ಹನಿಗವನ ಮಾತು ಪಟ್ಟಾಭಿ ಎ ಕೆ July 8, 2021January 4, 2021 ಅತಿ ಆದಲ್ಲಿ ಅನಾಹುತ; ಮಿತಿ ಇದ್ದಲ್ಲಿ ಆಹುತ; ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೭ ರೂಪ ಹಾಸನ July 6, 2021December 2, 2020 ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. ***** Read More
ಹನಿಗವನ ಸನ್ಯಾಸಿ ಶ್ರೀವಿಜಯ ಹಾಸನ July 4, 2021January 1, 2021 ಭರಿಸಲಾಗುತ್ತಿಲ್ಲ ಹೆಂಡತಿಯ ಬೇಡಿಕೆಗಳ ರಾಶಿ ಸಂಸಾರ ತ್ಯಜಿಸಿ ನಾನಾಗಬೇಕೆಂದಿರುವೆ ಸನ್ಯಾಸಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೯ ಶರತ್ ಹೆಚ್ ಕೆ July 2, 2021December 12, 2020 ಎಲ್ಲೋ ಕಳಕೊಂಡ ಖಾಲಿ ಪುಟವ ನಿನ್ನ ಕಣ್ಣಲ್ಲೇ ಹುಡುಕುವ ಹಟವ ಕೊಂದುಬಿಡಬೇಕೆಂದಿದೇನೆ ಗೆಳತಿ, ಎಲ್ಲರಂತೆ ಬದುಕುವ ಚಟವ ನನ್ನದಾಗಿಸಿಕೊಳ್ಳುವ ಸಲುವಾಗಿ! ***** Read More
ಹನಿಗವನ ಸಂಸಾರ ಪಟ್ಟಾಭಿ ಎ ಕೆ July 1, 2021July 1, 2021 ಸಂಸಾರವೂ ಒಂದರ್ಥದಲ್ಲಿ ಸಮ್ಮಿಶ್ರ ಸರ್ಕಾರವೇ; ಹೊಂದಾಣಿಕೆಯದೇ ಮಂತ್ರ ತಪ್ಪಿದಲ್ಲಿ ದಂಪತಿಗಳು ಅತಂತ್ರ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೬ ರೂಪ ಹಾಸನ June 29, 2021December 2, 2020 ಹಸಿವಿನ ನಿರಂಕುಶಕ್ಕೆ ಭಾಷೆ ಇಲ್ಲ ಅರ್ಥವಿಲ್ಲ ವಿವರಣೆಯೂ ಇಲ್ಲ ಅನುಭವ ವೇದ್ಯ. ರೊಟ್ಟಿಯ ಘನತೆಗೆ ಬೆಲೆಯಿಲ್ಲ ಅಳತೆಯಿಲ್ಲ ಅಸ್ತಿತ್ವವೇ ನಗಣ್ಯ. ***** Read More
ಹನಿಗವನ ಕಣ್ಣೀರು ಶ್ರೀವಿಜಯ ಹಾಸನ June 27, 2021January 1, 2021 ಜಲಜನಕ + ಆಮ್ಲಜನಕ = ನೀರು ಗಂಡ + ಹೆಂಡತಿ = ಕಣ್ಣೀರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೮ ಶರತ್ ಹೆಚ್ ಕೆ June 25, 2021December 12, 2020 ಕತ್ತಲೆಯೊಳಗೆ ಕಳಚಿ ಬಿದ್ದವನಿಗೆ ಮಿನುಗುವ ಚುಕ್ಕಿ ಅವಳ ನೆನಪು ***** Read More
ಹನಿಗವನ ಬಡವೆ ಪಟ್ಟಾಭಿ ಎ ಕೆ June 24, 2021January 4, 2021 ಅವಳು ಮೈ ತುಂಬಾ ತೊಟ್ಟಿದ್ದಾಳೆ ಒಡವೆ; ನೋಟವೇ ಹೇಳುತ್ತೆ ಅವಳಲ್ಲ ಬಡವೆ! ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೫ ರೂಪ ಹಾಸನ June 22, 2021December 2, 2020 ಬಾಳಲಾಗದ ಬಾಳಬಾರದ ವೇದಾಂತ ಸಿದ್ಧಾಂತ ಮೂಗಿನ ನೇರದ ತತ್ವಜ್ಞಾನ ಅವರಿವರ ಉಪದೇಶಾಮೃತ ಕೇಳಿ ಕೇಳಿಯೇ ರೊಟ್ಟಿ ಹಸಿವಿನ ಜಗಳ ಜೀವಂತ. ***** Read More