ಪುಂಸ್ತ್ರೀ –  ೧೩

ಪುಂಸ್ತ್ರೀ – ೧೩

ಸುಖದ ಕ್ಷಣವದು ಎಷ್ಟು ನಶ್ವರ? ಗಿರಿನಾಯಕನ ಮನೆಯ ಮಹಡಿಯಲ್ಲೊಂದು ವಿಶಾಲ ಕೊಠಡಿಯಿತ್ತು. ಅದನ್ನೇ ಅಂಬೆಗೆಂದು ಬಿಟ್ಟುಕೊಡಲಾಯಿತು. ಅದರಲ್ಲಿ ಎದುರು ಬದುರಾದ ಎರಡು ದೊಡ್ಡ ಕಿಟಕಿಗಳಿದ್ದವು. ಪೂರ್ವದ ಕಡೆಯ ಕಿಟಕಿಯಿಂದ ನೋಡಿದರೆ ದಟ್ಟವಾದ ಕಾಡು, ಪೊದೆ,...
ಪುಂಸ್ತ್ರೀ – ೧೨

ಪುಂಸ್ತ್ರೀ – ೧೨

ಮನವನೋದಿಕೋ ತಾತ ದ್ರೋಣಾಚಾರ್ಯರ ದೇಹಾಂತ್ಯದ ಬಳಿಕ ಇನ್ನು ಬದುಕುಳಿದು ಮಾಡುವುದೇನು ಎಂಬ ಭಾವ ಭೀಷ್ಮರನ್ನು ಕಾಡತೊಡಗಿತು. ದ್ರೋಣಾಚಾರ್ಯರನ್ನು ಹಾಗೆ ವಧಿಸಬೇಕಾದ ಪ್ರಮೇಯವಿರಲಿಲ್ಲ. ಹೆಬ್ಬೆರೆಳು ಕಳಕೊಂಡ ವಯೋವೃದ್ಧ ಗುರುವನ್ನು ಕೊಲ್ಲಲು ಯುಧಿಷ್ಠಿರ ಸುಳ್ಳು ಹೇಳಬೇಕಾದ ಪರಿಸ್ಥತಿ...
ಪುಂಸ್ತ್ರೀ – ೧೧

ಪುಂಸ್ತ್ರೀ – ೧೧

ಕುವರಿ ಮಿಂದಳು ನೈಜ ಪ್ರೀತಿಯಲಿ ಸರೋವರದ ಬಲಪಾರ್‍ಶ್ವದಲ್ಲೊಂದು ಪುಟ್ಟ ಗುಡ್ಡ. ಅದರಲ್ಲಿ ಅಲ್ಲಲ್ಲಿ ಗುಡಿಸಲುಗಳನ್ನು ಕಂಡ ಅಂಬೆಗೆ ತೀವ್ರ ನಿರಾಶೆಯಾಯಿತು. ಋಷ್ಯಾಶ್ರಮವಿರಬಹುದೆಂದು ಭಾವಿಸಿ ಬಂದವಳಿಗೆ ಚಿತ್ರವಿಚಿತ್ರ ವೇಷಭೂಷಣಗಳ ಜನರು ಕಾಣಿಸಿದರು. ಅವಳು ಒಂದು ಕ್ಷಣ...
ಪುಂಸ್ತ್ರೀ – ೧೦

ಪುಂಸ್ತ್ರೀ – ೧೦

ಅನೃತದಿ ಛೇದಿಸಿದ ಕೊರಳನು ಹೆಜ್ಜೆಯ ಸಪ್ಪಳ ಕೇಳಿ ಭೀಷ್ಮರು ಕಣ್ತೆರೆದರು. ಕಳೆದ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೆ ಇಂದು ಇಡೀ ದಿನ ಅವರು ಆಗಾಗ ಮಂಪಿನಲ್ಲಿದ್ದರು. ಹಗಲು ನಿದ್ದೆ ಮಾಡಿದರೆ ರಾತ್ರಿಯನ್ನು ಕಳೆಯುವುದು ಹೇಗೆಂಬ...
ಪುಂಸ್ತ್ರೀ – ೯

