ಹನಿಗವನ ಪ್ರೀತಿ – ದ್ವೇಷ ಪರಿಮಳ ರಾವ್ ಜಿ ಆರ್ November 8, 2017October 15, 2017 ತುತ್ತುಂಡು ಬಿಕ್ಕಿದರೆ ಖಾರ ತಿನಿಸು ತುತ್ತುಂಡು ಕಕ್ಕಿದರೆ ಹಳಸು ಉಣಸು ತುತ್ತುಂಡು ನಕ್ಕರೆ ಸಿಹಿಯ ಕನಸು ತುತ್ತುಂಡು ದುಃಖಿಸಿದರೆ ಕಹಿಯ ಮನಸು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೬ ಧರ್ಮದಾಸ ಬಾರ್ಕಿ November 6, 2017February 4, 2017 ಭ್ರಮೆಯೆಂದು ನೀನು ಭ್ರಮಿಸುವವರೆಗೂ, ಭ್ರಮೆಯೆಂಬುದು ಭ್ರಮೆಯಲ್ಲ! ***** Read More
ಹನಿಗವನ ಚಟ ಪಟ್ಟಾಭಿ ಎ ಕೆ November 2, 2017March 30, 2017 ಚಟ ಮತ್ತು ಚಟ್ಟ ‘ಟ’ ಒತ್ತಕ್ಷರದ ವಿಶೇಷ; ಚಟ ಬದುಕಿರುವವನ ನಂಟು ಚಟ್ಟ ಸತ್ತವನ ಗಂಟು! ***** Read More
ಹನಿಗವನ ಮಿನಿ ಕವನ ಪರಿಮಳ ರಾವ್ ಜಿ ಆರ್ November 1, 2017October 15, 2017 ಕವಿಯ ಮನದಂತೆ ಬೆಂಕಿಪೊಟ್ಟಣ ಬೆಂಕಿ ಕಡ್ಡಿಗಳು ಸುಮ್ಮನೆ ಮಲಗಿರುತ್ತವೆ ಮನದ ಪೆಟ್ಟಿಗೆಯಿಂದ ಹೊರ ತೆರೆದು ಗೀರಿದರೆ ಕುಡಿ ಬೆಳಕ ಬೀರುತ್ತವೆ ಮಿನಿ ಕವನಗಳಂತೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೫ ಧರ್ಮದಾಸ ಬಾರ್ಕಿ October 30, 2017February 4, 2017 ನಾನಂದುಕೊಂಡಷ್ಟು ದಕ್ಕಲಿಲ್ಲ. ದಕ್ಕಿದ್ದೆಲ್ಲ ನನ್ನದಾಗಲಿಲ್ಲ. ***** Read More
ಹನಿಗವನ ಪ್ರೇಮ ಪಟ್ಟಾಭಿ ಎ ಕೆ October 26, 2017March 30, 2017 ಪ್ರೇಮವೆಂಬುದು ಹಾಸ್ಯವಲ್ಲ ಅದು ಮನದಂತರಾಳದ ಲಾಸ್ಯ; ಅಂತಃಕರಣದ ವಿಲಾಸ! ***** Read More
ಹನಿಗವನ ಚಪ್ಪಲಿ ಪರಿಮಳ ರಾವ್ ಜಿ ಆರ್ October 25, 2017October 15, 2017 ಬಾಲ್ಯದ ಚಪ್ಪಲಿ ಕಳೆದು ಹೋಯಿತು ಯೌವ್ವನದ ಚಪ್ಪಲಿ ಹುಡಿಗಿ ಹಿಂದೆ ತಿರುಗಿ ಸವೆಯಿತು ಸಂಸಾರಿ ಚಪ್ಪಲಿ ಅಲೆದಲೆದು ರಿಪೇರಿ ಆಯಿತು ಮುಪ್ಪಿನ ಚಪ್ಪಲಿ ಹರಿದು ತಿಪ್ಪೇಸೇರಿ ಮಣ್ಣಲ್ಲಿ ಗೋರಿಯಾಯಿತು ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೩ ಧರ್ಮದಾಸ ಬಾರ್ಕಿ October 23, 2017February 4, 2017 ಹಾಡ ಹಾಡಲು ಕುಳಿತೆ, ಹಾಡು ಹಾಡಿಸಿದುದ ಅರಿತೆ. ***** Read More
ಹನಿಗವನ ಚಂದ್ರ ಪಟ್ಟಾಭಿ ಎ ಕೆ October 19, 2017March 30, 2017 ಚಂದ್ರನೂ ಹಲವು ರಾಜಕಾರಣಿಗಳಂತೆ ಪಕ್ಷಾಂತರ ಪ್ರೇಮಿ; ತಿಂಗಳರ್ಧ ಶುಕ್ಲ ಪಕ್ಷ ಮಿಕ್ಕರ್ಧ ಕೃಷ್ಣ ಪಕ್ಷ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೪೨ ಧರ್ಮದಾಸ ಬಾರ್ಕಿ October 16, 2017February 4, 2017 ದೀಪಕ್ಕೆ - ತನ್ನದೇ ಆದ ಸಿಂಹಾಸನವೊಂದು ಪ್ರಾಪ್ತ- ವಾಗಲೇ ಇಲ್ಲ. ***** Read More