ಹನಿಗವನ ನಿಮಿತ್ತ ಆಯ್ತೂಂತ ಶ್ರೀನಿವಾಸ ಕೆ ಎಚ್ November 7, 2016February 5, 2016 ನಿಮಿತ್ತ ಆಯ್ತೂಂತಾ ಬೆಳಗಿನವರೆಗೂ ಕದ್ದ ಚಂದ್ರ, ರಾಜಾರೋಷ ಸೂರ್ಯನ ಕೈಲಿ ಸಿಕ್ಕು ಹಾಕಿಕೊಂಡು, ಅವನ ಸಿಟ್ಟು ನೆತ್ತಿಗೇರೊ ಅಷ್ಟರಲ್ಲಿ ಬೆಳ್ಳಗೆ ಬಿಳಿಚಿ ತೆಳ್ಳಗಾಗಿದ್ದ. ***** Read More
ಹನಿಗವನ ಅತ್ತೆ ಪಟ್ಟಾಭಿ ಎ ಕೆ November 4, 2016October 16, 2016 ಗಂಡನ ಅಮ್ಮನ ಕಾಟದಿಂದ ಅತ್ತೂ, ಅತ್ತೂ, ಬೇಸತ್ತು ಸುಸ್ತಾದ ಸೊಸೆ ಕಾಟ ಕೊಟ್ಟವಳಿಗೆ ಇಟ್ಟ ಹೆಸರು - ಅತ್ತೆ! ***** Read More
ಹನಿಗವನ ಉತ್ಸವ ಪರಿಮಳ ರಾವ್ ಜಿ ಆರ್ November 2, 2016February 3, 2016 ಸಂಬಳ ಬರುವುದು ಮಾಸೋತ್ಸವ, ಬಡತನ ಸವೆಯುವುದು ನಿತ್ಯೋತ್ಸವ! ***** Read More
ಹನಿಗವನ ಕನ್ಯೆ ಪಟ್ಟಾಭಿ ಎ ಕೆ October 28, 2016October 16, 2016 ಕನ್ಯೆ ಜೀರಿಗೆ ಬೆಲ್ಲ ಬಿದ್ದ ಮೇಲೆ ಆಗುವಳು ಅನ್ಯೆ! ***** Read More
ಹನಿಗವನ ಅನಿಶ್ಚಯತೆ ಪರಿಮಳ ರಾವ್ ಜಿ ಆರ್ October 26, 2016February 3, 2016 ಇವತ್ತು ಇದ್ದು ನಾಳೆ ಇಲ್ಲ ಮಳೆ, ಬೆಳೆ, ಕಳೆ ಇವತ್ತು ಇದ್ದು ನಾಳೆ ಇಲ್ಲ ಸ್ಥಾನ, ಮಾನ, ಪ್ರಾಣ! ***** Read More
ಹನಿಗವನ ತಂಬಾಕು ಪಟ್ಟಾಭಿ ಎ ಕೆ October 21, 2016October 16, 2016 ಉಂಡ ಬಾಯನ್ನೇ ಇರಿಯುವ ಈ ಬಾಕು, ತಂಬಾಕು! ***** Read More
ಹನಿಗವನ ಬೇಡಿಕೆ ಪರಿಮಳ ರಾವ್ ಜಿ ಆರ್ October 19, 2016February 3, 2016 ಕಲಿಯುಗದ ಕಸದ ಬುಟ್ಟಿ ಬರಿದು ಮಾಡೋ ಬಕಾಸುರ! ಧೂಮಪರಿಸರ ಮಾಲಿನ್ಯ ದೂರಮಾಡೋ ಭಸ್ಮಾಸುರ! ***** Read More
ಹನಿಗವನ ಬಾಯಿ ಪಟ್ಟಾಭಿ ಎ ಕೆ October 14, 2016October 16, 2016 ಮೃದು ವಚನಗಳ ಬಾಯಿ ಹಾಲು ಬಾಯಿ ಕಟುವಚನಗಳ ಬಾಯಿ ಹಾಳು ಬಾವಿ! ***** Read More
ಹನಿಗವನ ಎಳೆತ ಪರಿಮಳ ರಾವ್ ಜಿ ಆರ್ October 12, 2016February 3, 2016 ಹೆಣ್ಣೆಂಬ ಪ್ರಶ್ನೆಯಲಿ ಗಂಡಿನ ಕೊರಳೆಳತ ಗಂಡೆಂಬ ಗೂಟಕ್ಕೆ ಹೆಣ್ಣೆತ್ತಿನ ಗಾಣದೆಳೆತ! ***** Read More
ಹನಿಗವನ ಗೃಹಿಣಿ ಪಟ್ಟಾಭಿ ಎ ಕೆ October 7, 2016October 16, 2016 ಗೃಹಿಣಿ ಗಂಡನ ಗುಲಾಮಳಲ್ಲ ಸಂಸಾರದ ನೋವು ನಿವಾರಿಸಲು ಮಾವನಿತ್ತ ಉಪಕಾರಿ ಮುಲಾಮು! ***** Read More