
ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ ಕಣ್ಣರ್ಧ ಮುಚ್ಚಿ ಮಲಗಿದ...
ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ ಆಲಸ್ಯ ಹರಿದೋಯ್ತು! ಕಂಬನಿ ಆರಿಽತು, ಮೈನಡುಕ ಓಡಿಽತು! ತನುಸ್ವಾಸ್ಥ್ಯವುಳಿಯಿತು ||ಬೆಳ|| ಜನ ಜನವ ತರಿತರಿದು ಕಿರುಕರುಳ ತಿವಿತಿವಿದು ಕೆಂಗಣ್ಣು ಕಿಡಿಕಾರಿ, ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ ಸೌ...
ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು ವಿಷವ ಹುಸಿಯಲಿ...
ಮಡಿಕೇರೀ ಮಲೆ ಸೃಷ್ಠಿಯ ಕೋಮಲೆ ಸುತ್ತಲು ಗಿರಿಸಾಲು. ಬಯಲಿನ ತಪ್ಪಲು ನಿರ್ಝರ ದರಿಗಳು ನಿಡು ಮರ ಗಿಡ ಸಾಲು, ಸೃಷ್ಠಿಯ ರಮ್ಯ ಸೌಂದರ್ಯಗಳು ದೃಷ್ಠಿಯೆ ಬೀಳದ ಆಳದೊಳೆಲ್ಲಿಯು ಹಚ್ಚನೆ ಹೊಲಸಾಲು ಸುತ್ತು ದಿಗಂತವ ಅಪ್ಪುತ ನಿಂತಿಹ ನುಣ್ಣನೆ ಬೆಟ್ಟಗಳು,...
“ಹೌದಲ್ಲ! ಪುಸ್ತಕಕ್ಕೆ ಗೆದ್ದಲ ಹತ್ಯಾಽವು ಕನ್ನಡ ಬರೆಯೋದು ಓದೋಽದು ಮಾಡೋದಿಲ್ಲ ನೀವು ಇಂಗ್ಲಿಷ್ ಪುಸ್ತಕ ಪತ್ರಿಕೆ ಮನಿ ತುಂಬ ಹರಿವಿದ್ದೀರಲ್ಲ! ನೀವು ಇಂಗ್ಲೀಷಿನವರ ಸಂಬಂಧಿಕರೇಽನು ಮತ್ತಽ? ಆರೇ ನಿಮ್ಮ ಟಿ.ವಿ. ಹೊಳ್ಯಾಕತ್ತತ್ಯಲ್ಲ ಎಷ್...
ನನ್ನೆದೆಯ ಬಾಗಿಲನು ಮುಚ್ಚಿ ನಿದ್ರಿಸುತಿದ್ದೆ ಜೀವನದಿ ತಿರುಳಿಲ್ಲವೆಂಬ ಭ್ರಮೆಯೊಳಗೆ ದೇವ ನೀನೈತಂದು ಬಾಗಿಲನು ಬಡಿಯೆ ನಾ ಸಿಡುಕಿನಿಂದಲೇ ಕೇಳ್ದೆ “ಯಾರು ಅದು” ಎಂದು! ೧ ಮೌನದಲಿ ಮತ್ತೊಮ್ಮೆ ಶಬ್ದ ಮಾಡಲು ನೀನು ನಾನೆದ್ದೆ ಕೋಪದ...
ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ, ಹಾಹಾಕಾರದ ಹೆಬ್...
ಧನ್ಯಭೂಮೀ- ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ! ಏಸುಕಾಲದಿ ಮಾಸದಳಿಯದೆ ಕೋಶಸಲಹಿದೆ-ತಾಯಿಯೆ? ಆರ್ಯಮೊಗಲರ ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ- ರಾಶಿಜನಗಣ ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ? ನೆನೆವೆ ಅಂದಿನ ಮುನಿಜನ ಮನ, ನಿನ್ನ ವೈಭವ-ವೈಭವ...













