ಈ ಪ್ರೀತಿಗೆ ತರಂಗಗಳೇ ಇಲ್ಲದೆ ಹೋಗಿದ್ದರೆ ಜಗತ್ತು ಬರಡಾಗುತ್ತಿತ್ತೇನೋ ಆದರೆ ಹಗಾಗಲೇ ಇಲ್ಲ ತರಂಗ ಸೆಟಲೈಟುಗಳು ಹೆಚ್ಚಾದುದರಿಂದ ಅಲೆಗಳು ಅತ್ತಿತ್ತ ಬಡೆದೂ ಬಡೆದೂ ಜಗತ್ತು ತರಗಲೆಯಂತೆ ಹುಟ್ಟಿ, ಹುಟ್ಟಿ, ಉದುರಿಕೊಳ್ಳುತ್ತಲೇ ಇದೆ.
ಮಾರ್ಬಲ್ ಹುಡುಗರ ಹುಡುಗಾಟ ಹುಡುಗಿಯರ ಮಲ್ಲಿಗೆಯ ನಗು ತುಂಟಾಟ ವೆನಿಸ್ಸಿನ ನೀರಿನಲೆಯೊಳಗೆ ತುಂಬಿ ವೈನ್ ಕುಡಿದ ಬೋಟಿನಲುಗಾಟ ವರ್ತಕರಂತೆ ಮುಂದಿನೂರಿಗೆ, ಕಣ್ಣರೆಪ್ಪೆಯೊಳಗೆ ಚಂದ್ರ ತುಂಬಿ ನರಳಾಟ ಮತ್ತೆ ಸ್ಥಬ್ದಕೆ ಇಲ್ಲಿ ಡ್ರಿಂಕ್ಸ್, ಎಚ್ಚರ ತಪ್ಪಿ...
ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು ಗಳೊಳಗೂ ಇತ್ತು ಬಿತ್ತಿ ಬೆಳೆವ ಪ್ರೀತಿ...
ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ-...