ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ

ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ ನಿನ್ನ ಬಲಸತ್ವಗಳ ಉದ್ದೀಪಿಸುವ ಮೂಲ? ಬೀಳುಕವಿತೆಗೆ ನೀಡಿ ರಸೋದ್ದೀಪನವನ್ನ, ಸಣ್ಣದಕೆ ಬಣ್ಣಗಳ ತೀಡಿ ಬಾರಿಸಿ ತಾಳ? ಮರಳಿ ಬಾ ಮರುಳೆ, ಮೈಗಳ್ಳತನದಲಿ ಕಳೆದ ಕಾಲಕ್ಕೆ ಸಮನಾಗಿ...

ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ

ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ...

ನೋಯಿಸುವ ಬಲವಿದ್ದರೂ ಯಾರು ನೋಯಿಸರೊ

ನೋಯಿಸುವ ಬಲವಿದ್ದರೂ ಯಾರು ನೋಯಿಸರೊ, ಬಾಧಿಸುವ ಥರ ನಟಿಸಿ ಎಂದಿಗೂ ಬಾಧಿಸರೊ, ತಾವು ಸ್ಥಿರವಿದ್ದು ಅನ್ಯರ ಮನವ ಚಲಿಸುವರೊ, ಶಿಲೆಯಂತೆ ಅಚಲರೋ, ಆಮಿಷಕೆ ಮಣಿಯರೊ, ಅವರಷ್ಟೆ ಸ್ವರ್ಗದಾಶೀರ್ವಾದಕ್ಕೆ ಪಾತ್ರರು; ಪೋಲಾಗದಂತೆ ಬಳಸುವರು ಪ್ರಕೃತಿಯ ಸಿರಿಯ,...

ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ

ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ - ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ...

ನನ್ನಿಂದ ದೂರವಾಗಲು ಮಾಡು ಏನೆಲ್ಲ

ನನ್ನಿಂದ ದೂರವಾಗಲು ಮಾಡು ಏನೆಲ್ಲ, ಈ ಉಸಿರಿರುವ ತನಕ ನೀನು ನನ್ನವನೇ; ನಿನ್ನೊಲವು ತೀರಿತೋ ನನಗೆ ಬಾಳೇ ಇಲ್ಲ, ಬಾಳಿಗವಲಂಬನೆ ನಿನ್ನೊಂದು ಸ್ನೇಹವೇ. ನನಗಿಲ್ಲ ಬಹು ದೊಡ್ಡ ಕೇಡು ಘಟಿಸುವ ಭಯವೆ, ಅತಿ ಸಣ್ಣ...

ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು

ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು ಮತ್ತೆ ಕೆಲವರಿಗೆ, ಸಂಪತ್ತಿನೊಳು ಹಲವರಿಗೆ, ದೇಹದಾರ್ಢ್ಯದಲಿ ಇತರರಿಗೆ, ಹೊಂದದೆ ಇದ್ದೂ ಉಡುತೊಡುವ ಹೊಳಪಿನುಡುಪಗಳಲ್ಲಿ ಕೆಲವರಿಗೆ, ಬೇಟೆನಾಯಿಗಳಲ್ಲಿ, ಗಿಡುಗ ಕುದುರೆಗಳಲ್ಲಿ ಬಗೆಬಗೆಯ ಗೀಳು ಬಗೆಬಗೆ ಮನೋಧರ್ಮಕ್ಕೆ. ರುಚಿಯಿಲ್ಲ ನನಗೆ ಈ...

ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು

ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು ನೀನೂ ಕೈಗೂಡಿಸಿ ಕೆಳತನಕ ಬಾಗಿಸು ; ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು. ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು ಹಿಂದಿಂದ ಬಂದು ಬೇರೊಂದಕ್ಕೆ ಗುರಿಮಾಡಿ, ಬಿರುಗಾಳಿಯಿರುಳ...

ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು

ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು ದೂರಮಾಡಿದೆ ಎಂದು, ತಪ್ಟೊಪ್ಪಿಕೊಳ್ಳುವೆನು; ನನ್ನ ನ್ಯೂನತೆ ತಿಳಿಸು, ಅದರ ವಿರುದ್ಧ ಏನೂ ರಕ್ಷಣೆಗೆ ವಾದ ಹೂಡದೆ ತಿದ್ದಿಕೊಳ್ಳುವೆನು. ನನ್ನ ಬದಲಾವಣೆಯ ಬಯಸಿ ದೂರಲು ನೀನು ಮುಖಭಂಗವೇನಿಲ್ಲ ನನಗೆ,...

ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು,

ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು, ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ ರಾಜಸನ್ನದು ನಿನ್ನ ಮುಕ್ತನನು ಮಾಡಿದೆ. ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ...

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು

ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ? ಇರುಳ ಶಕ್ತಿಗಳ ನೆರವಿಂದ ಮರ್ತ್ಯರ...