆ ನೀನು ಸಿಹಿ – ನಾ...

ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ ಕೃತಾರ್ಥರಾಗುತ್ತವೆ ಪಕ್ಷಿಗಳು. *****...

ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೇ ಹುಳ ಹುಪ್ಪಡಿಗಳೇ, ಹಾದಿಹೋಕರೆ ಇದು ನಿಮ್ಮದೆ ರಾಯಲ್ ಪ್ಯಾಲೆಸ್ ಯಾವ ಅಭ್ಯಂತರವೂ ಇಲ್ಲದೆ ವಿಶ್ರಮಿಸಿ, ಉಪಹರಿಸಿ ಎಕ್ಯೂಸ್ ಬ್ರೋಕರ್‍ಸ್. *****...

ಬೆಳಗಾದರೆ ಅರಳಿ ನಿಲ್ಲುತ್ತವೆ ತೊನೆದಾಡಿ ಕಂಪುಹರಿಸುತ್ತ ಸ್ನಿಗ್ಧ ಹೂವುಗಳು, ಕಾಯುವದೇ ಕಠಿಣ ಕಟುಕ ಚಿಟ್ಟೆ – ಕೀಟಗಳಿಂದ. *****...

ಇಂತಿಷ್ಟೇ ಎಲೆ ಹೂವು ಕಾಯಿಗಳಿರಬೇಕೆಂದೇನಾದರೂ ಕಾಯ್ದೆ ಇದೆಯೇ ಮರಕ್ಕೆ, ಹಾಗಾದರೆ ಅವುಗಳೆಲ್ಲ ಬಿದ್ದು ಉದುರಿ ಹೋದಾಗ? ಮತ್ತೆ ಕರೆಯುತ್ತದೆಯಲ್ಲ ವಸಂತನನ್ನು. *****...

ಹಾದಿ ಬೀದಿ ಗುಡಿ ಗುಂಡಾರ ಚರ್ಚು ಮಸೀದಿ ಗಿರಿ ಕಂದರಗಳನ್ನೆಲ್ಲಾ ಮತ ಭೇದವಿಲ್ಲದೆ ತೊಳೆದು ಪೂಜಿಸುವ ನಿಸರ್ಗ ಭಕ್ತ. *****...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...