ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು ಹಣ್ಣು ಬಾಳೇ ಹಣ್ಣು ಯಾರಿಗೆ ಬೇಕು...
ಅಮ್ಮಾ, ಅಮ್ಮಾ, ಸೂರ್ಯ ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ ಅದೆಲ್ಲಾ ಸುಳ್ಳಂತೆ ಹ್ಹೂ ನಮ್ಮ ಮಿಸ್ಸೇ ಹೇಳಿದ್ರು ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ ವಾಪಸ್ಸು ಬಂದ್ಬಿಡ್ತಾನಂತೆ. *****
ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿಂದಿಯಾಗುತ್ತವೆ ಕೆಲವು ನನ್ನ ಮೈಕೈ ಕಾಲುಗಳೊಡನೆ...