ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ?

ಎಷ್ಟಾದರೂ ನಾನು ನಿನ್ನ ಗುಲಾಮ ತಾನೆ ? ಕಾಯುವೆನು ನಿನ್ನ ಬಿಡುವಿಗೆ, ನಿನ್ನ ಇಚ್ಛೆಗೆ; ನನ್ನ ಕಾಲ ಅಮೂಲ್ಯವೇನಲ್ಲ ಪ್ರಭು, ನೀನೆ ಕಾರ್ಯವೊಂದನು ನನಗೆ ಆದೇಶಿಸುವವರೆಗೆ. ನಿನಗಾಗಿ ಕಾಯುತ್ತೆ ಗಡಿಯಾರ ನೋಡುತ್ತ ಕೊನೆಯಿರದ -...

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ

ಅಮೃತಶಿಲೆಯಲಿ ಕಡೆದ ಚಿನ್ನಲೇಪನವಿರುವ ರಾಜಸ್ಮಾರಕ ಮೀರಿ ಬಾಳುವುದು ಈ ಕಾವ್ಯ, ಕಾಲದ ಹೊಲಸು ಪಾಚಿ ಮೆತ್ತಿರುವ ಸ್ಮಾರಕವ ಮೂದಲಿಸಿ ಹೊಳೆವೆ ನೀ ಕವಿತೆಯಲಿ ಬಲುಭವ್ಯ ಯುದ್ಧದಲಿ ಎಲ್ಲ ವಿಗ್ರಹ ಮಣ್ಣಿಗುರುಳುವುವು, ಬುಡಮೇಲು ಮಾಡುವುವು ಭವ್ಯ...

ಸತ್ವ ದಯಪಾಲಿಸುವ ಸತ್ಯದಾಭರಣ

ಸತ್ವ ದಯಪಾಲಿಸುವ ಸತ್ಯದಾಭರಣ ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು! ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ ಅದರೊಳಗೆ ಹುದುಗಿದ ಸುಗಂಧ ಬಲದಿಂದ. ಕಣಗಿಲೆಯ ಹೂವೂ ಗುಲಾಬಿ ಹೂವಿನ ದಟ್ಟ ಕೆಂಪುಬಣ್ಣವ ಪಡೆದು, ಮುಳ್ಳ ಜೊತೆ...

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು !

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ...

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು

ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು...

ಬಂದೀತೆನ್ನು ಒಮ್ಮೆ ನೀ ನನ್ನ ತಪ್ಪನ್ನು

ಬಂದೀತೆನ್ನು ಒಮ್ಮೆ ನೀ ನನ್ನ ತಪ್ಪನ್ನು ಕಂಡು ಮುನಿಯುವ ಕಾಲ ; ನಿಯಮಕ್ಕೆ ಸರಿಯಾಗಿ ನಿನ್ನ ಪ್ರೀತಿಗೆ ತಕ್ಕ ಭಾರಿ ರೆಕ್ಕೆಗಳನ್ನು ಒಪ್ಪಿಸಬೇಕಾದ ಕಾಲ ; ದಾರಿಯಲಿ ಎದುರಾಗಿ ಬಂದರೂ ನೀ ನನ್ನ ಕಂಡರೂ...

ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ

ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ? ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ,...

ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ

ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ ನೀ ಪಡೆದೆ ಅವಳ ಎನ್ನುವುದಲ್ಲ ನನ್ನ ವ್ಯಥೆ ; ನನ್ನೆದೆಯ ಒಂದೆ ಸಮ ಕೊರೆಯುತ್ತಿರುವ ಗೂಢ ಅವಳು ನಿನ್ನನು ಪಡೆದುಕೊಂಡಳೆನ್ನುವ ಚಿಂತೆ. ಪ್ರಿಯ ವಂಚಕರೆ ನಿಮ್ಮ ಕ್ಷಮಿಸುವೆನು ನಾ...

ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು

ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ. ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು; ಚೆಲುವ, ಹಾಗೆಂದೆ ಆಕ್ರಮಿಸುವರು....

ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ

ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ ಮುಪ್ಪಾದ ತಂದೆ, ನಾ ವಿಧಿಯಸೂಯೆಗೆ ಸಿಕ್ಕು ವಿಕಲನಾದರು ನಿನ್ನ ಮೇಲ್ಮೆ ಯೋಗ್ಯತೆಗಳಿಗೆ ನೆಮ್ಮದಿಯ ತಾಳುವೆನು. ಸೌಂದರ್ಯ ಸಂಪತ್ತು ವಂಶ, ಧೀಶಕ್ತಿ - ಒಂದೇ ಇರಲಿ, ಕೂಡಿರಲಿ ಮೆರೆಯುತಿದೆ ತುತ್ತತುದಿ...