ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೪ ಧರ್ಮದಾಸ ಬಾರ್ಕಿ August 21, 2017February 4, 2017 ನೀ ನಡೆಯುತ್ತಿರು ಸಾಕು. ಕಾಲುಗಳಿಗೆ ಗೊತ್ತು- ಎಲ್ಲಿಗೆ ಸೇರಬೇಕೆಂದು! ***** Read More
ಹನಿಗವನ ಚೈತ್ರ ಲತಾ ಗುತ್ತಿ August 20, 2017February 13, 2019 ಅಲ್ಲಲ್ಲಿ ಕೋಗಿಲೆಗಳ ಮೊಟ್ಟೆಯೊಡೆಯುವಾಗ ಹೊಸ ಜೀವಕೆ ಸಂಗಾತಿ ಒಣಗಿದ ರೆಂಬೆ ಕೊಂಬೆಗಳ ಚಿಗುರುವಿಕೆ ವಸಂತೋತ್ಸವದ ಉನ್ಮಾದ. ***** Read More
ಹನಿಗವನ ಹಬ್ಬ ಪಟ್ಟಾಭಿ ಎ ಕೆ August 17, 2017March 29, 2017 ಹಬ್ಬದ ಮೇಲೆ ಹಬ್ಬ ಬಂದಾಗ ಅಂಗಡಿಗಳೆಲ್ಲಾ ಧರಿಸುವುವು ಗರ್ಭ; ಬೆಲೆ ಮೇಲೆ ಬೆಲೆ ತೆತ್ತು ಎಲ್ಲರ ಜೇಬುಗಳೂ ಕಳೆದು ಕೊಳ್ಳುವುವು ತಮ್ಮ ತಮ್ಮ ಗರ್ಭ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೩ ಧರ್ಮದಾಸ ಬಾರ್ಕಿ August 14, 2017February 4, 2017 ‘ಅಸಾಮಾನ್ಯ’- -ನಾಗುವುದು ತೀರ ಸುಲಭ ಹಾಗೂ ಸರಳ! ಮೊದಲು ‘ಸಾಮಾನ್ಯನಾಗು’! ***** Read More
ಹನಿಗವನ ಕೆಲಸ ಹುಡುಕುವುದರಲ್ಲಿ ಲತಾ ಗುತ್ತಿ August 13, 2017February 13, 2019 ನೌಕರಿಯ ಕನಸುಗಳು ಕಂಡೂ ಕಂಡೂ ನನಸಾಗುವ ಹೊತ್ತಿಗೆ ಮಸಣ ಸೇರಿತ್ತು ಆಸೆ ಕೆರ ಸವೆದು ಕಿಸೆ ಹರಿದು ಊರ ಸೇರಿತ್ತು ಸೋತಾತ್ಮ. ***** Read More
ಹನಿಗವನ ಗಂಡು ಪಟ್ಟಾಭಿ ಎ ಕೆ August 10, 2017March 29, 2017 ಕಾದು ಕಾದು ಮದುವೆ ಆದ ಕಾವಲಿ ಮೇಲಿನ ದೋಸೆ ಆದ! ***** Read More
ಹನಿಗವನ ಅಯನ ಪರಿಮಳ ರಾವ್ ಜಿ ಆರ್ August 9, 2017September 19, 2017 ಅಯನಗಳು ಎರಡು ಉತ್ತರಾಯಣ ಬಾಳಗಾಡಿಗೆ ಕುದರೆಕಟ್ಟು ದಕ್ಷಿಣಾಯಣ ದಾರಿ ಸವೆಸಿ ಬಾಳಿಗೆ ಗೋಪುರ ಕಟ್ಟು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೨ ಧರ್ಮದಾಸ ಬಾರ್ಕಿ August 7, 2017February 4, 2017 ಈ ಜಗಕೆ ಪ್ರೀತಿಯೊಂದೇ ಸತ್ಯ. ಮಿಕ್ಕಿದ್ದೆಲ್ಲ ಮಿಥ್ಯ! ***** Read More
ಹನಿಗವನ ಹಸಿರು ಲತಾ ಗುತ್ತಿ August 6, 2017February 13, 2019 ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ - ನಮ್ಮ ಮಕ್ಕಳು ಮೊಮ್ಮಕ್ಕಳಿಗೆ. ***** Read More
ಹನಿಗವನ ಏಲಕ್ಕಿ ಪಟ್ಟಾಭಿ ಎ ಕೆ August 3, 2017March 29, 2017 ಏ, ಲಕ್ಕೀ? ನಿನ್ನ ಕೈ ಹಿಡಿದ ನಾನು ನಿಜಕ್ಕೂ ಲಕ್ಕಿ; ಏಕೆ ಗೊತ್ತೆ? ನಿಮ್ಮಪ್ಪನ ಧಂಧೆ ಏಲಕ್ಕಿ! ***** Read More