ಹನಿಗವನ ಛಲ ಪರಿಮಳ ರಾವ್ ಜಿ ಆರ್ January 29, 2022December 19, 2021 ನನ್ನ ನಾ ಗುಡಿಸಿಕೊಂಡರೆ ಸಾಲದೇ? ತೊಳೆದು ಕಣ್ಣೀರಿನಲ್ಲಿ ಮೋಡ ಗುಡಿಸುವೆನೆಂಬ ಛಲವೇಕೆ? ಸೂರ್ಯ ಮೂಡುವನು ತನಗೆ ತಾನೇ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೯ ಶರತ್ ಹೆಚ್ ಕೆ January 28, 2022November 24, 2021 ನಿನ್ನ ನಗೆಯಲ್ಲೊಂದು ಜೀವಂತ ನೋವಿನ ಚಹರೆ ಇರಬಹುದೇ? ***** Read More
ಹನಿಗವನ ಭವಿಷ್ಯ ಜರಗನಹಳ್ಳಿ ಶಿವಶಂಕರ್ January 24, 2022December 28, 2021 ವೃತ್ತದಲ್ಲಿ ನಿಂತು ನಾಲ್ಕು ದಿಕ್ಕಿಗು ಹಾದು ಹೋಗುವವರಿಗೆಲ್ಲ ನಿಲ್ಲಿಸಿ ಹಸ್ತ ತೋರಿಸುವ ಪೊಲೀಸರಿಗೆ ಯಾರೂ ಹೇಳಲಿಲ್ಲ ಭವಿಷ್ಯ ***** Read More
ಹನಿಗವನ ಕಾಯಕ ಶ್ರೀವಿಜಯ ಹಾಸನ January 23, 2022December 29, 2021 ಬದುಕು ಕ್ಷಣಿಕ ಬವಣೆ ಅಧಿಕ ಹುಟ್ಟು ಸಾವುಗಳ ನಡುವೆ ಪ್ರೀತಿಯಿಂದ ತೃಪ್ತಿಯಿಂದ ನಡೆಸಬೇಕು ಕಾಯಕ ***** Read More
ಹನಿಗವನ ಗರುಡ ಗಂಭ ಪರಿಮಳ ರಾವ್ ಜಿ ಆರ್ January 22, 2022December 19, 2021 ನನ್ನೊಳಗೆ ತುಂಬಿದೆ ಆಕಾಶ ಬಿಂಬ ನಿಂತಿರುವೆ, ದೇವ ನಿನಗಾಗಿ, ನಾ ಗರುಡ ಗಂಭ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೮ ಶರತ್ ಹೆಚ್ ಕೆ January 21, 2022November 24, 2021 ಒಲವು ತೆರವಾದ ಮನದ ಮನೆಯ ಪಾಡು ಲಯ ತಪ್ಪಿದ ಹಕ್ಕಿಯ ಹಾಡು ***** Read More
ಹನಿಗವನ ಬಂಧನ ಜರಗನಹಳ್ಳಿ ಶಿವಶಂಕರ್ January 17, 2022December 28, 2021 ಹೃದಯ ಕದ್ದ ಮನದನ್ನೆಯ ಮೇಲೆ ಮದುವೆಯ ಮೊಕದ್ದಮೆಯ ಹೂಡಿ ಗೃಹ ಬಂಧನದಲ್ಲಿಡುವ ಪ್ರತಿಯೊಬ್ಬ ಗಂಡಸು ಪೊಲೀಸು ***** Read More
ಹನಿಗವನ ಸ್ವರ್ಗ – ನರಕ ಶ್ರೀವಿಜಯ ಹಾಸನ January 16, 2022December 29, 2021 ಗಂಡು ಮಕ್ಕಳಿಂದಲೇ ಸಿಗದು ಸ್ವರ್ಗ ಹೆಣ್ಣು ಮಕ್ಕಳಿಂದ ಸಿಗದು ನರಕ ತುತ್ತು ಅನ್ನ ಹಿಡಿಯಷ್ಟು ಪ್ರೀತಿ ತೋರಿಸದ ಮಕ್ಕಳಿಂದ ಜೀವನ ರೌರವ ನರಕ ಸತ್ತಮೇಲೇಕೆ? ಕಾಣದ ಸ್ವರ್ಗ ***** Read More
ಹನಿಗವನ ಕೆನ್ನೆ ನಂನಾಗ್ರಾಜ್ January 15, 2022January 9, 2022 ನೆನಪಿದೆ ನಿನ್ನ ಯೌವನದ ಹಾಲುಗೆನ್ನೆ, ಇಂದೂ ಹಾಲುಗೆನ್ನೆಯೇ ಸ್ವಲ್ಪ ಕೆನೆಕಟ್ಟಿದೆಯಷ್ಟೆ! ***** Read More
ಹನಿಗವನ ನಾನೊಂದೆ ನಿಂತಿರುವೆ ಪರಿಮಳ ರಾವ್ ಜಿ ಆರ್ January 15, 2022December 19, 2021 ನನ್ನ ನಗೆಯ ಹಿಂದೆ ನಿಂತಿದೆ ಜಗವು ನನ್ನ ಅಳುವಿನ ಹಿಂದೆ ನಿಂತಿರುವೆ ನಾನೊಂದೆ. ***** Read More