ಪುಂಸ್ತ್ರೀ – ೯

ಎಲ್ಲಿ ದೊರಕೀತು ಸುಖವು? ಅಂಬೆ ವಿಹ್ವಲಳಾಗಿದ್ದಳು. ಇನ್ನು ಹೋಗುವುದು ಎಲ್ಲಿಗೆ ಎಂದವಳಿಗೆ ತೋಚುತ್ತಲೇ ಇರಲಿಲ್ಲ. ಕಾಶಿಯಿಂದ ಹಸ್ತಿನಾವತಿಯ ರಥವೇರಿ ಬಂದವಳು ಅವಿವಾಹಿತೆಯಾಗಿ ಕಾಶಿಗೆ ಹೋಗಬಾರದು. ಹಸ್ತಿನಾವತಿಗೆ ಹಿಂದಿರುಗಿ ಭೀಷ್ಮರೆದುರು ನಿಂತು ವಾದಿಸುವುದರಲ್ಲಿ ಅರ್ಥವಿರಲಿಲ್ಲದ ಉಪಯೋಗವೂ...
ಪುಂಸ್ತ್ರೀ – ೮

ಪುಂಸ್ತ್ರೀ – ೮

ನಿಶೆಯ ಸಮರದಿ ಉರುಳಿದನು ಧರೆಗೆ ದುರ್ಯೋಧನ, ದುಶ್ಶಾಸನರು ಬಿಡದಿಯಿಂದ ಹೊರಟು ಹೋಗಿ ಎಷ್ಟೋ ಹೊತ್ತಾಗಿತ್ತು. ಕಾಡುತ್ತಿರುವ ಅಂಬೆಯ ನೆನಪಿನಿಂದಾಗಿ ಎಷ್ಟು ಯತ್ನಿಸಿದರೂ ಭೀಷ್ಮರಿಗೆ ನಿದ್ದೆ ಬರಲಿಲ್ಲ. ಸಣ್ಣ ಚಲನೆಯೂ ಎದೆಯಲ್ಲಿ ಅಪಾರ ನೋವನ್ನುಂಟು ಮಾಡುವುದರಿಂದ...
ಪುಂಸ್ತ್ರೀ – ೭

ಪುಂಸ್ತ್ರೀ – ೭

ಬೇಡೆನಗೆ ಹಸ್ತಿನೆಯ ಭಿಕ್ಷೆಯು ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭದ ಕನ್ಯಾಪಿತೃಗಳು ಮಗಳಂದಿರೊಂದಿಗೆ ಅವನ ಭೇಟಿಗಾಗಿ...
ಪುಂಸ್ತ್ರೀ – ೬

ಪುಂಸ್ತ್ರೀ – ೬

ಕ್ಷಾತ್ರವಚನದಿ ಗೆಲಿದನಾರಣವ ಭೀಷ್ಮರು ಮಗ್ಗುಲು ಬದಲಾಯಿಸಿದರು. ಎದೆಯ ನೋವು ತೀವ್ರವಾಗುತ್ತಾ ಹೋಗುತ್ತಿದೆ. ಯುದ್ಧ ಹದಿನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಇನ್ನು ಎಷ್ಟು ದಿನವೊ? ಈ ಬಾಣ ಅದಾಗಿಯೇ ಯಾವತ್ತು ಬಿದ್ದು ಹೋಗುತ್ತದೆಯೊ? ದೇಹಕ್ಕೆ ಸುಖವಿಲ್ಲ, ಮನಸ್ಸಿಗೆ...
ಪುಂಸ್ತ್ರೀ – ೫

ಪುಂಸ್ತ್ರೀ – ೫

ಜಲದೊಳರಳಿತು ಪ್ರೇಮಕಮಲ ಸೌಭದೇಶದ ಗಡಿಯವರೆಗೆ ಅವಳನ್ನು ಕರೆತಂದ ಹಸ್ತಿನಾವತಿಯ ರಥ ಅಲ್ಲಿ ನಿಂತಿತು. ಹಸ್ತಿನಾವತಿಯಿಂದ ಸೌಭಕ್ಕೆ ಎರಡು ದಿನಗಳ ಪಯಣ. ಎರಡು ರಾತ್ರೆಗಳನ್ನು ಛತ್ರಗಳಲ್ಲಿ ಕಳೆದು, ಅವುಗಳ ಸನಿಹದಲ್ಲೇ ಇದ್ದ ಅಶ್ವಶಾಲೆಗಳಲ್ಲಿ ಕುದುರೆಗಳನ್ನು ಬದಲಾಯಿಸಿ...
ಪುಂಸ್ತ್ರೀ – ೪

ಪುಂಸ್ತ್ರೀ – ೪

ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗಿದೆ. ಎರಡು ದಿನಗಳಾದವು ಬಾಣ ಚುಚ್ಚಿ. ಆ...