ಹೋಗಲೇಬೇಕು ನಾನೀಗಲೇ
ಬಾಡುತಿದೆ ಮಲ್ಲಿಗೆ ಆಗಲೇ
ಸಮಯವೊ ಜಾರುತಿದೆ ಮೆಲ್ಲಗೆ-ನಿಲ್ಲದೆ
ಹೋಗಲೇಬೇಕು ನಾನೀಗಲೇ
ಕಿಡಿತಾಗಿ ಯೌವನದ ಧೂಪ ಹೊಗೆಯಾಡಿದೆ
ಎಲ್ಲೆಲ್ಲು ಪರಿಮಳದ ಬಳ್ಳಿಗಳ ಚೆಲ್ಲಿದೆ.
ಈ ಎಲ್ಲ ಸಂಭ್ರಮ ಆರಿಹೋಗುವ ಮುನ್ನ
ಪರಿಮಳದ ನಾಡಿಗೇ ಧಾಳಿ ಹೂಡುವ ನನ್ನ
ಇನಿಯನಿರುವಲ್ಲಿಗೆ, ತಿಳಿಯದೊಲು ಮೆಲ್ಲಗೆ
ಹೋಗಲೇಬೇಕು ನಾನೀಗಲೇ
ತೆರೆಯಿತದೊ ಮುಚ್ಚಿದ ಕೇದಗೆಯ ಬಾಗಿಲು
ಜನುಮ ಜನುಮದ ಸ್ನೇಹ ಕೈ ಮುಗಿದು ಬೇಡಲು
ಕಾಯುತಿದೆ ಮಲ್ಲಿಗೆಯ ಮಂಚ ಅಲ್ಲೀಗಲೂ
ನಲ್ಲನಿಗೆ ಬೆಲ್ಲವಾಗುತ ಇಲ್ಲವಾಗಲು
ಹೋಗಲೇಬೇಕು ನಾನೀಗಲೇ
*****
ಪುಸ್ತಕ: ನಿನಗಾಗೇ ಈ ಹಾಡುಗಳು