ಏಳುವುವು ಚಿಂತೆಗಳು ಸುಖವ ಒಮ್ಮೆಗೆ ಹೂಳಿ
ಗಾಳಿ ಬೀಸಲು ಏಳುವಂತೆ ಧೂಳಿ,
ಕಣ್ಣೀರ ಮೇಘಗಳೆ ಸುರಿದು ಹೋದವು ಶೋಕ-
ವಾದ್ಯದಲಿ ಮಲ್ಹಾರ ಭಾವದಾಳಿ
ಪ್ರೀತಿ ತೋಯಿಸಿತೆನ್ನ ಕರುಣೆಯಲ್ಲಿ
ನುಡಿಸಿ ವಿರಹವ ಹೃದಯವೀಣೆಯಲ್ಲಿ
ನಿನ್ನ ನೆನಪಿನ ಅಲೆಯು ತಾಗಿದೊಡನೆ
ದನಿ ಹಬ್ಬುವುದು ಸುಖಕೆ ಇಂಪಿನಲ್ಲಿ
ಬಾನಿನಲ್ಲೇನೊ ಆತಂಕ ಮರೆಗ
ಕಣ್ಣೀರ ಸುರಿಸುತಿದೆ ಮುಗಿಲು ಅದಕೆ
ಕಾದಿರಲು ದೀನ ನಾ ಮರದ ಕೆಳಗೆ
ಹಾರಿತೇ ಕೋಗಿಲೆ ಬೇರೆ ಮರಕೆ!
(ಸ್ಫೂರ್ತಿ: ಲಾಲ್ ಮೆಹ್ರಾಬ್ ರಾಮ್ ಸಬಖತ್ ಅವರ ಒಂದು ಕವಿತೆ)
*****
ಪುಸ್ತಕ: ನಿನಗಾಗೇ ಈ ಹಾಡುಗಳು
೪