ಹನಿಗವನ ನರಭಕ್ಷಕಿ ಪರಿಮಳ ರಾವ್ ಜಿ ಆರ್ January 18, 2017December 24, 2016 ನನ್ನವಳು ಶಾಕಾಹಾರಿ ಅಂತ ಹೇಳಿಕೊಳ್ಳುತ್ತಾಳೆ ಆದರೆ ಯಾವಾಗಲೂ ನನ್ನ ‘ಪ್ರಾಣ’ ತಿನ್ನುತ್ತಾಳೆ ***** Read More
ಹನಿಗವನ ಹಲ್ಲು – ಬಿಲ್ಲು ಪರಿಮಳ ರಾವ್ ಜಿ ಆರ್ January 11, 2017December 24, 2016 ಕೆಲವರು ಹಲ್ಲು ಕಿರಿದು ಕೆಲವರು ಹಲ್ಲು ಮುರಿದು ಕೆಲವರು ಬಿಲ್ಲು ಕೊರೆದು ಹಣ ಚೆನ್ನಾಗಿ ಗಿಟ್ಟಿಸುತ್ತಾರೆ ***** Read More
ಹನಿಗವನ ಕಳವು ಪರಿಮಳ ರಾವ್ ಜಿ ಆರ್ January 4, 2017December 24, 2016 ಬಸ್ಸು ಏರುವಾಗ ಸರ್ವಾಭರಣ ಸುಂದರಿ ಬಸ್ಸು ಇಳಿಯುವಾಗ ಆಗಿದ್ದೆ ನಿರಾಭರಣ ಸುಂದರಿ! ***** Read More
ಹನಿಗವನ ಬಿ.ಟಿ.ಎಸ್. ಬಸ್ಸು ಪರಿಮಳ ರಾವ್ ಜಿ ಆರ್ December 28, 2016February 3, 2016 ಗಲಾಟೆ ಬಸ್ಸು ಏರುವಾಗ ಹೊದ್ದಿದ್ದೆ ಶಲ್ಯ ಇಳಿಯುವಾಗ ಇದ್ದುದು ಹೆಣ್ಣಿನ ದುಪ್ಪಟ್ಟ ಶಲ್ಯ ಶಲ್ಯ ಹೋಗಿ ದುಪ್ಪಟ್ಟ ಬಂತು ಢುಂ ಢುಂ ಢುಂ ಮೈ ಪುಳಕಿತು ಝಂ ಝಂ ಝಂ! ***** Read More
ಹನಿಗವನ ಕಾಲಚಕ್ರ ಪರಿಮಳ ರಾವ್ ಜಿ ಆರ್ December 21, 2016February 3, 2016 ಕಡಲು ಭೋರ್ಗರೆದರೇನು? ಗುಡ್ಡ ಗಟ್ಟಿಯಾಗಿ ಕುಳಿತರೇನು? ಮಂಜು ಹೆಪ್ಪುಗಟ್ಟಿದರೇನು? ಚಿಟ್ಟೆಯಂತೆ ಹಗುರವಾಗಿ ಹಾರಿ ಉರಳಿ ಬಿಡುತ್ತದೆ ಕಾಲಚಕ್ರ! ***** Read More
ಹನಿಗವನ ಹೂಬನ – ಸಿರಿಮನ ಪರಿಮಳ ರಾವ್ ಜಿ ಆರ್ December 14, 2016February 3, 2016 ಸುತ್ತಲಿದೆ ಬಾಳೆಬನ ಮುಗುಳು ನಗೆಯ ಮಲ್ಲಿಗೆಯ ಬನ ಸ್ವಾಗತವೀವ ಸೇವಂತಿಗೆ ಬನ ರಸಿಕ ಪ್ರಜ್ಞೆ ನೀಡೋ ಇತ್ತು ಶ್ರೀಮಂತ ಮನ! ***** Read More
ಹನಿಗವನ ತುಂಟ ಪರಿಮಳ ರಾವ್ ಜಿ ಆರ್ December 7, 2016February 3, 2016 ಕುಂಟಿಗೆ ಒಂದು ಕಾಲು ಒಂಟಿಗೆ ಎರಡು ಕಾಲು ಜಂಟಿಗೆ ಮೂರೊಂದು ಸೇರಿದ ಕಾಲು ತುಂಟಿಗೆ ಎರಡೂ ಕೈ ಸೇರಿ ನಾಲ್ಕು ಕಾಲು! ***** Read More
ಹನಿಗವನ ಅನುಕರಣೆ ಪರಿಮಳ ರಾವ್ ಜಿ ಆರ್ November 30, 2016February 3, 2016 ಮಕ್ಕಳು ಟಾಟಾ ಎನ್ನುವುದ ಕೇಳಿ ಕಾಗೆಗಳು ಕಾಕಾ ಎನ್ನುತ್ತವೆ ಕೆಲವರು ಬೈ ಬೈ ಎನ್ನುವದ ಕೇಳಿ ನಾಯಿಗಳು ಬೌ ಬೌ ಎನ್ನುತ್ತವೆ ಮತ್ತೆ ಕೆಲವರು ಚೀರಿಯೋ ಎನ್ನುವುದ ಕೇಳಿ ಹಕ್ಕಿಗಳು ಚಿಲಿಪಿಲಿ ಗುಟ್ಟತ್ತವೆ. ***** Read More
ಹನಿಗವನ ದಾರ : ಭಾರ ಪರಿಮಳ ರಾವ್ ಜಿ ಆರ್ November 23, 2016February 3, 2016 ಹೋರಿಗೆ ಮೂಗುದಾರ ಪೋರಿಗೆ ಅರಶಿನ ದಾರ ಲಾರಿಗೆ ಮಣಭಾರ ಗೋರಿಗೆ ಹೆಣಭಾರ. ***** Read More
ಹನಿಗವನ ನಿನ್ನ ನೀ ನಂಬು ಪರಿಮಳ ರಾವ್ ಜಿ ಆರ್ November 16, 2016February 3, 2016 ಸಂಬಂಧಿಕರನ್ನು ನಂಬಿದರೆ ಆದೀತು ದಿಗ್ಬಂಧ ಸ್ನೇಹಿತರನ್ನು ನಂಬಿದರೆ ಆದೀತು ಅನಾಹುತ ನಿನ್ನನೇ ನೀ ನಂಬು ಜಡಭರತ ಎದ್ದೇಳು ಅನವರತ. ***** Read More