Home / ಲೇಖನ / ಹಾಸ್ಯ

ಹಾಸ್ಯ

ಪಿ.ಯು.ಸಿ. ಆದ ಮೇಲೆ ನನ್ನ ನಾಟಕ ಬರೆಯುವ ಭರಾಟೆ ಹೆಚ್ಚಾಗಿತ್ತು. ತಾಳಿಕೋಟೆಗೆ ಬಂದ ಕಂಪನಿ ನಾಟಕಗಳನ್ನು ನೋಡಿ, ನೋಡಿ ಆಕರ್ಷಿತನಾಗಿದ್ದೆ. ನಾಟಕದ ಪಾತ್ರ ಮಾಡುವ ಕಲೆಗಿಂತಲೂ ಬರೆಯುವ ಗೀಳು ಹೆಚ್ಚಾಗಿತ್ತು. ಕಂಪನಿ ನಾಟಕಗಳಲ್ಲಿ ಬರುವ ನಾಯಕನ ಪಾತ...

ಶ್ರಾವಣ ಮಾಸದ ಆರಂಭದೊಡನೆ ಹಬ್ಬಗಳು ಸಾಲು ಸಾಲಾಗಿ ಬರಲಾರಂಭಿಸಿದವು. ಅಂದು ಗೋಕುಲಾಷ್ಟಮಿ. ಎದುರು ಮನೆ ಮೀನಾಕ್ಷಮ್ಮವರನ್ನು ನನ್ನ ಮಡದಿ ಲಲ್ಲೂ ಅರಸಿನ – ಕುಂಕುಮಕ್ಕೆ ಆಹ್ವಾನಿಸಿದಳು. “ರೀ ಲಲಿತಾರವರೇ, ನಿಮ್ಮದೇವರ ಮನೆಯಲ್ಲಿರುವ ...

“ಜಿ. ಬಿ.” ಕ್ಲಬ್ಬಿನ ಮೂವತ್ತು ಸದಸ್ಯರಿಗೂ ತಮ್ಮ ಫೋಟೋ ತೆಗೆಸಬೇಕೆಂದು, ಒಂದು ವಸಂತ ಋತುವಿನ ರಾತ್ರೆಯಲ್ಲಿ, ಕ್ಲಬ್ಬಿನಲ್ಲಿ ಕುಳಿತು ಐಸ್ ಕ್ರೀಮನ್ನು ತಿನ್ನುತ್ತಾ, ಆಲೋಚನೆಯಾಯಿತು. ಊರಲ್ಲಿ ಯಾವ ಫೋಟೋಗ್ರಾಫರನು ಅತಿ ಕುಶಲನೆಂಬ ...

(ನಡು ಮನೆಯ ಬಾಗಿಲ ಒಳಬದಿಯನಲ್ಲಿ ಗಂಗಾಬಾಯಿ ನಿಂತಿದ್ದಾಳೆ. ಶಾಮರಾಯರು ಕಚೇರಿಯಿಂದ ಬಂದು ಪಡಸಾಲೆಯೊಳಕ್ಕೆ ಪ್ರವೇಶಿಸುವರು. ಸಮಯ ಸಂಜೆಯ ಆರು ಗಂಟೆ. ಬೇಸಿಗೆಯ ಕಾಲ, ಗಂಗಾಬಾಯಿ ಒಬ್ಬಳೇ ಮಾತನಾಡುವಳು; ಕೇಳುವವರು ಶಾಮರಾಯೆರೊಬ್ಬರೆ) “ಅಯ್ಯಽ...

(ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವದೆಂದು ಯಾವಾಗಲೂ ಅವರು ಹೇಳುವರು. ಇಂದು ಸ್ನಾನಮಾಡಿ ದಿನದಂತೆಯೇ ಯಜಮಾನರು ದೇವರ ಕಟ್ಟೆಯ ಮೇಲೆ ಪೂಜೆಗೆ ಕುಳಿತಿರುವರು. ...

