ಈ ದೇಶದಲಿ ನ್ಯಾಯ ನಿರ್ಣಯಕೆ
ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ
ಹೊಲಿಗೆ ಹಾಕಿ ಬಿಗಿ ಬಂಧನ
ಪ್ರತಿ ದಿನದ ಒಂದು ಹೊತ್ತಿನ ಊಟಕೆ
ಪರದಾಡುವ ಕೂಲಿಗೆ ಯಾವ ಆದೇಶ
ಬೆಚ್ಚನೆಯ ಭರವಸೆ ಹುಟ್ಟು ಹಾಕೀತು
ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ
ನಲುಗಿದ ಅವರಿವರ ಹೂವಿನ ಆತ್ಮಗಳು.
ನನ್ನ ಮಗಳಿಗೆ ಶಾಲೆಗೆ ರಜೆ ಘೋಷಿಸಿದ್ದಾರೆ
ಯಾಕೆ ಅಮ್ಮ ಅಂತ ಅವಳು ನೂರು ಬಾರಿ
ಕೇಳಿದ್ದಾಳೆ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ
ಮಗಳ ಮುಂದಿನ ದಿನಗಳು ಕರಾಳ
ಹಾಯಾಗಿಲ್ಲ ಎಲ್ಲೆಲ್ಲೂ ಹತಾಶೆಗಳು
ದೇಶದಲ್ಲಿ ಸತ್ತವರು ಸತ್ತವರ ಗೋರಿಗಳು
ದ್ವೇಷವನ್ನೂ ರೋಷವನ್ನೂ ಹುಟ್ಟು ಹಾಕುತ್ತವೆ
ಮುಳ್ಳಿನ ಕಂಟಿಗಳಿಂದ ಶಾಂತಿ ಹೂಗಳ ಹೇಗೆ ತರಲಿ.
ಎಷ್ಟೊಂದು ಸಮಯ ಹಾಳು ಮಾಡುತ್ತಾರೆ
ದುಡಿಯುವ ಲಜ್ಜೆಗೇಡಿಗಳು ತಿಳಿಗೇಡಿನ
ಸೆಣಸಾಟದಲಿ, ಗದ್ದಲ ಎಬ್ಬಿಸುವುದು ಬಿಟ್ಟು
ಇನ್ನೇನು ಗೊತ್ತು ಜನರಿಗೆ ಗೊಂದಲ ಪುರದಲಿ
ಕೊನೆವರೆಗೂ ಉಳಿಯುವ ಕಣ್ಣೀರಿಗೆ
ಇವರೇಕೆ ಕೊಡಲಿ ಕಾವು ಹಚ್ಚುತ್ತಾರೆ
ಅಲ್ಲಿ ಒಂದು ಮಕ್ಕಳ ನಂದನವನ ಅರಳಲಿ
ನಾವು ಪ್ರೀತಿಸುವವರು ಸಿಗಲಿ ದೇವರೇ
ಈ ಜಗದಲಿ ಒಂದು ವಿಸ್ಮಯ ಮುಗುಳ್ನಗೆಯಲಿ.
*****