ಜೀವನದ ಮುಸ್ಸಂಜೆಯಲಿ ಜವಾಬ್ದಾರಿಗಳೆಲ್ಲವ ಕಳೆದು ನಾವೇ ನಾವಾಗಿರಬೇಕೆಂದು ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ ನಮ್ಮನ್ನು ನಾವು ಕಳಕೊಂಡಿದ್ದೆವು. ಎದುರಿಗಿದ್ದ ಮರುಭೂಮಿಯಲಿ ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು! ಪ್ರೀತಿಯ ಹಸಿರಿರಲಿಲ್ಲ...

ಅಂತರಂಗದಾಳದಲಿ ಮರೆಯಾಗಿ ನಿಂತಿದೆ ಒಂದು ಬಂಗಾರದ ಎಳೆ ಅದು ಆತ್ಮವಿಶ್ವಾಸದ ನೆಲೆ. ಅನುಭವದುರಿಯಲಿ ಬೆಂದು ಉಕ್ಕಿಹರಿದ ಲಾವಾರಸ ಗಟ್ಟಿಯಾದಾಗ ಪುಟಕ್ಕಿಟ್ಟ ಬಂಗಾರ, ಅದೇ ಜೀವನ ಸಾರ. ಅಂತರಂಗದಾಳದ ಬಂಗಾರದ ಎಳೆಯೊಳಗೆ ಬೆಚ್ಚನೆ ಮಲಗಿದೆ ಆತ್ಮವಿಶ್ವಾಸ...

ಜೀವನದಲ್ಲೇನಿದೆ ಎಲ್ಲಾ ಇದ್ದೂ ಒಂದು ಕ್ಷಣ ಮೈಮರೆತು ನಿಂತು ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ? ಹಸಿರು ಹೊದ್ದ ಮರದ ನೆರಳಲಿ ನಿಂತು ದನಕರು, ಕುರಿಮಂದೆ ಮೇಯುತ್ತಿರುವಷ್ಟು ದೂರದವರೆಗೆ ಕಣ್ಣು ಹಿಗ್ಗಿಸಿ ನೋಡಲು ಬಿ...

ಸುತ್ತಲೂ ನೆಲೆಸಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ನೋಡುವಾಗ ಹೆದರಿಕೆಯಾಗುತ್ತದೆ. ನಿರಾಸೆಯೂ ಆಗುತ್ತದೆ. ಸುತ್ತಲೂ ಕಂಡು ಬರುತ್ತಿರುವ ಹಿಂಸೆ ನಮ್ಮ ಜೀವಿಸುವ ಆಸ್ಥೆಯನ್ನೇ ಕಬಳಿಸುತ್ತಿದೆ. ನಾವೆತ್ತ ಸಾಗುತ್ತಿದ್ದೇವೆ ಎನ್ನುವ ಪ್ರಶ್ನೆ ...

ಸೀತೆಯ ವೈಭವೀಕರಿಸಿದರು ಅವಳ ಪತಿಭಕ್ತಿಗಾಗಿ ಎಲ್ಲೂ ವೈಭವೀಕರಿಸಲಿಲ್ಲ ಅವಳ ಧೀಃಶಕ್ತಿಗಾಗಿ ಪರಿತ್ಯಕ್ತ ಹೆಣ್ಣೊಬ್ಬಳು ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ ಅವಳ ಆತ್ಮಶಕ್ತಿಗಾಗಿ! ತರಲಿಲ್ಲವೇ ಗಾಂಧಾರಿ ಕುರುರಾಜನಲಿ ಮಾನಸಿಕ ಸಮಸ್ಥಿತಿ? ಉಕ್ಕಿಸಲಿಲ್ಲ...

ಸದಾ ಉತ್ಸವ ಜಗದೊಳಗೆ- ಉಳುವ, ಬಿತ್ತುವ, ಟಿಸಿಲೊಡೆಯುವ ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ! ಹಸಿರು ತೋರಣ, ಋತುಗಳ ಮೆರವಣಿಗೆ, ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ, ಸೂರ್‍ಯನ ಬಿಸಿ, ಚಂದಿರನ ತಂಪು ಹೇಗೆ ಸೃಷ್ಟಿಸಿದೆ ಇದನ್ನೆ...

ಹಕ್ಕಿಯೊಂದು ಹಾರುತ್ತಿತ್ತು. ಮೇಲೆ ಮೇಲೆ ಏರುತ್ತಿತ್ತು ಇಹವ ಮರೆತು ನಲಿಯುತ್ತಿತ್ತು ಸ್ವಚ್ಛಂದವಾಗಿ ತೇಲುತ್ತಿತ್ತು. ಗಿಡುಗನೊಂದು ನೋಡುತ್ತಿತ್ತು ಹಿಡಿಯಲೆಂದು ಹೊಂಚುತ್ತಿತ್ತು ಹಿಂದೆ ಹಿಂದೆ ಅಲೆಯುತ್ತಿತ್ತು ಮೇಲೆರಗಲು ಕಾಯುತ್ತಿತ್ತು. ಹಕ್ಕ...

ಜೀವನದಲ್ಲಿ ನಾವು ಎದುರಿಸುವ, ಅನುಭವಿಸುವ ಕಷ್ಟ ನಷ್ಟಗಳೇನೇ ಇರಲಿ ನಮ್ಮ ಪಾಲಿಗೆ ಬಂದುದನ್ನು ಸ್ವೀಕರಿಸಿ ಜೀವಿಸುವ ರೀತಿ ನಮ್ಮ ಆಯ್ಕೆಯದ್ದಾಗಿರುತ್ತದೆ. ಈ ಆಯ್ಕೆ ಮಾಡುವಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮ ಸಂಸ್ಕಾರ, ನಮ್ಮ ಮನಸ್ಸು, ನಮ್ಮ ಆತ್ಮ...

ಜೀವನವೆಂದರೆ ಹಾಗೀಗಲ್ಲ ಅದೊಂದು ಸುಂದರ ಕವಿತೆ. ದುಃಖ ದುಮ್ಮಾನ ಅರಿತೇ ಪ್ರೀತಿ ಪ್ರೇಮ ಒಸರುವ ಒರತೆ. ಜೀವನವೆಂದರೆ ಹಾಗೀಗಲ್ಲ ಅದೊಂದು ದೀರ್‍ಘ ಪ್ರಯಾಣ ಹುಟ್ಟಿನಿಂದ ಸಾವಿನವರೆಗೆ ನಮ್ಮ ನಿಮ್ಮೊಡನೆ ಸಹಪ್ರಯಾಣ. ಜೀವನವೆಂದರೆ ಹಾಗೀಗಲ್ಲ ಅದೊಂದು ಹ...

ಅಮರನಾದ ಅಚಲ ಹೈದರಾಬಾದಿನಲ್ಲಿ ಎಲ್ಲರೂ ಅನುರಾಧಳಲ್ಲೇ ಇಳಿದುಕೊಂಡಿದ್ದರು. ಪೂರ್ಣಿಮಾ ಎರಡು ದಿನಗಳಿಗೊಮ್ಮೆ ಬಂದು ಹೋಗುತ್ತಿದ್ದಳು. ರಾಮಕೃಷ್ಣಯ್ಯ ಸುಶೀಲಮ್ಮ ಇಬ್ಬರೂ ಈ ಲೋಕದ ಸಂಪರ್ಕಗಳನ್ನೆಲ್ಲಾ ಕಳಚಿಕೊಂಡಂತೆ ಇದ್ದರು. ಮಗನಿಲ್ಲದ ಲೋಕದಲ್ಲಿ ಅ...

1...678910