ಹನಿಗವನ ಓಂ ಲತಾ ಗುತ್ತಿ April 13, 2020January 9, 2020 ನಮ್ಮೊಳಗಿನ ಸಮುದ್ರ ಮೊದಲು ಸಾಯಬೇಕು ಶಾಂತವಾದಾಗ ಹುಟ್ಟುತ್ತದೆ ಅಲ್ಲೊಂದು ಶುಭ್ರಕಮಲ ಮೃದುವಾಗುತ್ತದೆ ಮನಸ್ಸು. ***** Read More
ಹನಿಗವನ ಭ್ರೂಣಬಲಿ ಲತಾ ಗುತ್ತಿ April 6, 2020January 9, 2020 ಗಾಳಿ ಬೆಳಕಿನ ಸೋಂಕಿಗಿಂತ ಮೊದಲೇ ಎರಡು ನಾಲ್ಕಾಗಿ ನಾಲ್ಕು ಎಂಟಾಗಿ ಟಿಸಿಲೊಡೆಯುವ ಭ್ರೂಣಕ್ಕೆ ಏಡ್ಸ್ ಸೋಂಕಿ ಚಿಗುರೇ ಮುಟುರಿಕೊಂಡಿತ್ತು. ***** Read More
ಹನಿಗವನ ಸಂಕೋಲೆಯೊಳಗಿಂದ ಲತಾ ಗುತ್ತಿ March 30, 2020January 9, 2020 ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ - ಗೆಳತಿ ಕಕ್ಕಾಬಿಕ್ಕಿಯಾದಳು. ***** Read More
ಹನಿಗವನ ಆತ್ಮಹತ್ಯೆ ಲತಾ ಗುತ್ತಿ March 23, 2020January 9, 2020 ನಾನು ಕಾಯ್ದೆ ಬರಲಿಲ್ಲ ಅವಳು ನಾನೇ ಹೋದೆ ಕರೆಯಲಿಲ್ಲ ಒಳಗವಳು ಕರೆದರವರು ತೋರಿಸಿದರವರು ಹೇಳಿದರವರು ಮುಖ ಮುಚ್ಚಿದರು ಈಗವಳಿಗೆ ೩ ತಿಂಗಳಾಗಿತ್ತಂತೆ. ***** Read More
ಹನಿಗವನ ಸ್ಪೈಸ್ ಗರ್ಲ್ಸ್ ಲತಾ ಗುತ್ತಿ March 16, 2020January 8, 2020 ಮೆಂತೆ ಕೊತ್ತೊಂಬರಿ ಕಾಳು ಚಕ್ಕೆ ಜೀರಗೆ ಕಾಯಿ - ಮನಿಷಾ, ಕಾಜೋಲ್ ಕರಿಷ್ಮಾ ಉರ್ಮಿಲಾ ಮಾಧವಿ - ಊಟ ನೋಟಕ್ಕೆಲ್ಲಾ ಪ್ರಿಯರು. ***** Read More
ಹನಿಗವನ ನೆಪ ಲತಾ ಗುತ್ತಿ March 9, 2020January 8, 2020 ಮಸಾಲೆ ದೋಸೆ ಬೇಕೆಂದಾಗೆಲ್ಲಾ ಏನಾದರೂ ನೆಪ ಹೇಳಿ ಗಂಡನೊಂದಿಗೆ ಮುನಿಸಿಕೊಳ್ಳುವದು ಅವನ ಪ್ರೀತಿ ಬೇಕೆಂದಾಗೆಲ್ಲ ಅವನಿಷ್ಟದ ಅಡುಗೆ ಮಾಡುವದು. ***** Read More
ಹನಿಗವನ ಟೀ-ಕಾಫಿ ಲತಾ ಗುತ್ತಿ March 2, 2020January 8, 2020 ನೀವು ಕುದಿದು ಕುದಿದು ಸತ್ತರೂ ಜಗಕೆಲ್ಲಾ ಚೈತನ್ಯಮಯಿಗಳು. ***** Read More
ಹನಿಗವನ ಉದಾಸೀನ ಲತಾ ಗುತ್ತಿ February 24, 2020January 8, 2020 ಒಮ್ಮೊಮ್ಮೆ ಅಡುಗೆ ಮನೆ ಹೀಗೆಯೇ ಏನೋ ಅಡುಗೆಯನ್ನೂ ಸುಡುತ್ತಿದೆ ಅಡುಗೆಯವಳ ಮನಸ್ಸನ್ನೂ ಸುಟ್ಟು ಬಿಡುತ್ತಿದೆ. ***** Read More
ಹನಿಗವನ ಮಲ್ಲಿ (ಗೆ) ಲತಾ ಗುತ್ತಿ February 17, 2020January 8, 2020 ಕೆಲಸ ಕೆಲಸೆಂದು ಮುನಿಸೇಕೆ ಚೆಲುವೆ ತಾಳು ತರುವೆ ಮಲ್ಲಿಗೆ ಹೋಗೋಣ ಹೊರಗೆ ಸಂಜೆಯೇ ಬಂತು ‘ಮಲ್ಲಿ’ ಹೋಗೋದಿನ್ನೆಲ್ಲಿ‘ಗೆ’ ***** Read More
ಹನಿಗವನ ಮ್ಯಾಚಿಂಗ್ ಲತಾ ಗುತ್ತಿ February 10, 2020January 8, 2020 ಮಾನಸಿಕವಾಗಿ ಗಂಡ ಮ್ಯಾಚಿಂಗ್ ಆಗದೇ ಇದ್ದರೂ.... ಒಳಗೊಳಗೆ ತೊಳಲಾಡಿದರೂ.... ಚಿತ್ತಾರದ ಮಾಂಗಲ್ಯ ಮ್ಯಾಚಿಂಗ್ ಕುಂಕುಮ ಬೇಕು ಫ್ಯಾನ್ಸಿ ಯುವತಿಯರಿಗೆ ***** Read More