ಹನಿಗವನ ಹಬ್ಬ ಪಟ್ಟಾಭಿ ಎ ಕೆ March 2, 2017March 29, 2017 ಹಬ್ಬ ಬರುತ್ತಿದೆ ಹಣದ ಗಂಟು ಕರಗಿಸಲು, ಹುಬ್ಬು ಗಂಟು ಇಕ್ಕಿಸಲು! ***** Read More
ಹನಿಗವನ ಒಂದೇ ‘ವರ’ ಪರಿಮಳ ರಾವ್ ಜಿ ಆರ್ March 1, 2017September 18, 2017 ಒಂದೇ ‘ವರ’ ದೇವರೇ ನೀ ನಿಂದೇ ಕೊಟ್ಟು ಇಟ್ಟಗೆಯ ಮನೆಯಾಗಿ ಮಾಡು ‘ವರ’ ಕೊಟ್ಟು ಮಗಳ ಸುಮಂಗಲಿ ಮಾಡು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೯ ಧರ್ಮದಾಸ ಬಾರ್ಕಿ February 27, 2017May 8, 2020 ಬುದ್ಧನಾರು? ಭಕ್ತಿಗೆ ಭದ್ಧನಾದ ಭಕ್ತನ ಬುದ್ಧಿ ‘ಬುದ್ಧ’ ***** Read More
ಹನಿಗವನ ಸಮುದ್ರ ಲತಾ ಗುತ್ತಿ February 26, 2017February 13, 2019 ಸಮುದ್ರ ರಾಜ ನೀನದೆಷ್ಟು ಬಕಾಸುರನಪ್ಪ ಸಿಕ್ಕದ್ದನೆಲ್ಲಾ ತಿಂದು ತೇಗಿ ಹೊಳೆ ಹಳ್ಳಗಳನ್ನೆಲ್ಲಾ ನುಂಗಿ ಮೇಲೆ ಲಕಲಕನೆ ಹೊಳೆಯುತ್ತೀಯಲ್ಲ! ರೋಮನ್ ಟಾರ್ಜನ್ ತರಹ!! ***** Read More
ಹನಿಗವನ ವ್ಯರ್ಥ ಶ್ರೀನಿವಾಸ ಕೆ ಎಚ್ February 24, 2017February 17, 2017 ವರ್ಷವಿಡೀ ಭೂಮಿ ಸೂರ್ಯನ ಸುತ್ತ ಸುತ್ತೋದಕ್ಕೇನರ್ಥ? ಅಷ್ಟೂ ತಿಳಿಯೊಲ್ಲವಾ? ಅಪ್ಪಾ ಅವಳಸುತ್ತ ತಿಂಗಳಿಡೀ ನೀನು ಠಳಾಯಿಸೋದು ಸುಮ್ಮನೆ ವ್ಯರ್ಥ. ***** Read More
ಹನಿಗವನ ತುತ್ತು ಮತ್ತು ಮುತ್ತು ಪಟ್ಟಾಭಿ ಎ ಕೆ February 23, 2017July 18, 2018 ‘ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯಬೇಡ’ ಹೀಗೊಂದು ಬರಹ ಲಾರಿಯ ಹಿಂಭಾಗದಲ್ಲಿ; ತುತ್ತು ಕೊಟ್ಟವಳು ಮುತ್ತು ಕೊಟ್ಟಿಲ್ಲವೆ? ಮುತ್ತು ಕೊಡುವವಳು ತುತ್ತು ಕೊಡುವುದಿಲ್ಲವೆ?! ***** Read More
ಹನಿಗವನ ಎಲ್ಲರೂ ಮಾಡುವುದು ಒಂದೇ? ಪರಿಮಳ ರಾವ್ ಜಿ ಆರ್ February 22, 2017September 18, 2017 ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೮ ಧರ್ಮದಾಸ ಬಾರ್ಕಿ February 20, 2017December 18, 2016 ಬಟ್ಟು ತೋರಿದ ಮಾತ್ರಕೆ ಬೆಟ್ಟ ತೋರಿಸಿದಂತಲ್ಲ ***** Read More
ಹನಿಗವನ ಹಿತ ಲತಾ ಗುತ್ತಿ February 19, 2017February 13, 2019 ಆಕಾಶದಲ್ಲಿ ಏರ್ ಕಂಡಿಶನ್ ಬಾಕ್ಸ್ ಚಂದ್ರ ಇಡೀ ರಾತ್ರಿ ದೇಶಕ್ಕೆಲ್ಲಾ ತಂಪುಸುರಿಸಿ ಮರೆಸುವನು ಕೃತಕ ಏ.ಸಿ, ಫ್ಯಾನ್ ಗಾಳಿ ***** Read More
ಹನಿಗವನ ಕಾಮ ಪಟ್ಟಾಭಿ ಎ ಕೆ February 16, 2017March 29, 2017 ವ್ಯಾಕರಣದಲ್ಲಿ ಕಾಮ ಎಂಬುದು ಅರ್ಧವಿರಾಮ; ರತಿಶಾಸ್ತ್ರದಲ್ಲಿ ಕಾಮವೆಂಬುದು ಮುಗಿದಾಗ ಪೂರ್ಣ ವಿರಾಮ! ***** Read More