ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು ನೀನು ನಮ್ಮ ನಿರಂತರ ಮಹಾ ಮೊರೆತ....
ನಾಲ್ಕು ಮಡಿಕೆಯ ಚಪಾತಿಯೊಳಗೆ ಭಾವನೆಗಳನ್ನು ಹೂತು ಲಟ್ಟಿಸಿ ಸಮಾಧಿ ಮಾಡಿದರೂ ತವೆಯ ಮೇಲೆ ಒಂದೊಂದಾಗಿ ಕೋಪಕಾರುತ್ತ ಉಬ್ಬಿ ಕೆಣಕಿ ಬಾಯಿ ಇಲ್ಲದವಳೇ ಎನ್ನುತ್ತ ಬುಸ್ ಎಂದು ಕೈ ಸುಟ್ಟಾಗ ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ.... *****
೧ ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇ ತೆರೆದ ಬಾಗಿಲುಗಳ ಸದಾ ಸ್ವಾಗತ, ೨೪ ಗಂಟೆಗಳ ಕಾಲ ಸುಭದ್ರ ಬಾಗಿಲು ಕಾವಲುಗಾರ ಇಲ್ಲಿ ನನ್ನೂರಲ್ಲಿ. ೨ ನಮ್ಮನ್ನು ನಾವು ಕಾಯ್ದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಬಾಗಿಲು...