ಪಯಣ

ಯಾವುದೇ ಪಯಣ ಗೊತ್ತಿಲ್ಲ ಗುರಿಯಿಲ್ಲ ಆದಿಯೆಲ್ಲಿ? ಅಂತ್ಯವೆಲ್ಲಿ? ಸಾಗಿದೆ ತಿಳಿಯಲಾಗದ ಲೋಕಕೆ, ಮಾಯಾಲೋಕಕೆ ಬದುಕಿದು ಬರೀ ಬೆರಗು ಕಣ್ಣು ಕಟ್ಟು ಆಟದ ಮೆರಗು ಅರಿತವರಿಲ್ಲ ಸೃಷ್ಟಿಯ ಮೂಲ ನದೀ ಮೂಲ ಋಷಿ ಮೂಲ ಹಾಗೆಯೇ...

ಸಾವು

"ಸಾವು" ಪದವೇ ಭಯಂಕರ ಭೀಕರ ಎದೆ ನಡುಗಿಸುವ ಎರಡಕ್ಷರ ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ ಸಂಸಾರವೇ ತೊರೆದು ಎದ್ದ ಬಯಸುವವರಾರು...

ಮುಪ್ಪು

ಮಾನವನ ಮೂರನೇ ಹಂತವೇ ಮುಪ್ಪು ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು ಬಾಲ್ಯ ಕಳೆದು ಯೌವ್ವನ ಮಾಗಿದಂತೆ ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ ಮುಪ್ಪಿನ ಕಲ್ಪನೆಯೇ ಭೀಕರ ಊರಿಗೆ ದೂರ ಸಾವಿಗೆ ಹತ್ತಿರ ರಾಜ ಮಹಾರಾಜ...

ಯೌವ್ವನ

ಬಂದಾಗ ಯೌವ್ವನದ ಮತ್ತು ಮುಗ್ಧತೆ ಸ್ವಾತಂತ್ರ್ಯಕ್ಕೆ ಕಲ್ಲು ಬಿತ್ತು ನೋಡುವ ನೋಟಕೆ ಆಡುವ ಮಾತಿಗೆ ಅಂಕೆ ಹೊಸ್ತಿಲು ದಾಟದಂತೆ ಸೀಮಾರೇಖೆ ಹುಡುಗಾಟಕೆ ಹೊರನೋಟಕೆ ಹಾಕಿದರು ದೊಡ್ಡ ಪರದೆ ಪ್ರಾರಂಭ ತಪ್ಪು ಒಪ್ಪುಗಳ ತಗಾದೆ ಅತ್ತ...

ಬಾಲ್ಯ

ಅಂಗಳದೆ ಆಡುವ ಅನುಜರ ಕಂಡಾಗ ಅರಳುವ ಮನ ಕ್ಷಣದೊಳಗೆ ಮುದುಡಿದ ತಾವರೆ ಹಿಂದಡಿಯಿಟ್ಟ ನೆನಪಿನ ಬಂಡಿ ಮಸ್ತಿಷ್ಕದೊಳಗೆ ಅಡಗಿದ ರಸನಿಮಿಷಗಳ ಹುಂಡಿ ಅಮ್ಮನ ಲಾಲಿ ಹಾಡಿನಷ್ಟೇ ಮಧುರ ಬಾಲ್ಯದ ಸವಿನೆನಪುಗಳ ಹಂದರ ಅಪ್ಪನಿಗೆ ಸಡ್ಡು...

ಯೌವ್ವನದ ಹಾಡು

ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ...

ನಂದಾದೀಪ

ಹರಿದ ಸೀರೆಯಲಿ ನೂರೆಂಟು ತೇಪೆಯ ಚಿತ್ತಾರ ಅರಿಶಿನದ ಓಕುಳಿ ಕೆನ್ನೆಗೆ ಹಣೆಯಲಿ ಕಾಸಿನಗಲದ ಕುಂಕುಮದ ಸಿಂಗಾರ ಮುಡಿಯಲ್ಲಿ ಮಾಸದ ಹೂವಿನ ದಂಡೆ ಮುಗ್ಧ ಮಗುವಿನ ಮೊಗ ಅಲ್ಲಿ ನಗುವೆಂಬ ನಗ ಕಂಗಳಲ್ಲಿ ಬತ್ತದ ವಾತ್ಸಲ್ಯದ...

ವೈರಾಗ್ಯ ಜ್ಯೋತಿ

ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗುತ್ತಾರೆ, ಶಿಲೆಯಾಗುತ್ತಾರೆ ನಿನ್ನ ಅಂದ...

ಬಾಹುಬಲಿ

ಬಾಹುಬಲಿ ಕರುನಾಡ ಕಲಿ ಶೌರ್ಯ ಪರಾಕ್ರಮದ ಹುಲಿ ಭರತನ ಪರಾಜಯಿಸಿದ ವೀರಾಗ್ರಣಿ ಭಾರತ ಮಣ್ಣಲಿ ನಿಂತ ಹೊನ್ನಿನ ಗಣಿ ಸೌಂದರ್ಯ ಔನತ್ಯಗಳ ಮಕುಟಮಣಿ ವೀರ ರಣಾಂಗಣದೆ ಸೋದರನ ಸೋಲಿಸಿ ಆಸೆ ಆಕಾಂಕ್ಷೆಗಳೆಲ್ಲವನು ಕಡೆಗಣಿಸಿ ನಿಂತಿರುವೆ...

ನಿರೀಕ್ಷೆ

ನಾನು ವಸುಮತಿ ನಿನ್ನ ಶ್ರೀಮತಿ ದಿವ್ಯಾಲಂಕಾರಭೂಷಿತೆ ನಿನ್ನ ಹೃದಯ ವಿರಾಜಿತೆ ಸಸ್ಯಶ್ಯಾಮಲೆ, ನವರತ್ನ ಕೋಮಲೆ ಆಗಿದೆನಿಂದು ಅಂಗಾಂಗ ವಿಕಲೆ. ದಾನವನೊಬ್ಬನ ಕೈಯಿಂದ ಅಂದು ಉಳಿಸಿದೆ ವರಾಹರೂಪದೆ ಬಂದು ನೂರಾರು ದಾನವರಿಂದು ಎಳೆದಾಡುತಿಹರು ಬಳಿ ನಿಂದು...