ಹನಿಗವನ ತುಂತುರು ಮಳೆಯ ಪರಿಮಳ ರಾವ್ ಜಿ ಆರ್ February 27, 2013June 14, 2015 ಹನಿಗವನಕ್ಕೆ ಹತ್ತಾವತಾರ ಭಾವ ಭೂಮಿಕೆಗೆ ಇಬ್ಬನಿಯ ಹಾರ ಮನೋ ನಿಹಾರಿಕೆಗೆ ಹನಿಗವನ ತೇರ ಮುಟ್ಟಿದೆ ಭಾವತೀರ ಕವಿ ಲೇಖನಿಯ ಸಾರ ***** Read More
ಹನಿಗವನ ತೆರೆ ಪರಿಮಳ ರಾವ್ ಜಿ ಆರ್ February 9, 2013June 14, 2015 ಬುವಿಯ ಹೆಗಲಿಗೆ ಬಾನ ಮುಗಿಲು ಇಳಿಬಿಟ ತೆರೆ ಮಾಯದ ಮುಸುಕಿನ ಹೊರೆ ರವಿ ಮೂಡಿ ಬರೆ ಬೆಳಕಿನ ಧರೆ ***** Read More
ಹನಿಗವನ ತೀರ್ಮಾನ ಪರಿಮಳ ರಾವ್ ಜಿ ಆರ್ February 2, 2013June 14, 2015 ಸಾವು ಬಾಳಿನ ಕೊನೆಯ ತೀರ್ಮಾನ ಶಾಂತಿ ಬಹುಮಾನ ಸ್ವರ್ಗ ಸೋಪಾನ **** Read More
ಹನಿಗವನ ತಾಳ್ಮೆ ಪರಿಮಳ ರಾವ್ ಜಿ ಆರ್ January 27, 2013June 14, 2015 ತಾಳಿದವಳು ಬಾಳಿಯಾಳು ತಾಳಿ ಇದ್ದವಳು ಗಂಡು ಗೂಳಿಯ ಅಡಗಿಸಿಯಾಳು ***** Read More
ಹನಿಗವನ ಸೃಷ್ಟಿ ಪರಿಮಳ ರಾವ್ ಜಿ ಆರ್ January 25, 2013June 14, 2015 ಬಹಿರ್ ಸೃಷ್ಟಿ ಬಿತ್ತಿತ್ತು ಬೀಜ ನನ್ನೊಳಗಣ ಅಂತರ್ ದೃಷ್ಟಿ ನೀರೆರೆದು ಹಡೆದಿತ್ತು ಜೀವ ಭಾವ **** Read More
ಹನಿಗವನ ತುಂಬಿದ ಕೈ ಪರಿಮಳ ರಾವ್ ಜಿ ಆರ್ January 21, 2013June 14, 2015 ಹೋಟೆಲ್ ಸ್ಪೆಷಲ್ ಊಟ? ಮಾಲೀಕನಿಗೆ ಕೈತುಂಬ ದುಡ್ಡು ತಿಂದವನಿಗೆ ಕೈತುಂಬ ಜಿಡ್ಡು **** Read More
ಹನಿಗವನ ಸಿರಿಗಂಟು ಪರಿಮಳ ರಾವ್ ಜಿ ಆರ್ January 18, 2013June 14, 2015 ಅಕ್ಷರದ ಅರ್ಥಕ್ಕೆ ಬೇಕು ನಿಘಂಟು ಭಾವಾರ್ಥಕ್ಕೆ ಬೇಕು ಹೃದಯದ ಸಿರಿಗಂಟು! **** Read More
ಹನಿಗವನ ಸತ್ಯ ಪರಿಮಳ ರಾವ್ ಜಿ ಆರ್ January 11, 2013January 5, 2016 ಸತ್ಯ, ಸೂರ್ಯನಂತೆ ನೋಡುವುದು ಕಷ್ಟ ಸತ್ಯ, ಅಗ್ನಿಯಂತೆ ನುಂಗುವುದು ಕಷ್ಟ ಸತ್ಯ, ಬೆಟ್ಟದಂತೆ ದಾರಿ ಸವೆಸುವುದು ಕಷ್ಟ ಸತ್ಯ ಸಾಗರದಂತಾಗಲಿ ಮುಳುಗಿ ಮುಳುಗಿ ತೇಲುವುದು ಒಳಿತು **** Read More
ಹನಿಗವನ ಸಾರ್ಥಕತೆ ಪರಿಮಳ ರಾವ್ ಜಿ ಆರ್ January 4, 2013June 14, 2015 ಮಲ್ಲಿಗೆ ಸಂಪಿಗೆ ಹೂವಾಗಿ ಬಾಳಿವೆ ಕಣಕಣದಿ ಮಾವು ಬಾಳೆ ಫಲವಾಗಿ ಮಾಗಿವೆ ಕ್ಷಣ ಕ್ಷಣದಿ ನಾ ಕಳೆದೆ ಬಾಳೇಕೆ ಭಣ ಭಣದಿ? **** Read More
ಹನಿಗವನ ಸಂಸಾರ ಪರಿಮಳ ರಾವ್ ಜಿ ಆರ್ December 28, 2012June 14, 2015 ಹೆಂಡತಿ "ಆಗಲಿ ಬಿಡಿ" ಗಂಡ "ಹೋಗಲಿ ಬಿಡೆ" ಎಂದರೆ ಸಂಸಾರ ಗಾಡಿಯಲಿ ಇಲ್ಲ ಗಡಿಬಿಡಿ ***** Read More