ಖುಷಿಯಾಗಿ ಕೂರೋಣ ಅಂದ್ಕೊಂಡರೆ

ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು.  ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ...

ಮೇಕಪ್

ಈ ಕೆರೆಯ ನೀರಲ್ಲಿ ಮುಖ ನೋಡಿಕೊಳ್ಳುತ್ತಾ ಮತ್ತೊಂದು ವರೆ ಬೆಳ್ಳಿ ಒಪ್ಪವನ್ನು ದಪ್ಪಗೆ ಹಚ್ಚಿ ಮೇಕಪ್ ಮಾಡಿಕೊಳ್ಳುತ್ತಾ ನಾಳೆಯ ಹೋಳಿ ಹುಣ್ಣಿಮೆಯ ಮೆಗಾ ಷೋಗೆ ತಯಾರಾಗುತ್ತಿದ್ದಾನೆ ಆಕಾಶದಲ್ಲೀಗ ಶಶಿ: ಇಂದು ಚತುರ್ದಶಿ. *****

ನಷ್ಟ ಪಾಡ್ಯದ ಚಂದ್ರ

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ಜಾಡ್ಯ...

ನಾವು

ಎಷ್ಟು ದಿನ ಕಳೆದರೂ ಅಷ್ಟೇ ಕರೆದಿಟ್ಟ ನೊರೆ ಹಾಲಿನಂತೆ ಹೊಚ್ಚ ಹೊಸದೆನಿಸುತ್ತದೆ ಮೈತುಂಬಿ ಹರಿವ ಹೊಳೆಮೇಲೆ ಹೊಳೆ ಹೊಳೆವ ಈ ಹುಣ್ಣಿಮೆಯ ಬೆಳದಿಂಗಳು; ಕೊಳೆಯುತ್ತಾ, ಸವೆಯುತ್ತಾ ಮುದಿಯಾಗಿ ಮಸಣದೆಡೆಗೆ ಹೆಜ್ಜೆಯಿಡುತ್ತಾ ಹೋಗುತ್ತೇವೆ ನಾವು ಕಳೆದಂತೆ...

ಸಾಗರ ಕನ್ಯೆ

ಓ ಸಾಗರ ಕನ್ಯೆ ಇದ್ದಕ್ಕಿದ್ದಂತೆ ಘೋರ ಹುಚ್ಚಿಯಂತೆ ಯಾಕೀ ರುದ್ರ ತಾಂಡವ ಸುನಾಮಿ ನೃತ್ಯವನ್ನಾಡಿಬಿಟ್ಟೆ ಕಣ್ಣಿಗೆ ಕಂಡ ಕೈಗೆ ಸಿಕ್ಕವರನ್ನೆಲ್ಲ ರಾಕ್ಷಸಿಯಂತೆ ನುಂಗಿ ನೊಣೆದುಬಿಟ್ಟೆ ಈ ಮನುಷ್ಯರು ಆಕಾಶದಿಂದ ನಿನಗೆ ಚಂದ್ರನನ್ನು ತಂದುಕೊಡಲಿಲ್ಲವೆಂದು ಇಷ್ಟೊಂದು...

ಅಮವಾಸ್ಯೆಯ ಮೊದಲು

ಮೂರು ನಾಲ್ಕು ದಿನದಿಂದ ಹೀಗೆ, ಅರ್ಧ ರಾತ್ರಿಯ ಮೇಲೆ ಯಾವಾಗಲೊ ಬಂದು ಸರಿಯಾಗಿ ಮುಖ ತೋರಿಸದೆ ಹಾಜರಿ ಹಾಕಿ ಹಾಗೇ ಹಾರಿ ಹೋಗಿ ಬಿಡುತ್ತಿದ್ದಾನೆ ಚಂದ್ರ, ಇದೊಂದು ಅವನ ಮಾಮೂಲು ತಮಾಷೆ, ನಾಳೆಯಂತೂ ಅಮಾವಾಸ್ಯೆ....