ಬಾ ಎನ್ನೆದೆಯ ಗುಡಿಯಲಿ ಬೆಳಗು

ಬಾ ಎನ್ನೆದೆಯ ಗುಡಿಯಲಿ ಬೆಳಗು ಗುರುವೆ ನೀ ಜ್ಯೋತಿಯಾಗಿ | ಆರದ ಜ್ಞಾನದ ದಿವ್ಯತೇಜವಾಗಿ|| ಕರುಣಿಸು ಸುಜ್ಞಾನವ ಹೊಡೆದೋಡಿಸು ಅಜ್ಞಾನವ| ಆನಂದವ ಕರುಣಿಸು ಅಂಧಕಾರದ ಕಣ್ಣೀರ ವರೆಸು| ಹರೆಸು ಮಗುವಂತೆನ್ನ ಕೈಹಿಡಿದು ನಡೆಸು|| ನನ್ನೆಲ್ಲಾ...

ಮೌನವೂ ಮಾತಾಡುತ್ತದೆ

ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ...

ಕಡಲುಕ್ಕದಿರು

ಕಡಲುಕ್ಕದಿರು ಬೆಂಕಿಯೆ ನೀ ಸೊಕ್ಕದಿರು ಗಿರಿಯೆ ನೀ ಜರಿಯದಿರು ನಮಗಿರುವುದಿದು ಒಂದೇ ಭೂಮಿ ಭುವನದ ಮಕುಟದಂಥ ಸುಂದರ ಭೂಮಿ ಜ್ವಾಲಾಮುಖಿಯೆ ನೀ ಉಗುಳದಿರು ಉಲ್ಕೆಯೆ ನೀ ಬೀಳದಿರು ಗಾಳಿಯೆ ನೀ ಮುಗಿಯದಿರು ಮಳೆಯೇ ನೀ...

ಶ್ರದ್ಧಾಂಜಲಿ

ಶಾಂತ ರಸವನ್ನು ರಸವೇ ಅಲ್ಲ ಅಂದರಂತೆ ಕೆಲ ಮೀಮಾಂಸಕರು ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು ಅಭಿನವಗುಪ್ತ ಆನಂದ ವರ್ಧನರು ಶಾಂತ ರಸ ಅನ್ನಿ ಶಾಂತಿಯ ಅರಸ ಅನ್ನಿ ಏನೆಂದರೂ ಅದೇ ಮಂದಸ್ಮಿತ ಹಸನ್ಮುಖ ಹುಡುಕು...

ಜಾತಿ ಮರ

ಎಲ್ಲಿದೆಯೋ ಬೇರು? ಚಿಗುರು ನೂರಾರು... ಯಾರು ಬಿತ್ತಿದರೋ... ಯಾರು ಬೆಳೆದರೋ... ಫಲವನ್ನಂತು ಉಣ್ಣುತಿರುವೆವು ಎಲ್ಲರೂ.... ಬೀಸಿ ಬಂದೊಮ್ಮೆ ಬಿರುಗಾಳಿ ಬುಡ ಕಡಿದು ಹೋದರೆ ಹೋಗಲಿ... ಕನಸಹುದೇ? ಹೂಂ.... ಏಳಿ ಎದ್ದೇಳಿ.... *****

ಇದು ಬರಿ ನಾಡಲ್ಲೋ…

ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ...|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು...

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ, ಘಾತಕ ಮೃಗೀಯ ವಂಚಕ ಹೇಯ ಎನಿಸುವುದು, ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ; ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ...

ಚೌಕಾಬಾರದಾಟ

ಹಗಲೆಲ್ಲ ದೃಶ್ಯಕಾವ್ಯ ಮುಖಾಮುಖಿ ಮಾತು ಚಲಾವಣೆ ಮನೆ ಸಂತೆಪೇಟೆ ರಾಜಕೀಯ ಕಾಡುಮೇಡು ಆಕಾಶ ಸಮುದ್ರದವರೆಗೆ ದುಡಿದು ಬೆವರಿಳಿಸಿದವರ ಅರೆಹೊಟ್ಟೆಮಾತು ಬಿರಿದ ಹೊಟ್ಟೆಯವರ ಭ್ರಷ್ಟಾಚಾರದ ಮಾತು ಹೃದಯಮಾತಿಗೆಲ್ಲಿ ದೃಶ್ಯಕಾವ್ಯ. ರಾತ್ರಿಗೆ ಕತ್ತಲೆಕಾವ್ಯ ರಾತ್ರಿರಾಣಿಯರ ಗೋಳಾಟದ ಕಥೆ...

ಆತ್ಮ ಮಿಲನ

ಆಕಾಶದ ನೀಲಿಯಲಿ ಅದ್ದಿದ ಬಟ್ಟೆ, ಕನಸುಗಳ ನೇಯ್ದು ಒಂದು ದಿವಸ, ಬದುಕಿನ ವಸಂತ ಅರಳಿದ ಬಿಸಿಲಿನ ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ. ಗಜ ಬಟ್ಟೆಯ ಜೋಳಿಗೆಯ ತುಂಬ, ಅವರಿವರ ಒಲವು ಮಾತು ಬಿರಿಸು,...

ಭಾರತ ಮಾತೆ

ಭಾರತ ಮಾತೆಯ ಮಕ್ಕಳು ನಾವು ಭಾರತೀಯರು ನಾವು ಭಾಗ್ಯದಯವಾಗಲಿ ಬೆಳಕಿನ ಕಿರಣ ಭಾರತೀಯರ ಜನಮನ ಒಂದೇ ಒಂದೇ ಎನ್ನುವೆವು ನಾವೆಲ್ಲ ಒಂದೇ ಎನ್ನುವೆವು || ಭಾ || ಮಣ್ಣಿನ ಮಕ್ಕಳು ನಾವೆ ನಾವು ಈ...