“ಅಯ್ಯ ಶಿವನಽಽ….,’ ಸೊಸ್ತ್ಯಾರು ಮಕ್ಕಳು ನೂಲತಿದ್ದರ ನನ್ನ ಗತಿ ಹಿಂಗ್ಯಾಂಕ ಆಗತಿತ್ತೊ ಯಪ್ಪಾ!…….. ಇವರೆಲ್ಯಾರೇ ದಗದಾ ಮಾಡವರಽ ದಗದಾ? ಹತ್ತಿ ಅರೀಲಾಕ ಕಲ್ಲ ಇಡ್ರೇ ಅಂದರ ನಡಾ ನೂಸತೈತಿ. ಪಿಂಡ್ರಿ ನೂಸತಾವು&#8230...

(ಹಳ್ಳಿ ಯೂರ ಸಭ್ಯಗೃಹಸ್ಥರೊಬ್ಬರ ಮನೆ; ಅತಿಥಿಗಳೊಬ್ಬರು ಮನೆಗೆ ಬರುವರು ಮನೆಯ ಯಜಮಾನನು ಗಡಬಡಿಸಿ ಎದ್ದು ನುಡಿಯುವನು) “ಆಲಲ ರಾಯರ ಬರೋಣಾಯ್ತೇನು?…. ಬರಬೇಕ…. ಬರಬೇಕು. ಇದೇನಿದು ಬಡವರ ಮನೀಗೆ ಭಾಗೀರಥಿ ಬಂದಹಾಂಗ?…....

ಗುರು ಬ್ರಹ್ಮಃ ಗುರು ವಿಷ್ಣುಃ!! ಗುರು ದೇವೋ ಮಹೇಶ್ವರಃ| ಗುರು ಸಾಕ್ಷಾತ್ ಪರಬ್ರಹ್ಮಃ| ತಸ್ಮೈ ಶ್ರೀ ಗುರವೇ ನಮಃ| – ಎಂದು ಗುರುವಿಗೆ ವಂದಿಸುತ್ತಾ, ಗುರುವಿನ ಮಹತ್ವವನ್ನು ತಿಳಿಸುವ ಪ್ರಾರ್ಥನೆಯನ್ನು ಮಾಡುತ್ತೇವೆ. ಇಂಥಹ ಗುರುವಿನ ಗುಲಾ...

(ವಿಜಾಪುರ ಡೋಣಿಸಾಲಿನ ಭಾಷೆಯಲ್ಲಿದೆ) ರಾಮಣ್ಣ- ನಟ್ಟ ಕಡದಾದ್ರೂ ಖರೇತನದಿಂದ ಹೊಟ್ಟೀ ತುಂಬಿಕೋ ಬೇಕಂತ ಶಾಸ್ತ್ರಾ ಹೇಳ್ಳಾಕ ಬಂದಾರು ಶಾಸ್ತ್ರಾನ ಏ. ಯಾರು ಕೇಳಿದ್ರ ನನ್ನ, ನಟ್ಟು ಕಡೂಮುಂದಽ. ಎಷ್ಟ ನಶಿಕ್ಲೆ ಹೋದ್ರೂ ತಡಾಯಾಕಂತ ಕೇಳವ್ರಽ ಮತ್ತ ನ...

ಕಾಶೀಬಾಯಿ- “ಟಾಂಗಾ ಬಂತು! ಎಂಥಾ ಲಗೂನ ಗಾಡೀ ಹೊತ್ತಾತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ ಮುಗಿದಽ ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗಽ ಉಡುಪಿ ಕೃಷ್ಣನ್ನಽ ನೋಡೆರ ಬರೂಣ. ಗಂಟ ಕಟ್ಟಿದ್ದಽ ಅದ. ವೈದು ಟಾಂಗಾದಾಗ ಇಡಪಾ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...