ಹನಿಗವನ ವಿಧಿ ಬರಹ ಪರಿಮಳ ರಾವ್ ಜಿ ಆರ್ June 22, 2016February 2, 2016 ಹೆಂಡತಿಗೆ ಗಂಡ ವಿಧಿ ಬರಹ ಗಂಡಗೆ ಹೆಂಡತಿ ಹಣೆಬರಹ ಸಾಮರಸ್ಯ ಸ್ವರ್ಣ ಬರಹ ಏರುಪೇರು ಕಳೇಬರಹ. ***** Read More
ಹನಿಗವನ ವರ ಪರಿಮಳ ರಾವ್ ಜಿ ಆರ್ June 15, 2016February 2, 2016 ದೇವರು ಪ್ರತ್ಯಕ್ಷವಾಗಿ ಮೂರು ವರ ಕೇಳಲು ಬೇಡುವೆನು ಬಾಳ ಹಸನ ಮಾಡು ಬಡ‘ವರ’ ದೈವ ಅನುಗ್ರಹವ ಕೊಡು ಸುರ‘ವರ’, ಕಲ್ಯಾಣ ಮಸ್ತು ಕೈ ಹಿಡಿದು ವಧು‘ವರ’! ***** Read More
ಹನಿಗವನ ಪ್ರಥಮ ನೋಟ ಪರಿಮಳ ರಾವ್ ಜಿ ಆರ್ June 8, 2016June 8, 2016 ಪ್ರಥಮ ನೋಟಕೆ ಪ್ರೇಮ ಗ್ಯಾರಂಟಿಯೇ? ಗೋರಂಟಿ ಕೈ ಉಗುರ ದಾಟಿ ಜಾರಿದರೆ ವ್ಯಾರಂಟಿ ಎಲ್ಲಿ? ***** Read More
ಹನಿಗವನ ಮಧ್ಯ ವಯಸ್ಸು ಪರಿಮಳ ರಾವ್ ಜಿ ಆರ್ June 1, 2016February 2, 2016 ತಾರುಣ್ಯ ಒಡೆದ ಭೂತ ಕನ್ನಡಿಯಲ್ಲಿ ವೃದ್ಧಾಪ್ಯದ ಸುಕ್ಕು ಕಂಡು ನಡುಗುವ ವಯಸ್ಸು ಮಧ್ಯ ವಯಸ್ಸು! ***** Read More
ಹನಿಗವನ ಪುಷ್-ಪುಲ್ ಪರಿಮಳ ರಾವ್ ಜಿ ಆರ್ May 25, 2016February 2, 2016 ಬಾಗಿಲಿಗೆ ಹಲಗೆ ‘ಪುಷ್’ - ‘ಪುಲ್’ ಜಗ್ಗಿ ಎಳೆದು ನುಗ್ಗಿದರೆ ಬಾಳು ಸಕ್ಸಸ್ ಫುಲ್! ***** Read More
ಹನಿಗವನ ಗುರಿ ಪರಿಮಳ ರಾವ್ ಜಿ ಆರ್ May 18, 2016February 2, 2016 ಮಹತ್ವದ ಗುರಿಗೆ ಆರು ಮುಖ ಪ್ರಯತ್ನ ಮಾಡಬೇಕು ಅದೃಷ್ಟ ಕೂಡಬೇಕು ಗುಣ ಇರಬೇಕು ಹಣ ಸೇರಬೇಕು ಶ್ರಮ ಗೈಯಬೇಕು ದೈವ ಕೃಪೆ ಬರಬೇಕು! ***** Read More
ಹನಿಗವನ ಜಗಳ-ಕದನ ಪರಿಮಳ ರಾವ್ ಜಿ ಆರ್ May 11, 2016February 2, 2016 ಒಂದು ಕಿವಿಯಲ್ಲಿ ಕೇಳಿ ಒಂದು ಕಿವಿಯಲ್ಲಿ ಬಿಡುವುದು ಮೌನ ದವನ! ಎರಡು ಕಿವಿಯಲ್ಲಿ ಕೇಳಿ ಎರಡು ಕೈಯಲ್ಲೂ ಬಿಡುವುದು ಜಗಳ ಕದನ!! ***** Read More
ಹನಿಗವನ ಯಾವ ಲಿಪಿ? ಪರಿಮಳ ರಾವ್ ಜಿ ಆರ್ May 4, 2016February 2, 2016 ಬ್ರಹ್ಮ ಲಿಪಿಯಲ್ಲಿ ಕೊರೆದ ಬ್ರಹ್ಮ ಮಾನವನ ಹಣೆಬರಹ ಮಾರ್ಡ್ನ ಲಿಪಿಯಲ್ಲಿ ಮಾನವ ಬರೆದ ಬ್ರಹ್ಮನ ತಲೆ ಬರಹ ತಲೆನೋವ! ***** Read More
ಹನಿಗವನ ಇಲ್ಲದಿದ್ದರೇನು? ಪರಿಮಳ ರಾವ್ ಜಿ ಆರ್ April 27, 2016February 2, 2016 ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! ***** Read More
ಹನಿಗವನ ಏನಿಲ್ಲ? ಪರಿಮಳ ರಾವ್ ಜಿ ಆರ್ April 20, 2016February 2, 2016 ತಲೆಯಿಲ್ಲದವಗೆ ತಲೆ ಬಿಸಿ ಇಲ್ಲ ಕಲೆ ಇಲ್ಲದವಗೆ ಬಾಳು ಸಿಹಿ ಇಲ್ಲ ಬಲೆ ಇಲ್ಲದವಗೆ ಮೀನು ಮಾಣಿಕ್ಯವಿಲ್ಲ! ***** Read More